ಗಂಗೊಳ್ಳಿ: ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಸಂಘದ ಸಂಸ್ಥಾಪಕರಾದ ಮಹಾತ್ಮ ಪೂಜ್ಯ ಡಾ. ಕೇಶವ ಬಲಿರಾಂ ಹೆಡ್ಗೆವಾರ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಜುಲೈ 27ರಂದು ನಮನ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 6 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಘದ ಸಂಸ್ಥಾಪಕರಾದ ಮಹಾತ್ಮ ಪೂಜ್ಯ ಡಾ. ಕೇಶವ ಬಲಿರಾಂ ಹೆಡ್ಗೆವಾರ್ ರವರು ವ್ಯಕ್ತಿಗೆ ಗುರು ಸ್ಥಾನ ನೀಡದೇ ಪ್ರತಿ ಹಿಂದೂವಿನ ಹೃದಯದಲ್ಲಿ ಯಾವ ಧ್ವಜ ನೋಡಿದರೆ ತಾನಗಿಯೆ ಭಕ್ತಿ-ಗೌರವದಿಂದ ಎದೆಯೆತ್ತಿ ನಮಸ್ಕರಿಸುತ್ತೇವೆಯೊ ಅಂತಹ ಭಗವಾಧ್ವಜ ಕ್ಕೆ ಗುರು ಸ್ಥಾನ ನೀಡಿರುವರು.
ಭಗವಾಧ್ವಜ ಎದುರು ಶ್ರದ್ಧಾಭಕ್ತಿಯಿಂದ ಪ್ರಣಾಮ ಮಾಡಿ ಸಮಾಜದಿಂದಲೇ ಪಡೆದ ನಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ಸಮಾಜದ ಉನ್ನತ ಕೆಲಸಕಾರ್ಯಗಳಿಗೆ (ಧರ್ಮ ದೇಶದ ಏಳಿಗೆಗೆ) ಸಮರ್ಪಣಾ ಮನೋಭಾವದಿಂದ ಗುರು ಕಾಣಿಕೆಯನ್ನು ಸಮರ್ಪಿಸಿ ಪರಮಪವಿತ್ರ ಭಗವಾಧ್ವಜಕ್ಕೆ ಪೂಜಿಸಿ ವಂದಿಸುವ ಪವಿತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Discussion about this post