ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್’ಡೌನ್ ಘೋಷಣೆ ಮಾಡಿರುವ ಪರಿಣಾಮವಾಗಿ ತೊಂದರೆಗೆ ಒಳಗಾಗಿರುವ ಬಡ ಹಾಗೂ ವಲಸೆ ಕಾರ್ಮಿಕರ ಹಿತ ಕಾಯಲು ಕೇಂದ್ರ ಸರ್ಕಾರ ಬರೋಬ್ಬರಿ 1.7 ಲಕ್ಷ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದರೊಂದಿಗೆ ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ತಿಂಗಳ ಕಾಲ 50 ಲಕ್ಷ ರೂ. ವಿಮಾ ಸೌಲಭ್ಯ ಕಲ್ಪಸಲು ತೀರ್ಮಾನಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ನಿಧಿಯಿಂದ ನೆರವು ನೀಡಲು ನಿರ್ಧರಿಸಲಾಗಿದ್ದು, ದೇಶದ ಯಾರೊಬ್ಬರೂ ಸಹ ಹಸಿವಿನಿಂದ ಬಳಲಬಾರದು. ಹೀಗಾಗಿ, ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿಯವರು ಲಾಕ್’ಡೌನ್ ಘೋಷಣೆ ಮಾಡಿದ 36 ಗಂಟೆ ಕಳೆಯುವುದರ ಒಳಗಾಗಿ, ಇದರಿಂದ ತೊಂದರೆಗೆ ಒಳಗಾಗುತ್ತಿರುವ ಕಾರ್ಮಿಕ, ಬಡ ಹಾಗೂ ಮಧ್ಯಮ ವರ್ಗದ ಮಂದಿಗಾಗಿ ಘೋಷಣೆ ಮಾಡುತ್ತಿರುವ ಬೃಹತ್ ಪ್ಯಾಕೇಜ್ ಇದಾಗಿದೆ ಎಂದಿದ್ದಾರೆ.
ವಯಸ್ಸಾದವರು, ಅಂಗವಿಕಲರು, ಪಿಂಚಣಿದಾರರು ಸೇರಿ 3 ಕೋಟಿ ಜನರಿಗೆ ಹೆಚ್ಚುವರಿಯಾಗಿ ಏಕ ಕಂತಿನ ಹಣಕಾಸಿನ ನೆರವಿನ ರೂಪದಲ್ಲಿ 1,000 ರೂಪಾಯಿಯನ್ನು ಎರಡು ಕಂತುಗಳಲ್ಲಿ ನೇರ ನಗದು ಯೋಜನೆ ಮೂಲಕ ಪಾವತಿಸಲಾಗುತ್ತದೆ. ಇದು ಮೂರು ತಿಂಗಳ ಅವಧಿಯಲ್ಲಿ ಆಗಲಿದೆ. ಇದೇ ರೀತಿ ಜನಧನ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ತಲಾ 500 ರೂಪಾಯಿ ಪಾವತಿಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ಹೈಲೆಟ್ಸ್:
- ವೈದ್ಯರು, ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳು 50 ಲಕ್ಷ ರೂ. ವಿಮೆ
- 80 ಕೋಟಿ ಬಡವರಿಗೆ ಮೂರು ತಿಂಗಳು ಅಕ್ಕಿ/ಗೋಧಿ, ಬೇಳೆ ವಿತರಣೆ
- ನರೇಗಾ ಯೋಜನೆಯ ದಿನಗೂಲಿ 202 ರೂ.ಗಳಿಗೆ ಏರಿಕೆ
- ವೃದ್ದರು, ವಿಧವೆಯರು ಹಾಗೂ ದಿವ್ಯಾಂಗರಿಗೆ 1 ಸಾವಿರ ರೂ. ಸಹಾಯಧನ
- ಈಗ ನೀಡಲಾಗುತ್ತಿರುವ 1 ಸಾವಿರ ರೂ. ಜೊತೆಯಲ್ಲಿ ಹೆಚ್ಚುವರಿ 1 ಸಾವಿರ ರೂ.
- ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ
- ಮೂರು ತಿಂಗಳ ಅವಧಿಗೆ ಮಹಿಳೆಯರಿಗೆ 500 ರೂ. ಸಹಾಯಧನ
- ಮಹಿಳಾ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜಮಾ
- 20 ಕೋಟಿ ಮಹಿಳೆಯರಿಗೆ ಇದರಿಂದ ಪ್ರಯೋಜನ
- 3 ಕೋಟಿ ಹಿರಿಯ ನಾಗರಿಕರಿಗೆ 1 ಸಾವಿರ ಹೆಚ್ಚುವರಿ ಪಿಂಚಣಿ
Get in Touch With Us info@kalpa.news Whatsapp: 9481252093







Discussion about this post