ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಔರಂಗಾಬಾದ್: ಗೂಡ್ಸ್ ರೈಲೊಂದು ಹರಿದ ಪರಿಣಾಮ 16 ವಲಸೆ ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರೈಲ್ವೆ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಬೆಳಗ್ಗೆ ಜಲ್ನಾದಿಂದ ಔರಂಗಾಬಾದ್ ಕಡೆಗೆ ಗೂಡ್ಸ್ ರೈಲು ಹರಿದಿದ್ದು ಕನಿಷ್ಟ 15 ಜನ ಮೃತಪಟ್ಟಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಔರಂಗಾಬಾದ್ ಎಸ್’ಪಿ ಮೋಕ್ಷಡ ಪಾಟೀಲ್, ಛತ್ತೀಸ್ ಗಢ ಮೂಲಕ ವಲಸೆ ಕಾರ್ಮಿಕರು ಹಳಿ ಮೇಲೆ ಏಕೆ ಮಲಗಿದ್ದರು ಎಂಬ ಬಗ್ಗೆ ಮತ್ತು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಬಗ್ಗೆ ಇನ್ನೂ ಮಾಹಿತಿ ದೊರಕಬೇಕಿದೆ ಎಂದಿದ್ದಾರೆ.
ಮೃತಪಟ್ಟ ಎಲ್ಲಾ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲಾಕ್ ಡೌನ್ ಕಾರಣದಿಂದಾಗಿ ಈ ವಲಸೆ ಕಾರ್ಮಿಕರು ಛತ್ತಿಸ್’ಗಡ್’ಗೆ ಹಿಂದಿರುಗುತ್ತಿದ್ದರು. ರೈಲ್ವೆ ಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದ ಈ ಸಂದರ್ಭದಲ್ಲಿ ಕಾರ್ಮಿಕರು ಬಳಲಿಕೆಯಿಂದ ನಿದ್ರೆಗೆ ಜಾರಿದ್ದಾರೆ ಎಂದು ಹೇಳಲಾಗಿದೆ.
Get in Touch With Us info@kalpa.news Whatsapp: 9481252093
















