Friday, July 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಧರ್ಮ, ವೇದಸಂರಕ್ಷಣೆಗೆ ಮಠಗಳು ಸಂಘಟಿತವಾಗಲಿ: ಕಂಚಿ ಶ್ರೀ ಆಶಯ

ಮೂವರು ಶಂಕರ ಪೀಠಾಧ್ಯಕ್ಷರ ಸಾನ್ನಿಧ್ಯದ ಬೃಹತ್ ಧರ್ಮಸಭೆ- ಕಾಂಚಿ, ರಾಮಚಂದ್ರಾಪುರ, ಶಕಟಪುರ ಸ್ವಾಮೀಜಿ ಭಾಗಿ

November 26, 2024
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಧರ್ಮ ಮತ್ತು ವೇದ ಸಂರಕ್ಷಣೆಗಾಗಿ ಎಲ್ಲ ಮಠಗಳು ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಕಂಚಿ ಶ್ರೀ ಕಾಮಕೋಟಿ ಪೀಠಾಧ್ಯಕ್ಷ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ  #Shri Shankara Vijayendra Saraswathi Swamiji of Kanchi Kamakoti Peeta ಸಲಹೆ ಮಾಡಿದರು.

ತೀರ್ಥಹಳ್ಳಿಯ ಶ್ರೀರಾಮಚಂದ್ರಾಪುರ ಮಠದಲ್ಲಿ ಶಂಕರಪೀಠದ ಮೂವರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀರಾಮಚಂದ್ರಾಪುರ ಮಠಾಧ್ಯಕ್ಷ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಮತ್ತು ಶಕಟಪುರಿ ಬದರೀವಿದ್ಯಾಪೀಠದ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿವರು ಸಾನ್ನಿಧ್ಯ ವಹಿಸಿದ್ದರು. ಶಂಕರಪೀಠಗಳೆಲ್ಲ ಒಂದಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮೂರರ ಬದಲು ಶಂಕರಪೀಠದ 30 ಯತಿಗಳನ್ನು ಸೇರಿಸುವ ಕಾಯ್ ಆಗಲಿ ಎಂದು ಅವರು ಆಶಿಸಿದರು.

“ರಾಮಚಂದ್ರಾಪುರ ಮಠ ಬೃಹತ್-ಮಹತ್ ಕಾರ್ಯಗಳನ್ನು ಮಾಡುತ್ತಿದೆ. ಜೀವ-ಜೀವನೋದ್ಧಾರಕ್ಕೆ ಪೂರಕವಾಗುವಂತೆ, ಚಿಕ್ಕಮಕ್ಕಳೂ ಧಾರ್ಮಿಕ ಆಸಕ್ತಿ ಬೆಳೆಸಿಕೊಂಡು ಎಳವೆಯಲ್ಲೇ ಮಠಕ್ಕೆ ಬರುವಂತಾಗಬೇಕು. ಜೀವ- ಜೀವಗಳ ನಡುವೆ, ಮಠ-ಮಠಗಳ ನಡುವೆ ಅದ್ವೈತ ಏರ್ಪಡಬೇಕು. ದೇವತೆ ಹಾಗೂ ಮನುಷ್ಯರ ನಡುವೆ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಈ ಭಾಗದಲ್ಲಿ ರಾಮಚಂದ್ರಾಪುರ ಮಠ ನೇತೃತ್ವದಲ್ಲಿ ಸೇವೆಗಳು ನಡೆಯಲಿ ಎಂದು ಕರೆ ನೀಡಿದರು.
ಸಮಾಜ ವಿಕಾಸವಾಗುವ ನಿಟ್ಟಿನಲ್ಲಿ ಭವನ ಹಾಗೂ ಭಾವನೆಗಳೆರಡೂ ಅಗತ್ಯ. ಧರ್ಮ ನಮ್ಮ ದೇಶಕ್ಕೆ ಮುಖ್ಯ. ಪ್ರತಿಯೊಬ್ಬರಿಗೆ ಧರ್ಮ ಅನಿವಾರ್ಯ. ವೇದ ಸಂರಕ್ಷಣೆ ಮೂಲಕ ಇದನ್ನು ಸಾಧಿಸಬೇಕು. ಸನಾತನ ಸಂಸ್ಕøತಿಯಲ್ಲಿ ದೇವರೇ ವೇದಸಂರಕ್ಷಣೆಗಾಗಿ ಅವತಾರವೆತ್ತಿ ಬಂದಿದ್ದಾನೆ. ವೇದಸಂರಕ್ಷಣೆ ಘೋಷಣೆಗಳಿಂದ ಸಾಧ್ಯವಿಲ್ಲ. ಆಚಾರ, ಅನುಷ್ಠಾನ, ಅಭಿಮಾನದ ಮೂಲಕ ಈ ಕಾರ್ಯ ನಡೆಯಬೇಕು. ಆಹಾರ ಶುದ್ಧಿಯಿಂದ ದೇಹಶುದ್ಧಿ. ಈ ಭಾವನೆಯನ್ನು ಸಮಾಜದಲ್ಲಿ ಬಿತ್ತಬೇಕು ಎಂದು ಸೂಚಿಸಿದರು.

ನಮಗೆ ರಾಜಕೀಯವಾಗಿ ಸ್ವಾತಂತ್ರ್ಯ ಸಿಕ್ಕರೂ ಧರ್ಮದ ವಿಚಾರದಲ್ಲಿ ಸ್ವಾತಂತ್ರ್ಯ ಅಗತ್ಯ. ಸಂಸಾರ ಬಂಧನದಿಂದ ಮುಕ್ತಿಪಡೆಯುವುದೇ ಧರ್ಮಸ್ವಾತಂತ್ರ್ಯ. ಜೀವನ್ಮುಕ್ತಿಗಾಗಿ ಇರುವ ಈ ಸಾಧನವನ್ನು ಸಂಸಾರದ ಜೀವಿತಾವಧಿಯಲ್ಲೇ ಸಾಧಿಸುವುದು ನಮ್ಮ ಧ್ಯೇಯ ಹಾಗೂ ಧರ್ಮದ ಗುರಿ. ಸನಾತನ ಧರ್ಮ, ವೇದ, ಶಾಸ್ತ್ರ, ಪುರಾಣ, ಸಂಗೀತ, ಸಾಹಿತ್ಯಗಳ ರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನಿಷ್ಠ ಪ್ರತಿದಿನವೂ ಧ್ಯಾನ, ಜಪ, ಪೂಜೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡುವ ಸಮನ್ವಯಕಾರರ ಪಾತ್ರವನ್ನು ಬ್ರಾಹ್ಮಣ ಸಮುದಾಯ ನಿರ್ವಹಿಸಬೇಕು. ಬ್ರಾಹ್ಮಣರು ಸಶಕ್ತರಾಗಿ ಈ ಕಾರ್ಯ ಮಾಡಬೇಕು. ಪ್ರತಿ ಗ್ರಾಮಕ್ಕೆ ಕನಿಷ್ಠ ಒಬ್ಬ ಇಂಥ ಮಾರ್ಗದರ್ಶಕರ ಅಗತ್ಯವಿದೆ. ವೇದಗಳು ಎಂದಿಗೂ ಸ್ವಂತಕ್ಕಾಗಿ ಇಲ್ಲ; ಸಮಷ್ಟಿ ಹಿತವೇ ಅವುಗಳ ಧ್ಯೇಯ. ಬಾಹ್ಯ ಮತ್ತು ಆಧ್ಯಾತ್ಮಿಕ ಸಾಧನೆಗಳಿಗೆ ಇದು ಮಾರ್ಗದರ್ಶಿ ತತ್ವ ಎಂದು ವಿಶ್ಲೇಷಿಸಿದರು.

“ಸ್ವಚ್ಛಭಾರತ ಆಧುನಿಕ ಪರಿಕಲ್ಪನೆಯಾದರೆ ನೀರನ್ನು ಅಮೃತಕ್ಕೆ ಹೋಲಿಸಿ ನದಿಗಳ ಸಂರಕ್ಷಣೆಯ ಮಹತ್ವವನ್ನು ವೇದಗಳಲ್ಲೇ ಸಾರಿಹೇಳಲಾಗಿದೆ. ಮೃತ್ತಿಕೆ ನಮಗೆ ಪುಷ್ಟಿ ನೀಡುವಂಥದ್ದು. ರಸಗೊಬ್ಬರದ ವಿವೇಚನಾರಹಿತ ಬಳಕೆಯಿಂದ ಮಣ್ಣು ಇಂದು ಸಾರ ಕಳೆದುಕೊಂಡಿದೆ. ಭೂಸುರರಾಗಿ ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಹವ್ಯಕ ಕುಟುಂಬಗಳು ಭೂಮಿಗೆ ಪುಷ್ಟಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಾಘವೇಶ್ವರ ಭಾರತೀಮಹಾಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮರಕ್ಷಣೆ ಮತ್ತು ವೇದರಕ್ಷಣೆಯ ಕಾರ್ಯದಲ್ಲಿ ಕಂಚಿ ಮಠದ ಸಾಧನೆ ಅಮೋಘ. ವೇದಗಳು ಇಂದು ದೇಶದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಂಚಿಮಠ ಕಾರಣ. ಕಂಚಿಮಠದ ವೇದಸಂರಕ್ಷಣೆ ಕಾರ್ಯ ಕರ್ನಾಟಕಕ್ಕೂ ವಿಸ್ತರಿಸಬೇಕು; ಇದಕ್ಕೆ ಕಂಚಿಮಠದ ಸಹಯೋಗ ಬೇಕು ಎಂದು ಕೋರಿದರು.

Also read: ವಿವಿಧೆಡೆ ಕಳವು ಪ್ರಕರಣ | ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

“ಇಂದು ನಡೆದಿರುವ ಯತಿ ಸಮಾಗಮ ಸಮಾಜಕ್ಕೆ ದೊಡ್ಡ ಸಂದೇಶವನ್ನು ಕೊಡುವಂಥದ್ದು. ಶಂಕರತತ್ವದ ಮೂರು ಪ್ರಧಾನ ಪೀಠಗಳ ಸಮಾಗಮ ಇಂದಾಗಿದೆ. ಬಹುಶಃ ಇದು ಪವಿತ್ರ ತ್ರಿವೇಣಿ ಸಂಗಮ. ಧರ್ಮರಕ್ಷಣೆ ಕಾರ್ಯದಲ್ಲಿ ಎಲ್ಲ ಮಠಗಳು ಒಂದಾಗಿ ನಡೆಯುತ್ತವೆ ಎನ್ನುವುದನ್ನು ಇಂದಿನ ಸಮಾವೇಶ ಸಾರುತ್ತದೆ. ಮುಂದಿನ ದಿನಗಳಲ್ಲಿ ಮೂರು ಮಠಗಳು ಮೂವತ್ತು ಮಠಗಳ ಒಡಗೂಡಿ ಈ ಕಾರ್ಯಕ್ಕೆ ಟೊಂಕ ಕಟ್ಟುತ್ತವೇ” ಎಂದು ನುಡಿದರು.

ಆದಿಶಂಕರರ ತತ್ವಗಳ ಅಡಿಯಲ್ಲಿ ಸಮಾಜವನ್ನು ಕಟ್ಟುವ, ಸಮಾಜವನ್ನು ಉದ್ಧರಿಸುವ, ಸಮಾಜವನ್ನು ಮುನ್ನಡೆಸುವ ಕಾರ್ಯಕ್ಕೆ ಕಾಂಚಿ ಮಠದ ಸಹಯೋಗ ಬೇಕು. ಕಂಚಿಯಲ್ಲಿ ಆರಾಧಿಸ್ಪಡುವ ಕಾಮಾಕ್ಷಿ ಹಾಗೂ ನಮ್ಮ ಆರಾಧ್ಯದೈವವಾಗಿರುವ ರಾಮ ಬೇರೆಯಲ್ಲ; ಮಹಾತ್ರಿಪುರ ಸುಂದರಿಯ ಅನುಜ್ಞೆಯಂತೆ ದಶರಥ ಮಹಾರಾಜ ಕಾಂಚಿಕ್ಷೇತ್ರಕ್ಕೆ ಬಂದು ವಿಧ್ಯುಕ್ತವಾಗಿ ಉಪಾಸನೆ ಮಾಡಿದಾಗ ದೇವಿ ಅಶರೀರವಾಣಿಯಿಂದ ನನ್ನ ನಾಲ್ಕು ಅಂಶಗಳೇ ರಾಮ, ಲಕ್ಷ್ಮಣ, ಭರತ, ಶತ್ರುಘ್ನರಾಗಿ ಜನ್ಮ ತಳೆಯುತ್ತವೆ ಎಂದು ಹೇಳಿದ ಉಲ್ಲೇಖ ಲಲಿತೋಪಾಖ್ಯಾನದಲ್ಲಿದೆ. ಅಂತೆಯೇ ಶಕಟಪುರಿ ವಿದ್ಯಾಪೀಠ ಕೂಡಾ ಶ್ರೀಚಕ್ರದ ಉಪಾಸನೆ ಮಾಡುವಂಥದ್ದು. ಹೀಗೆ ಮೂರು ಪೀಠಗಳೂ ಒಂದೇ ಎಂದು ವಿಶ್ಲೇಷಿಸಿದರು.

ಜೀವ ಜೀವಗಳ, ಮಠಮಠಗಳ ಅದ್ವೈತವಾದಾಗ ಸಹಜವಾಗಿಯೇ ಸಮಾಜದಲ್ಲಿ ಕೂಡಾ ಇದನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಶಂಕರಪೀಠಗಳು ಒಂದಾಗಿ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದರು.

ಶಕಟಪುರಿ ವಿದ್ಯಾಪೀಠದ ಶ್ರೀಕೃಷ್ಣಾನಂದತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, “ಮನುಷ್ಯನಿಗೆ ಜೀವನವಿಧಾನವಿದೆ; ಪ್ರಾಣಿಗಳಿಗೆ ಯಾವುದೇ ವಿಧಿ ನಿಷೇಧ ಇಲ್ಲ. ಏಕೆಂದರೆ ಅವುಗಳಿಗೆ ಬುದ್ಧಿ, ವಿವೇಕ, ವಿಶ್ಲೇಷಣಾ ಶಕ್ತಿ ಇಲ್ಲ. ಅದೆಲ್ಲವನ್ನೂ ಮನುಷ್ಯನಿಗೆ ಕರುಣಿಸಿರುವ ದೇವರು ವಿಶೇಷ ಜವಾಬ್ದಾರಿಯನ್ನೂ ವಹಿಸಿದ್ದಾನೆ. ಭಗವಂತನ ಆದೇಶವೇ ವೇದ. ಇದರ ಸರಳ ರೂಪವೇ ಶಾಸ್ತ್ರ; ಅತಿಸರಳ ರೂಪವೇ ಪುರಾಣೇಹಿತಾಸ. ಇವೆಲ್ಲವನ್ನೂ ಒಟ್ಟಾಗಿ ಸಂಹಿತೆಗಳೆನ್ನುತ್ತೇವೆ. ಈ ಮೂರು ವರ್ಗಗಳನ್ನು ಕ್ರಮವಾಗಿ ಪ್ರಭುಸಂಹಿತೆ, ಮಿತ್ರಸಂಹಿತೆ ಹಾಗೂ ಕಾಂತಾಸಂಹಿತೆ ಎಂದು ಕರೆಯುತ್ತೇವೆ” ಎಂದು ವಿವರಿಸಿದರು.
ಆಧುನಿಕ ಜಗತ್ತಿನಲ್ಲಿ ಮೇಲ್ನೋಟಕ್ಕೆ ದುರ್ಜನರು ಮತ್ತು ಸಜ್ಜನರ ನಡುವಿನ ವ್ಯತ್ಯಾಸವನ್ನು ಅರಿಯುವುದು ಕಷ್ಟ. ಆದ್ದರಿಂದ ಸಜ್ಜನರು ದೇವರ ಸಹಾಯ, ಆಶೀರ್ವಾದಕ್ಕಾಗಿ ಭಕ್ತಿಯೆಂಬ ಮಾಲೆ ಧರಿಸಿ ಭಗವಂತನ ಉಪಾಸನೆಯ ಮೂಲಕ ಆತನ ಅನುಗ್ರಹ ಪಡೆಯಬೇಕು ಎಂದು ಸಲಹೆ ಮಾಡಿದರು.

ಜ್ಞಾನದಿಂದ ಮುಕ್ತಿ ಎನ್ನುವುದು ಶಂಕರತತ್ವದ ಸಾರ. ಆಚಾರ್ಯರ ದೃಷ್ಟಿಯನ್ನು ಆತ್ಮಾನುಸಂಧಾನವೇ ಭಕ್ತಿ. ಈ ಭಾವನೆಯನ್ನು ಜಾಗೃತಗೊಳಿಸುವ ದೃಷ್ಟಿಯಿಂದಲೇ ಆಚಾರ್ಯ ಭಗವತ್ಪಾದರು ಧರ್ಮಪೀಠಗಳ ಸ್ಥಾಪನೆ ಮಾಡಿ ವೇದ ಪ್ರಸಾರಕ್ಕೆ ಅಪ್ಪಣೆಯಿತ್ತರು. ಗೋಕರ್ಣ ಮಂಡಲಾಚಾರ್ಯರೆಂಬ ನಾಮಾಂಕಿತದೊಂದಿಗೆ ರಾಮಚಂದ್ರಾಪುರ ಮಠಸ್ಥಾಪನೆ ಮಾಡಿದರೆ, ಕಂಚಿಯಲ್ಲಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದರು. ಎರಡೂ ಮಠಗಳು ಶಂಕರರ ಜ್ಯೇಷ್ಠಶಿಷ್ಯರಾದ ಸುರೇಶ್ವರಾಚಾರ್ಯರ ಪರಂಪರೆಯಿಂದಲೇ ಬಂದವು ಎನ್ನುವುದು ಎರಡು ಮಠಗಳ ನಡುವಿನ ಸಾಮ್ಯತೆ ಎಂದು ವಿವರಿಸಿದರು.

ಮೂವತ್ತೊಂದು ವರ್ಷಗಳ ಹಿಂದೆ ಉಭಯ ಮಠಗಳ ಶ್ರೀಗಳು ಇಲ್ಲಿ ಸಮಾಗಮಗೊಂಡಿದ್ದರು. ಇದೀಗ ಮೂರು ಪೀಠಗಳು ಇಲ್ಲಿ ಸಮಾವೇಶಗೊಂಡಿವೆ. ಮುಂದಿನ ದಿನಗಳಲ್ಲಿ ಇಂಥ 30 ಶಂಕರ ಪೀಠಗಳು ಒಂದೆಡೆ ಸೇರಿ ಸಮಾಜ ರಕ್ಷಣೆ, ಧರ್ಮರಕ್ಷಣೆ ಕಾರ್ಯದಲ್ಲಿ ಒಗ್ಗೂಡಬೇಕು. ಮೂಲಾಮ್ನಾಯ ಮಠಗಳ ಪ್ರಬಲ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಲಿದೆ ಎಂದು ಭವಿಷ್ಯ ನುಡಿದರು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಮಠದ ವಿವಿಧ ವಿಭಾಗಗಳ ಪ್ರಮುಖರಾದ ಪ್ರವೀಣ ಭೀಮನಕೋಣೆ, ಶಾಂತಾರಾಮ ಹೆಗಡೆ, ಸ್ಥಳೀಯ ಮಠ ಸಮಿತಿಯ ಶಶಿಧರ್, ಕಾರ್ತೀಕ, ಕೃಷ್ಣಪ್ರಸಾದ್ ಎಡಪ್ಪಾಡಿ, ಪ್ರಕಾಶ್ ಬೇರಾಳ, ಮುರಳಿ ಗೀಜಗಾರ್, ಶ್ರೀನಾಥ ಸಾರಂಗ, ವಾದಿರಜ ಸಾಮಗ, ಶ್ರೀವತ್ಸ ಮುರಗೋಡು, ಆರ್.ಎಸ್.ಹೆಗಡೆ ಹರಗಿ, ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಾನಂದ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ವೇದವಿದ್ವಾಂಸರ ಸನ್ಮಾನ ಮತ್ತಿತರ ಕಾರ್ಯಕ್ರಮಗಳು ಮೂವರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆದವು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaShri Shankara Vijayendra Saraswathi Swamiji of Kanchi Kamakoti PeetaUttara Kannadaಕಂಚಿ ಶ್ರೀ ಕಾಮಕೋಟಿ ಪೀಠಾಧ್ಯಕ್ಷ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗೋಕರ್ಣ
Previous Post

ವಿವಿಧೆಡೆ ಕಳವು ಪ್ರಕರಣ | ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

Next Post

ಅನ್ನದಾತನಿಗೆ ಆರ್ಥಿಕ ಭದ್ರತೆ ಜೊತೆ ಸಾಮಾಜಿಕ ಮನ್ನಣೆ | 300 ರೈತರಿಗೆ ‘ಭೂಮಿ’ ಪ್ರಶಸ್ತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅನ್ನದಾತನಿಗೆ ಆರ್ಥಿಕ ಭದ್ರತೆ ಜೊತೆ ಸಾಮಾಜಿಕ ಮನ್ನಣೆ | 300 ರೈತರಿಗೆ 'ಭೂಮಿ' ಪ್ರಶಸ್ತಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025

ಭದ್ರಾ ಜಲಾಶಯ ಭರ್ತಿ ಸಾಧ್ಯತೆ | ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

July 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!