ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋಲ್ಡ್ ಸ್ಮಗ್ಲಿಂಗ್ #GoldSmuggling ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ #RanyaRao ಕುರಿತಾಗಿ ಹಲವು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ.
ಈ ಕುರಿತಂತೆ ಡಿಆರ್’ಎ ಅಧಿಕಾರಿಗಳು ಹಲವು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದು ಅತಿ ದೊಡ್ಡ ಚಿನ್ನದ ಬೇಟೆ ಎಂದು ತಿಳಿಸಿದ್ದಾರೆ.
Also Read>> ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಬಲ ಹೆಚ್ಚಿಸಲು ಇದನ್ನು ಕಡ್ಡಾಯ ಮಾಡಿ | MLC ಡಾ.ಸರ್ಜಿ ಸಲಹೆ
ಚಿನ್ನ ತಂದಿದ್ದು ಹೇಗೆ?
ನಟಿ ರನ್ಯಾ ರಾವ್ ದುಬೈನಿಂದ ಬೆಂಗಳೂರಿನ #Bengaluru ವಿಮಾನ ನಿಲ್ದಾಣಕ್ಕೆ ಬರುವ ವೇಳೆ 1 ಕೆಜಿ ತೂಗುವ 14 ಗೋಲ್ಡ್ ಬಿಸ್ಕೇಟ್ #GoldBiscuit ತಂದಿದ್ದರು. ತೊಡೆಯ ಭಾಗಕ್ಕೆ 14 ಬಿಸ್ಕೇಟ್’ಗಳನ್ನು ಗಮ್ ಹಾಕಿ ಅಂಟಿಸಿಕೊಂಡಿದ್ದರು. ಬಳಿಕ ಟೇಪ್ ಅನ್ನು ಬಲವಾಗಿ ಸುತ್ತಿಕೊಂಡಿದ್ದರು.

ಇಷ್ಟೆಲ್ಲಾ ಖತರ‍್ನಾಕ್ ಜಾಗೃತೆ ವಹಿಸಿದ್ದರೂ, ಅನುಮಾನಗೊಂಡ ಡಿಆರ್’ಎ ಕಾರ್ಯಾಚರಣೆ ನಡೆಸಿ, ಸಂಚನ್ನು ಹೊರಗೆಳೆದಿದೆ.
ಎಷ್ಟು ಮೌಲ್ಯದ ಚಿನ್ನ?
ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಏರ್ ಪೋರ್ಟ್’ನಲ್ಲಿ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ, ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ, ಬೆಂಗಳೂರಿನ ಮನೆಯಲ್ಲಿ 2.67 ಕೋಟಿ ನಗದು ಹಣ ಸಿಕ್ಕಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post