ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಪೂರ್ವಜನ್ಮದಲ್ಲಿ ಮಾಡಿದ ದುಷ್ಕರ್ಮಗಳ ಫಲವೇ ರೋಗ. ನಮ್ಮ ಪಾಪವನ್ನು ಪ್ರಕೃತಿ ಕೀಳುವ ಪ್ರಯತ್ನ ಮಾಡುತ್ತದೆ. ಅದು ರೋಗವಾಗಿ ನಮಗೆ ಬಾಧೆ ಕೊಡುತ್ತದೆ. ಇವುಗಳನ್ನು ಔಷಧಿ, ಅರ್ಚನೆ, ಹೋಮ, ಅರ್ಚನೆ ವಿಧಿಗಳಿಂದ ಗುಣಪಡಿಸಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾರ್ಚಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ #Raghaveshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 41ನೇ ದಿನವಾದ ಶುಕ್ರವಾರ ‘ಕಾಲ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ಅನುಗ್ರಹಿಸಿದರು.
ಜ್ಯೋತಿಷ್ಯಶಾಸ್ತ್ರದಲ್ಲಿ ಔಷಧ ತಯಾರಿಸುವ ವಿಧಾನವನ್ನು ಕೂಡಾ ವಿವರಿಸಲಾಗಿದೆ. ಗೃಹಗಳು ಪ್ರಕೃತಿ. ಇದರ ಮೂಲಕ ರೋಗನಿರ್ಣಯ ಮತ್ತು ಚಿಕಿತ್ಸಾ ನಿರ್ಣಯವನ್ನೂ ಮಾಡಬಹುದು. ಶಾಸ್ತ್ರವನ್ನು ಧರ್ಮೋಕ್ತವಾಗಿ ಬಳಸಬೇಕೇ ವಿನಹ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಸೂಚಿಸಿದರು.
ಶಾರೀರಿಕ ರೋಗಕ್ಕಿಂತ ಮಾನಸಿಕ ರೋಗಗಳಿಗೆ ಚಿಕಿತ್ಸೆ ಕಷ್ಟ. ಎಂಟು ಬಗೆಯ ಉನ್ಮಾದರೋಗಗಳಿವೆ. ಜ್ಞಾನಕಾರಕ ಗುರು. ಚಂದ್ರ ಪಾಪಕಾರಕ ಗ್ರಹಗಳ ಜತೆ ಸೇರಿದರೆ ಆ ವ್ಯಕ್ತಿಯ ಮನಸ್ಸಿನ ಸ್ವಾಸ್ಥ್ಯ ಕೆಡುತ್ತದೆ. ಉನ್ಮಾದರೋಗ ಲಕ್ಷಣ ರಾಮನ ಜಾತಕದಲ್ಲೂ ಕಾಣಸಿಗುತ್ತದೆ. ಸೀತಾಪಹರಣದ ಸಂದರ್ಭದಲ್ಲಿ ಸ್ವತಃ ರಾಮ ಉನ್ಮಾದಕ್ಕೊಳಗಾಗುತ್ತಾನೆ. ಸೀತೆಯ ಬಗೆಗೆ ರಾಮನಿಗೆ ಇದ್ದ ಪ್ರೀತಿಯನ್ನು ಇದು ಸೂಚಿಸುತ್ತದೆ. ಅರಣ್ಯಕಾಂಡದ 60ನೇ ಸರ್ಗದ ಶೀರ್ಷಿಕೆಯೇ ‘ರಾಮೋನ್ಮಾದಃ’ ಎಂದು ಬಣ್ಣಿಸಿದರು.
Also read: ಚೆಸ್ ಸ್ಪರ್ಧೆ | ಸತತ 6ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆ | ದಾಖಲೆ ಮೆರೆದ ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ
ಸೀತಾನ್ವೇಷಣೆಯ ತಾಪದಲ್ಲಿ ರಾಮ ಉನ್ಮತ್ತನಂತೆ ಕಂಡುಬಂದ ಬಗೆಯನ್ನು ವಾಲ್ಮೀಕಿ ವರ್ಣಿಸಿದ್ದಾರೆ. ಜಾತಕದಲ್ಲಿ ಗುರು ಹಾಗೂ ಕುಜ ಪರಮೋಚ್ಛ ಸ್ಥಾನದಲ್ಲಿ ಇರುವುದರಿಂದ ರಾಮನಿಗೆ ಉನ್ಮಾದ ಎನ್ನುವುದು ಕ್ಷಣಿಕವಾಯಿತು ಎಂದು ವಿಶ್ಲೇಷಿಸಿದರು.
ರೋಗಪ್ರಶ್ನದಲ್ಲಿ ಗ್ರಹಗತಿಗಳ ಮೂಲಕ ರೋಗ ಗುಣವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕೂಡಾ ನಿಖರವಾಗಿ ಹೇಳಬಹುದು. ಚರರಾಶಿಗಳು ಬಂದರೆ ರೋಗಗಳು ಗುಣಮುಖವಾಗುತ್ತವೆ ಎಂಬ ಅರ್ಥ. ಸ್ಥಿರರಾಶಿಗಳು ಬಂದರೆ ರೋಗ ಗುಣವಾಗುವುದಿಲ್ಲ ಎಂಬ ಅರ್ಥ ಎಂದು ಹೇಳಿದರು.
ಗ್ರಹಗಳ ಪೈಕಿ ಸೂರ್ಯ ಆರೋಗ್ಯಕಾರಕ. ಊಧ್ವಮುಖ ರಾಶಿಗಳು ಉತ್ತಮ ಫಲ ಕೊಡುವ ಸಾಮಥ್ರ್ಯ ಹೊಂದಿವೆ. ಲಗ್ನಾಧಿಪತಿಯ ಒಂಬತ್ತನೇ ಮನೆಯಲ್ಲಿ ಶುಭಗ್ರಹ ಬರಬೇಕು. ಆಗ ರೋಗ ಶೀಘ್ರ ಶಮನವಾಗುತ್ತದ ಎಂಬ ಅರ್ಥ. ಲಗ್ನಾಧಿಪತಿ ಒಂಬತ್ತನೇ ಮನೆಯಲ್ಲಿದ್ದರೆ ರೋಗ ಬರುವುದುಲ್ಲ ಎಂದು ವಿಶ್ಲೇಷಿಸಿದರು.
ಇಂದಿನ ಅನಾವರಣ ಬಗ್ಗೆ ಪ್ರಸ್ತಾವಿಸಿದ ಶ್ರೀಗಳು, ಪ್ರಾಣಿಗಳಲ್ಲಿಯೂ ಶೂರರು, ಧರ್ಮಕ್ಕೆ ರಕ್ಷಣೆ ಕೊಡುವವರು ಇದ್ದಾರೆ ಎಂದು ಲಕ್ಷ್ಮಣನನ್ನು ಕುರಿತು ರಾಮ, ಸೀತಾಪಹರಣ, ಜಟಾಯು ಮೋಕ್ಷದ ಬಳಿಕ ಆತನ ಬಗ್ಗೆ ಹೇಳುತ್ತಾನೆ. ಅಷ್ಟರ ಮಟ್ಟಿಗೆ ಜಟಾಯು ರಾಮನಿಗೆ ಪ್ರಿಯವಾಗಿತ್ತು. ರಾಮಚಂದ್ರಾಪುರ ಮಠದ ಆನೆ ರಾಮಭದ್ರ ಕೂಡಾ ಈ ಸಾಲಿಗೆ ಸೇರುತ್ತಾನೆ. ಆತನ ಸೇವೆ ಇಂದಿಗೂ ದಂತಸಿಂಹಾಸನದ ರೂಪದಲ್ಲಿ ಸಲ್ಲುತ್ತಿದೆ. ಅಷ್ಟಮ ರಾಘವೇಶ್ವರರು ಮಹಾಪ್ರಸ್ಥಾನಕ್ಕೆ ಹೊರಟ ಬಳಿಕ ಆಹಾರ ನೀರು ಬಿಟ್ಟು ಪ್ರಾಣ ಬಿಟ್ಟ ರಾಮಭದ್ರನ ಸೇವಾನಿಷ್ಠೆ ಬಣ್ಣಿಸಲಸದಳ ಎಂದು ಹೇಳಿದರು.
ಬೆಳ್ತಂಗಡಿ ಶಾಸಕ ಮತ್ತು ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಹರೀಶ್ ಪೂಂಜಾ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು. ರಾಮಭದ್ರನ ಮಹತಿಯ ಅನಾವರಣವನ್ನು ಶ್ರೀಪರಿವಾರದ ಅನಂತ ಅವರು ನೆರವೇರಿಸಿದರು. ಪಟ್ಟೇಗಾರ ಸಮಾಜದ ವತಿಯಿಂದ ಸುವರ್ಣಪಾದುಕಾ ಪೂಜೆ ನೆರವೇರಿತು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post