No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Sunday, October 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯ: ಪರಿವರ್ತನೆಯೇ ಉದ್ದೇಶ, ಖ್ಯಾತಿ-ಪ್ರಚಾರವಲ್ಲ : ರಾಘವೇಶ್ವರ ಭಾರತೀ ಶ್ರೀ

kalpa News by kalpa News
September 28, 2026
in News, ಉತ್ತರ ಕನ್ನಡ
0
Gokarna Anna Brahma Chaturmasya Social Transformation
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರಕನ್ನಡ)  |

ಸಮಾಜದಲ್ಲಿ ಪರಿವರ್ತನೆ ತರುವುದೇ ಈ ಬಾರಿಯ ಚಾತುರ್ಮಾಸ್ಯದ (Chatuamasya) ಮುಖ್ಯ ಉದ್ದೇಶವಾಗಿತ್ತು. ಖ್ಯಾತಿ ಅಥವಾ ಪ್ರಚಾರ ನಮ್ಮ ಗುರಿಯಲ್ಲ. ಪ್ರವಚನಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾದರೆ ಅದರ ಪ್ರಯೋಜನ ಇಡೀ ಪ್ರಪಂಚಕ್ಕೆ ದೊರೆಯಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ (Gokarna) ಹೇಳಿದರು.

ಗೋಕರ್ಣದ ಮೂಲಮಠದಲ್ಲಿ ನಡೆದ ‘ಅನ್ನಂ ಬ್ರಹ್ಮ’ ಮಹಾಸಮಾರೋಪ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆಹಾರ ಪದ್ಧತಿ, ಪಾರಂಪರಿಕ ಜೀವನಶೈಲಿ ಹಾಗೂ ಆಹಾರದ ಕುರಿತಾದ ಭಾರತೀಯ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯದಲ್ಲಿ ನಿರಂತರವಾಗಿ ಪ್ರವಚನ ಸರಣಿಯನ್ನು ನಡೆಸಲಾಗಿದೆ ಎಂದು ಹೇಳಿದರು.

ಆಹಾರದ ಕುರಿತು ನಿರಂತರ ಚಿಂತನ-ಮಂಥನ

ಯಾವುದೇ ಮಠವು ಎರಡು ತಿಂಗಳ ಚಾತುರ್ಮಾಸ್ಯವನ್ನು ಆಹಾರದ ಕುರಿತಾದ ವಿಚಾರಗಳಿಗೆ ಮೀಸಲಿಡುವುದು ಸುಲಭದ ವಿಚಾರವಲ್ಲ. ಆದರೆ ರಾಮಚಂದ್ರಾಪುರ ಮಠದಲ್ಲಿ ಯಾವುದೇ ‘ಮಸಾಲೆ’ ಇಲ್ಲದ, ಪಾರಂಪರಿಕ ಚಿಂತನೆಯ ಆಧಾರದ ಮೇಲೆ ಆಹಾರದ ಕುರಿತು ನಿರಂತರ ಪ್ರವಚನ ಸರಣಿ ನಡೆದಿದೆ. ಆಹಾರದ ಕುರಿತಾಗಿ ಇಷ್ಟು ವ್ಯಾಪಕವಾದ ಚಿಂತನ-ಮಂಥನ ನಡೆದಿರುವುದು ಒಂದು ದಾಖಲೆಯಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

dk shivakumar led karnataka government 100 days celebration

ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿ ನಾಡಿನಾದ್ಯಂತ ತಲುಪಿದೆ. ಪುಟ್ಟ ಮಕ್ಕಳಿಂದ ಹಿಡಿದು ವಿವಿಧ ವಯೋಮಾನದ ಜನರ ಮೇಲೂ ಪ್ರವಚನದ ಪರಿಣಾಮ ಕಂಡುಬರುತ್ತಿದೆ. ಸಮಾಜದ ವಿವಿಧ ಭಾಗಗಳಿಂದ ಪ್ರವಚನ ಸರಣಿಯ ಕುರಿತು ಪ್ರತಿಕ್ರಿಯೆಗಳು ಬಂದಿದ್ದು, ಜನರ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆಯ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.

ಈ ಪ್ರವಚನ ಸರಣಿ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಕೆಲ ದಿನಗಳ ಬಳಿಕ ಮತ್ತೆ ಮುಂದುವರಿಯಲಿದ್ದು, ಆಹಾರದ ಕುರಿತು ಸರಿಯಾದ ಮತ್ತು ತಪ್ಪಾದ ಕ್ರಮಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಕಾರ್ಯ ಮುಂದುವರಿಯಲಿದೆ ಎಂದು ಶ್ರೀಗಳು ತಿಳಿಸಿದರು.

ಪಾರಂಪರಿಕ ಜೀವನಶೈಲಿಯತ್ತ ಮರಳುವ ಅಗತ್ಯ

ಒಳಿತಿಗೆ ಕೆಡುಕಿನ ವಿರೋಧ ಸಾಮಾನ್ಯ. ಮಠವನ್ನು ಕಳೆದ ಕೆಲ ವರ್ಷಗಳಿಂದ ವಿರೋಧಿಸುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಸುಮಾರು ₹50 ಸಾವಿರ ಮೌಲ್ಯದ ತಾಮ್ರ ಹಾಗೂ ಹಿತ್ತಾಳೆ ಪಾತ್ರೆಗಳನ್ನು ಹೊಸದಾಗಿ ಖರೀದಿಸಿರುವ ಮಾಹಿತಿ ಪಾತ್ರೆ ಅಂಗಡಿಯಿಂದಲೇ ಬಂದಿದೆ ಎಂದು ಶ್ರೀಗಳು ಉದಾಹರಿಸಿದರು. ಇದು ಪ್ರವಚನದ ಪ್ರಭಾವಕ್ಕೆ ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಪಾರಂಪರಿಕ ಪಾತ್ರೆಗಳನ್ನು ಬಳಸಿ, ನಮ್ಮ ಪರಂಪರೆ ಸೂಚಿಸಿರುವ ರೀತಿಯಲ್ಲಿ ಆಹಾರವನ್ನು ಸ್ವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಆರೋಗ್ಯಕರ ಮತ್ತು ಸಾತ್ವಿಕ ಜೀವನಶೈಲಿ ರೂಪುಗೊಂಡು, ಜನರು ಸರಿದಾರಿಯಲ್ಲಿ ಸಾಗಬೇಕು ಎಂಬುದೇ ನಮ್ಮ ಆಶಯ ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.PES Shivamogga

‘ಆಹಾರದ ವಿಚಾರದಲ್ಲಿ ನಡೆದ ಕ್ರಾಂತಿ’

ಖ್ಯಾತ ಆಯುರ್ವೇದ ತಜ್ಞರು ಹಾಗೂ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಒಂದು ನಿರ್ದಿಷ್ಟ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಜನಜಾಗೃತಿಯ ಮೂಲಕ ಚಾತುರ್ಮಾಸ್ಯ ಆಚರಿಸುವ ಪರಂಪರೆ ವಿಶಿಷ್ಟವಾಗಿದೆ ಎಂದು ಹೇಳಿದರು.

ಆಹಾರದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಇಷ್ಟು ವಿವರವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿರುವುದು ಅಪರೂಪ. ರಾಮಚಂದ್ರಾಪುರ ಮಠದ ಶ್ರೀಗಳು ಆಹಾರದ ಕುರಿತು ನಡೆಸಿದ ಈ ಪ್ರವಚನ ಸರಣಿಯನ್ನು ಆಹಾರದ ವಿಚಾರದಲ್ಲಿ ನಡೆದ ಕ್ರಾಂತಿ ಎಂದು ಅವರು ಬಣ್ಣಿಸಿದರು.

ಆಹಾರದ ಕುರಿತಾಗಿ ಆಧುನಿಕ ವಿಜ್ಞಾನದ ಸಂಶೋಧನೆ ಇನ್ನೂ ಸೀಮಿತವಾಗಿದೆ. ಪಾಶ್ಚಾತ್ಯ ಜಗತ್ತಿಗೆ ತುಪ್ಪದಂತಹ ಅದ್ಭುತ ಆಹಾರ ಪದಾರ್ಥದ ಮಹತ್ವದ ಕುರಿತು ಸಾಕಷ್ಟು ಅರಿವು ಇಲ್ಲ. ಆಧುನಿಕ ವಿಜ್ಞಾನ ಬಹುತೇಕ ಆಹಾರದ ಗುಣಮಟ್ಟಕ್ಕಿಂತ ಕ್ಯಾಲೊರಿಗಳ ಲೆಕ್ಕಾಚಾರದ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಡಾ. ಗಿರಿಧರ ಕಜೆ ಅಭಿಪ್ರಾಯಪಟ್ಟರು.Kalahamsa Infotech private limited

ಪ್ರಸ್ತುತ ಸಮಾಜದಲ್ಲಿ ‘ಪ್ರೋಟೀನ್’ ಎಂಬ ಪದದ ಹಿಂದೆ ಅತಿಯಾಗಿ ಓಡುತ್ತಿರುವ ಪ್ರವೃತ್ತಿ ಕಂಡುಬರುತ್ತಿದೆ. ಪಾಶ್ಚಾತ್ಯ ಆಹಾರ ಪದ್ಧತಿಯ ಪ್ರಭಾವದಿಂದ ವಿಚಲಿತರಾಗದೆ, ನಮ್ಮ ಪಾರಂಪರಿಕ ಜ್ಞಾನ ಹಾಗೂ ಆಹಾರ ಪದ್ಧತಿಯನ್ನು ಅರ್ಥಮಾಡಿಕೊಂಡು, ಶ್ರೀಗಳು ಪ್ರವಚನದಲ್ಲಿ ನೀಡಿರುವ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಅವರು ಕರೆ ನೀಡಿದರು.

Gokarna : ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರ ಭಾಗವಹಿಸುವಿಕೆ

ಚಾತುರ್ಮಾಸ್ಯದ ಅವಲೋಕನವನ್ನು ಮಂಡಿಸಿದ ಶ್ರೀಮಠದ ಆಡಳಿತಾಧಿಕಾರಿ ಸಂತೋಷ ಹೆಗಡೆ, ಈ ಅವಧಿಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಚಾತುರ್ಮಾಸ್ಯದ ಸಂದರ್ಭದಲ್ಲಿ 300ಕ್ಕೂ ಅಧಿಕ ಪಾರಂಪರಿಕ ಖಾದ್ಯ ವೈವಿಧ್ಯಗಳನ್ನು ಪರಿಚಯಿಸಲಾಗಿದ್ದು, 3,000ಕ್ಕೂ ಅಧಿಕ ಕಾರ್ಯಕರ್ತರು ನೇರವಾಗಿ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ‘ಅನ್ನ ಬ್ರಹ್ಮ’ನ ಆರಾಧನೆಗಾಗಿ ₹1 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಸಮರ್ಪಿಸಲಾಗಿತ್ತು ಎಂದು ಅವರು ವಿವರಿಸಿದರು.

ಚಾತುರ್ಮಾಸ್ಯದ ಯಶಸ್ಸಿಗೆ ಸಹಕರಿಸಿದ ಭಕ್ತರು, ಕಾರ್ಯಕರ್ತರು, ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಸಂತೋಷ ಹೆಗಡೆ ಕೃತಜ್ಞತೆ ಸಲ್ಲಿಸಿದರು.

Also Read>> ದೇಶದ ಮೊದಲ LNG–ಡೀಸೆಲ್ ಡ್ಯುಯಲ್-ಇಂಧನ ರೈಲಿಗೆ ಅಮಿತ್‌ ಶಾ ಚಾಲನೆ: ಎಷ್ಟು ಡೀಸೆಲ್ ಉಳಿತಾಯ?

‘ಅನ್ನಂ ಬ್ರಹ್ಮ–ಪೂರ್ವರಂಗ’ ಪುಸ್ತಕ ಲೋಕಾರ್ಪಣೆ

ಚಾತುರ್ಮಾಸ್ಯದ ಮೊದಲ ಎಂಟು ದಿನಗಳಲ್ಲಿ ನಡೆದ ಪ್ರವಚನಗಳ ಅಕ್ಷರರೂಪವನ್ನು ‘ಅನ್ನಂ ಬ್ರಹ್ಮ–ಪೂರ್ವರಂಗ’ ಎಂಬ ಪುಸ್ತಕವಾಗಿ ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಲೋಕಾರ್ಪಣೆಗೊಳಿಸಿದರು.

ಚಾತುರ್ಮಾಸ್ಯದ ಸಂದರ್ಭದಲ್ಲಿ ನಡೆದ ಪ್ರವಚನಗಳು ಹಾಗೂ ಆಹಾರದ ಕುರಿತಾದ ಚಿಂತನ-ಮಂಥನವನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ಈ ಪುಸ್ತಕ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಇ. ಕಾಂತೇಶ್ ಹಾಗೂ ಕುಟುಂಬದವರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.

ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಶಾಸನ ತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ನಾರಾಯಣ ಭಟ್ ಹಾರಕೆರೆ, ರಾಮಚಂದ್ರ ಕೆಕ್ಕಾರ, ಪ್ರವೀಣ್ ಭೀಮನಕೊಣೆ, ತಿಮ್ಮಪ್ಪ ಗುಡ್ಡೆದಿಂಬ, ರಾಘವೇಂದ್ರ ಮಧ್ಯಸ್ಥ, ಈಶ್ವರಿ ಬೇರ್ಕಡವು, ದೀಪಕ ಹೆಗಡೆ ಗೋಳಿಕೈ ಸೇರಿದಂತೆ ಹಲವು ಗಣ್ಯರು, ಭಕ್ತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಆಹಾರವನ್ನು ಕೇವಲ ಹೊಟ್ಟೆ ತುಂಬಿಸುವ ವಸ್ತುವಾಗಿ ನೋಡದೆ, ಆರೋಗ್ಯ, ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಜೀವನದೊಂದಿಗೆ ಬೆಸೆದುಕೊಂಡಿರುವ ಮಹತ್ವದ ಅಂಶವಾಗಿ ಪರಿಗಣಿಸುವ ಕುರಿತು ಜಾಗೃತಿ ಮೂಡಿಸುವ ಮೂಲಕ ‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯಕ್ಕೆ ಸಮಾರೋಪ ಕಂಡುಬಂತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

Christ King

Kalpa News Advertising Disclaimer

Tags: ChatuamasyaGokarnaಗೋಕರ್ಣಚಾತುರ್ಮಾಸ್ಯಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಶ್ರೀರಾಮಚಂದ್ರಾಪುರ ಮಠ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ರಸ್ತೆ ಪರಿಶೀಲನೆ ವೇಳೆ ಯುವಕನಿಗೆ ಕಪಾಳಮೋಕ್ಷ ಆರೋಪ; ದೆಹಲಿ ಸಚಿವ ಪರ್ವೇಶ್ ವರ್ಮಾ ವಿರುದ್ಧ ದೂರು

Next Post

ಬೆಂಗಳೂರು: “ನೃತ್ಯಪ್ರಭಾ” ಮೂಲಕ ಮಿಂಚಿದ ನೃತ್ಯ ನೀರಾಜನ

kalpa News

kalpa News

Next Post
Bengaluru nrutyaprabha neerajan 14 Bharatanatya Program

ಬೆಂಗಳೂರು: “ನೃತ್ಯಪ್ರಭಾ” ಮೂಲಕ ಮಿಂಚಿದ ನೃತ್ಯ ನೀರಾಜನ

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL