ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಪ್ರತಿದಿನ ನೂತನ ವಿಶೇಷ ರೈಲು ಆಗಸ್ಟ್ 10ರಿಂದ ಸಂಚರಿಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, 07357/07358 ಸಂಖ್ಯೆಯ ವಿಶೇಷ ರೈಲು ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಪ್ರತಿದಿನ ಸಂಚರಿಲಿದೆ.ಸಮಯವೇನು?
07357 ಸಂಖ್ಯೆಯ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಮದ್ಯಾಹ್ನ 2.30ಕ್ಕೆ ಶಿವಮೊಗ್ಗ ತಲುಪಲಿದೆ. ಅದೇ ರೀತಿ 07358 ಸಂಖ್ಯೆಯ ರೈಲು ಪ್ರತಿದಿನ ಮದ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 9 ಗಂಟೆಗೆ ಯಶವಂತಪುರ ತಲುಪಲಿದೆ.ಎಲ್ಲೆಲ್ಲಿ ನಿಲುಗಡೆಯಿದೆ?
ನೂತನ ವಿಶೇಷ ರೈಲು ಯಶವಂತಪುರದಿಂದ ಹೊರಟು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಯಲ್ಲಿ ನಿಲುಗಡೆ ನೀಡಿ ಶಿವಮೊಗ್ಗ ತಲುಪಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post