ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಹೊಳಲ್ಕೆರೆ |
ಬೆಂಗಳೂರಿನಿಂದ ಹೊಳಲ್ಕೆರೆ #Holalkere ಹಾಗೂ ಅಮೃತಾಪುರಕ್ಕೆ ತೆರಳುವ ರೈಲು ಪ್ರಯಾಣಿಕರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಹೊಳಲ್ಕೆರೆ ಮತ್ತು ಅಮೃತಾಪುರ #Amrutapura ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರೆಸಲು ನಿರ್ಧರಿಸಿದೆ.
56519/56520 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು #Bengaluru – ಹೊಸಪೇಟೆ #Hospet – ಕೆಎಸ್’ಆರ್ ಬೆಂಗಳೂರು ಪ್ಯಾಸೆಂಜರ್ ರೈಲುಗಳನ್ನು ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲು ನಿರ್ಧರಿಸಿದೆ.
ಈ ತಾತ್ಕಾಲಿಕ ನಿಲುಗಡೆಯು ಜುಲೈ 18, 2025 ರಿಂದ ಜನವರಿ 18, 2026 ರವರೆಗೆ ಹಾಲಿ ವೇಳಾಪಟ್ಟಿಯಂತೆ ಜಾರಿಯಲ್ಲಿ ಇರುತ್ತದೆ ಎಂದು ಇಲಾಖೆ ತಿಳಿಸಿದೆ.

ಮೈಸೂರು ವಿಭಾಗದ ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಹಳಿ ನವೀಕರಣ ಕಾರ್ಯ ಕೈಗೊಂಡಿರುವುದರಿಂದ, ಜುಲೈ 16 ರಿಂದ ಆಗಸ್ಟ್ 8, 2025 ರವರೆಗೆ ವಿವಿಧ ದಿನಾಂಕಗಳಲ್ಲಿ ಈ ಕೆಳಗಿನ ರೈಲು ಸೇವೆಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
- ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
- ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಮಾರ್ಗಮಧ್ಯೆ 80 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
- ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಹೊರಡುವ ರೈಲು ಸಂಖ್ಯೆ 06583 ಕೆಎಸ್ಆರ್ ಬೆಂಗಳೂರು – ಹಾಸನ ಡೆಮು ರೈಲು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post