ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಚಿನ್ನದ ವ್ಯಾಪಾರಿಗಳ ಆಕರ್ಷಣೀಯ ತಾಣವಾಗಿದ್ದು, ಈ ಸಾಲಿಗೆ ಇನ್ನೊಂದು ಪ್ರತಿಷ್ಠಿತ ಶೋರೂಂ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿದೆ.
ಚಿನ್ನದ ವ್ಯಾಪಾರಿಯೊಬ್ಬರು ಪುತ್ತೂರಿಗೆ ಹೆಲಿಕಾಪ್ಟರ್’ನಲ್ಲಿ ಅಗಮಿಸಿ, ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ ಭೀಮಾ ಜ್ಯುವೆಲ್ಲರ್ಸ್ ನ ಎಂ.ಡಿ. ವಿಷ್ಣು ಶರ್ಮ ಭಟ್ ಮತ್ತು ಮ್ಯಾನೇಜರ್ ವಿರೇಂದ್ರ ವೆಂಕಟೇಶ್ ಪುತ್ತೂರು ಮೊಟ್ಟೆತ್ತಡ್ಕದ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ನಿಲ್ಲಿಸಿ ಬಳಿಕ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಪುತ್ತೂರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಉತ್ತಮ ಬೇಡಿಕೆಯಿದೆ ಎಂದು ತಿಳಿದಿರುವ ಹಲವಾರು ಜ್ಯುವೆಲ್ಲರಿ ಕಂಪನಿಗಳು ಪುತ್ತೂರಿನಲ್ಲಿ ಈಗಾಗಲೇ ತೆರೆದಿವೆ. ಈ ಸಾಲಿಗೆ ಭೀಮಾ ಜ್ಯುವೆಲರಿ ಸಹ ಸೇರುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಪುತ್ತೂರಿನಲ್ಲಿ ಹೆಲಿಕಾಪ್ಟರ್’ಗಳ ಹಾರಾಟ ಕಡಿಮೆಯೇ. ಪ್ರಮುಖ ರಾಜಕಾರಣಿ ಅಥವಾ ಮಂತ್ರಿಗಳು ಪುತ್ತೂರಿಗೆ ಆಗಮಿಸಿದರೂ, ಮಂಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಆಗಮಿಸುತ್ತಾರೆ. ಬಹುತೇಕ ಪುತ್ತೂರಿನ ನಗರಕ್ಕೆ ಹೆಲಿಕಾಪ್ಟರ್ ಬಂದಿದ್ದೇ ಇಲ್ಲ. ಇಂತಹ ಸಂದರ್ಭದಲ್ಲಿ ಹಿಂದೆ ಒಂದು ಕಾಲದಲ್ಲಿ ಹೆಲಿಕಾಪ್ಟರ್ ಒಂದು ಪುತ್ತೂರಿನ ಹಳ್ಳಿ-ಹಳ್ಳಿಗಳಲ್ಲಿ ಹಾರಾಡಿದ್ದನ್ನು ಈ ಭಾಗದ ಜನ ಇನ್ನೂ ಮರೆತಿಲ್ಲ.
ಆದರೆ ಈಗ ನವಂಬರ್ 13 ರಂದು ಹೆಲಿಕಾಪ್ಟರ್ ಒಂದು ಪುತ್ತೂರು ನಗರದ ಮೊಟ್ಟೆತ್ತಡ್ಕ ಎಂಬಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್’ನಲ್ಲಿ ಬಂದಿಳಿದಿತ್ತು. ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲಿನ ಜನರೂ ನೆರೆದಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















