ಕಲ್ಪ ಮೀಡಿಯಾ ಹೌಸ್ | ಗುರುದಾಸ್’ಪುರ |
ಪಂಜಾಬ್’ನ ಗುರುದಾಸ್’ಪುರ ಪ್ರದೇಶದ ಭಾರತ-ಪಾಕಿಸ್ಥಾನ ಗಡಿಯಲ್ಲಿ ಪಾಕ್’ಗೆ ಸೇರಿದ ಡ್ರೋಣ್ ಅಕ್ರಮವಾಗಿ ಹಾರಾಟ ನಡೆಸಿದ್ದು, ಇದನ್ನು ಗಮನಿಸಿದ ಭಾರತೀಯ ಯೋಧರು ಗುಂಡು ಹಾರಿಸಿ ಅದನ್ನು ಹಿಮ್ಮೆಟ್ಟಿಸಿದ್ದಾರೆ.
ಈ ಕುರಿತಂತೆ ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದ್ದು, ನಿನ್ನೆ ಮಧ್ಯರಾತ್ರಿ 12.30ರ ಸುಮಾರಿಗೆ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಹಾರಾಟ ನಡೆಸುತ್ತಿದ್ದುದನ್ನು ಬಿಎಸ್’ಎಫ್ ಯೋಧರು ತತಕ್ಷಣವೇ ಎಚ್ಚೆತ್ತು ಐದು ಸುತ್ತು ಗುಂಡು ಹಾರಿಸಿದ್ದಾರೆ. ಭಾರತದ ಕಡೆಯಿಂದ ಗುಂಡು ಹಾರಿದ ತತಕ್ಷಣ ಈ ಡ್ರೋಣ್ ಪಾಕಿಸ್ಥಾನದ ಕಡೆಗೆ ವಾಪಾಸಾಗಿದ್ದು, ಇದನ್ನು ಹಿಮ್ಮೆಟ್ಟಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ಡ್ರೋಣ್ ಹಾರಾಟ ನಡೆಸುತ್ತಿದ್ದ ಪ್ರದೇಶದಲ್ಲಿ ಇದನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಅಡಗಿರುವ ಹಿನ್ನೆಲೆಯಲ್ಲಿ ಯೋಧರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post