ಫೈಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್., ಅರವಿಂದ್ ಮೂರ್ತಿ ಟಿ.ಎಸ್., ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳ ಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರದ ಟೀಸರ್‌ನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ಬಿಡುಗಡೆಗೊಳಿಸಿದರು.
ನಂತರ ಚಿತ್ರದ ಬಗ್ಗೆ ಮಾತನಾಡಿದ ಗಣೇಶ್ ನನಗೆ ಥ್ರಿಲ್ಲರ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಈ ಸಿನಿಮಾ ಪ್ರೇಕ್ಷಕರಿಗೂ ಥ್ರಿಲ್ ಆಗಲಿ. ಹಾಗೂ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಹಣದ ಹಿಂದೆ ಹೋದ 4 ಹುಡುಗ ಕಥೆ ಇದಾಗಿದ್ದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಹೊಂದಿದೆ. ಇದೀಗ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಮಧುಸೂಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್‌ಸಮರ್ಥ ಸಂಗೀತ, ವಿಜಯ ಭರಮಸಾಗರ ಸಾಹಿತ್ಯ, ಕಿಶೋರ್ ಮೇಗಳ ಮನೆ – ಮಧುಸೂಧನ್ ಸಂಭಾಷಣೆ, ಕಿಟ್ಟು ಅರ್ಜುನ್ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ, ಶರಣ್ ಸಹ ನಿರ್ದೇಶನವಿದೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ, ದೀಪಕ್‌ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಭರತ್ ಇನ್ನು ಮುಂತಾದವರ ತಾರಾ ಬಳಗವಿದೆ.
Discussion about this post