ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ-ಯಶವಂತಪುರದ ನಡುವೆ ಸಂಚರಿಸುತ್ತಿರುವ ಜನಶತಾಬ್ದಿ ರೈಲು ಸಂಚಾರವನ್ನು ಮೆಜೆಸ್ಟಿಕ್ ರೈಲು ನಿಲ್ದಾಣದವರೆಗೂ ವಿಸ್ತರಣೆ ಮಾಡಲಾಗಿದೆ.
ಪ್ರತಿನಿತ್ಯ ಸಂಚರಿಸುವ ಜನಶತಾಬ್ದಿ ರೈಲು ಬೆಂಗಳೂರಿನ ಯಶವಂತಪುರದವರೆಗೂ ಮಾತ್ರ ಚಲಿಸುತ್ತಿತ್ತು. ಇದರಿಂದಾಗಿ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಬೇರೆ ಊರು ಹಾಗೂ ರಾಜ್ಯಗಳ ರೈಲುಗಳಲ್ಲಿ ತೆರಳುವ ಮಲೆನಾಡಿನ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಸಂಸದ ಬಿ.ವೈ. ರಾಘವೇಂದ್ರ ಅವರು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈ ರೈಲು ಸಂಚಾರವನ್ನು ಮೆಜೆಸ್ಟಿಕ್ ವರೆಗೂ ವಿಸ್ತರಣೆ ಮಾಡಿಸಿದ್ದಾರೆ.
ಇದರಂತೆ ನಸುಕಿನ 5.15ಕ್ಕೆ ಶಿವಮೊಗ್ಗದಿಂದ ಹೊರಡುವ ಜನಶತಾಬ್ದಿ ರೈಲು 9.50ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ. ಅದೇ ರೀತಿ ಪ್ರತಿದಿನ ಸಂಜೆ 5.15ಕ್ಕೆ ಮೆಜೆಸ್ಟಿಕ್’ನಿಂದ ಹೊರಡುವ ರೈಲು ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















