ಕಲ್ಪ ಮೀಡಿಯಾ ಹೌಸ್ | ಗುರುವಾಯೂರು |
ವಿಶ್ವದ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರನ್ನು ಸದಾಕಾಲ ರಕ್ಷಣೆ ಮಾಡುವ ಎಸ್’ಪಿಜಿ ಕಮಾಂಡೋಗಳಿಗೆ ನಿರ್ದಿಷ್ಟ ಸಮವಸ್ತ್ರ ಹಾಗೂ ಶೈಲಿಗಳಿವೆ. ಆದರೆ, ನಿನ್ನೆ ಈ ಕಮಾಂಡೋಗಳ ವಸ್ತ್ರ ಸಂಹಿತೆ ಸಂಪೂರ್ಣ
ಬದಲಾಗಿತ್ತು. ಇದಕ್ಕೆ ಕಾರಣವೇನು?
ಕೇರಳದ ಬಹುತೇಕ ಪ್ರಮುಖ ದೇವಾಲಯಗಳಲ್ಲಿ ಸಾಂಪ್ರದಾಯಿಕ ವಸ್ತ್ರ ಸಂಹಿತೆ Dress Code ಜಾರಿಯಲ್ಲಿದ್ದು, ಇದು ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಯಾರೇ ದೇವಾಲಯದ ಆವರಣ ಪ್ರವೇಶಿಸಲು, ದೇವರ ದರ್ಶನ ಪಡೆಯಲು ಸಾಂಪ್ರದಾಯಿಕ ಧಿರಿಸು ಧರಿಸಲೇಬೇಕು ಎಂಬ ನಿಯಮವಿದೆ.
ಕೇರಳದ ತ್ರಿಶೂರ್ ಬಳಿಯಿರುವ ಗುರುವಾಯೂರು ಶ್ರೀಕೃಷ್ಣ ಸ್ವಾಮಿ ದೇವಾಲಯಕ್ಕೆ Kerala Shri Krishna Temple ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಭೇಟಿ ನೀಡಿದ್ದರು.
ಗುರುವಾಯೂರು ದೇವಾಲಯದಲ್ಲೂ ಸಹ ಕಟ್ಟುನಿಟ್ಟಿನ ಸಾಂಪ್ರದಾಯಿಕ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಪ್ರಧಾನಿ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವಾಗ ಸಾಂಪ್ರದಾಯಿಕ ‘ಮುಂಡು’ (ಧೋತಿ) ಮತ್ತು ‘ವೇಷ್ಟಿ’ (ಮೇಲ್ಭಾಗವನ್ನು ಮುಚ್ಚುವ ಶಾಲು) ಧರಿಸಿದ್ದರು.
ಮೋದಿಯವರು ಯಾವುದೇ ಸ್ಥಳದಲ್ಲಿದ್ದರೂ ಅವರ ರಕ್ಷಣೆಗೆ ಸದಾಕಾಲ ಜೊತೆಯಲ್ಲಿರುವ ಎಸ್’ಪಿಜಿ ಕಮಾಂಡೋಗಳೂ SPG Commandos ಸಹ ಸಾಂಪ್ರದಾಯಿಕ ಉಡುಗೆ ಧರಿಸುವುದು ಕಡ್ಡಾಯವಾಗಿತ್ತು. ಹೀಗಾಗಿ, ನಿಗದಿತ ಸಮವಸ್ತçದ ಬದಲಾಗಿ ಸಾಂಪ್ರದಾಯಿಕವಾಗಿ ಪಂಚೆ(ಧೋತಿ), ವೇಷ್ಟಿ(ಶಲ್ಯ ಅಥವಾ ಶಾಲು) Panche-Shalya ಧರಿಸಿಯೇ ತಮ್ಮ ರಕ್ಷಣಾ ಕರ್ತವ್ಯವನ್ನು ಮಾಡಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post