ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖಚಿತ ಮಾಹಿತಿ ಆಧರಿಸಿ ತುಂಗಾ ನಗರ ಪೊಲೀಸರು ನಡೆಸಿದ ದಾಳಿಯಲ್ಲಿ ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವುಗಳನ್ನು ರಕ್ಷಣೆ ಮಾಡಲಾಗಿದೆ.
ಇಂದು ನಸುಕಿನ ವೇಳೆ ರಾಮೇನಕೊಪ್ಪ ಸಮೀಪ ಬೊಲೇರೋ ವಾಹನದಲ್ಲಿ 10 ಗೋವುಗಳನ್ನು ಕಟ್ಟಿ ಸಾಗಿಸಲಾಗುತ್ತಿತ್ತು. ಈ ವೇಳೆ ಹಿಂಸಾತ್ಮಕವಾಗಿ ಸಾಗಾಟವಾಗುತ್ತಿದ್ದ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಸಾಗಿಸಲಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ನೇತೃತ್ವದಲ್ಲಿ ರಚನೆಗೊಂಡ ತಂಡದಲ್ಲಿ ಪಿಎಸ್’ಐ ರಾಜು ರೆಡ್ಡಿ, ಪಿಎಸ್’ಐ ಕುಮಾರ್, ಸಿಬ್ಬಂದಿಗಳಾದ ರಾಜು, ನಾಗಪ್ಪ, ಹರೀಶ್ ನಾಯ್ಕ್ ಹಾಗೂ ಸಂತೋಷ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post