ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿಯ ಎಸ್ಎಸ್ಎಲ್’ಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ (ಡಯಟ್)ನ ವತಿಯಿಂದ ರೇಡಿಯೋ ಪಾಠಗಳು ನಡೆಯುತ್ತಿದೆ. ಇದು ರೇಡಿಯೋ ಶಿವಮೊಗ್ಗ 90.8 ಎಫ್’ಎಂನಲ್ಲಿ ಮಾರ್ಚ್ 14ರಿಂದ 20ರವರೆಗೆ ಪ್ರತಿದಿನ ಸಂಜೆ 7-8 ಗಂಟೆಯವರೆಗೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದ ಸದುಪಯೋಗವನ್ನು ಎಸ್ಎಸ್ಎಲ್’ಸಿ ವ್ಯಾಸಂಗ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳೂ ಪಡೆಯಬಹುದಾಗಿದೆ.
ಪ್ರಸಾರ ವೇಳಾಪಟ್ಟಿ ಹೀಗಿದೆ
ಮಾರ್ಚ್ 14ರಂದು ಡಾ. ಶಂಕರ್ ಒತ್ತಡ ನಿರ್ವಹಣೆ/ ಪರೀಕ್ಷಾ ಭಯ ನಿವಾರಣೆ ಬಗ್ಗೆ, 15ರಂದು ಅಣ್ಣಪ್ಪ, ಮಹೇಶ್ ಆಲೂರು ಕನ್ನಡ, 16ರಂದು ಆಸೀಮುಲ್ಲಾ ಷರೀಫ್, ಹಾಗೂ ಇಮ್ರಾನ್ ಆಂಗ್ಲ ಭಾಷೆ ಬಗ್ಗೆ, 17ರಂದು ಶಿವಶಂಕರ್ ಹಾಗೂ ವಾಣಿ ಹಿಂದಿ ಬಗ್ಗೆ, 18ರಂದು ರಘು ಗಣಿತದ ಬಗ್ಗೆ, 19ರಂದು ವಿಜಯಕುಮಾರ್ ಹಾಗೂ ವಿಜಯಾನಂದರಾವ್ ವಿಜ್ಞಾನದ ಬಗ್ಗೆ, 20ರಂದು ಸಮಾಜ ವಿಜ್ಞಾನದ ಬಗ್ಗೆ ಡಾ. ಶಂಕರ್ ನಡೆಸಿದ ಪಾಠಗಳು ಪ್ರಸಾರವಾಗಲಿದೆ.

https://play.google.com/store/apps/details?id=com.atclabs.radioshivmogga
ಹೆಚ್ಚಿನ ಮಾಹಿತಿಗೆ (ಮೊ: 72591 76279) ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post