ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ಹೊಸ ಚಾನೆಲ್ ಜೀ ಪವರ್ ನಲ್ಲಿ ಅಕುಲ್ ಬಾಲಾಜಿ #AkulBalaji ನಡೆಸಿಕೊಡುತ್ತಿರುವ ಹಳ್ಳಿ ಪವರ್ ಎಲ್ಲರ ಜನಮನ್ನಣೆ ಗಳಿಸಿದೆ. ಇನ್ನು ಇಷ್ಟು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿದ್ದ ‘ಹಳ್ಳಿ ಪವರ್’ ಜನರಿಗೆ ಮನರಂಜನೆ ನೀಡಲು ಇನ್ನು ಮುಂದೆ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುತ್ತಿದೆ.
ಎಕ್ಸ್ಟ್ರಾ ಮನರಂಜನೆಯೊಂದಿಗೆ ಇನ್ನು ಮುಂದೆ ‘ಹಳ್ಳಿ ಪವರ್’ #HalliPower ಪ್ರತಿದಿನ ರಾತ್ರಿ 8:30 ರಿಂದ 10 ಗಂಟೆಯ ವರೆಗೆ ಪ್ರಸಾರ ಆಗಲಿದೆ.
ಸಿಟಿಯಲ್ಲಿ ಬೆಳೆದ ಹುಡುಗಿಯರು ತಮ್ಮ ಆಧುನಿಕ ಜೀವನಶೈಲಿಯನ್ನು ತ್ಯಜಿಸಿ ಹಳ್ಳಿ ಯುವತಿಯರಂತೆ ಜೀವನ ನಡೆಸುವುದೇ ‘ಹಳ್ಳಿ ಪವರ್’ ಶೋ. ಇಲ್ಲಿ ಹಳ್ಳಿಯ ದಿನನಿತ್ಯದ ಕೆಲಸಗಳನ್ನು ಸ್ಪರ್ಧಿಗಳಿಗೆ ಟಾಸ್ಕ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಈ ಶೋ ನಲ್ಲಿ ಸಿಟಿ ಹುಡುಗಿಯರು ಹಳ್ಳಿಯಲ್ಲಿ ಹೇಗೆ ಜೀವನ ನಡೆಸಲಿದ್ದಾರೆ ಎಂಬುದೇ ಈ ಶೋನ ಹೈಲೆಟ್ ಆಗಿರಲಿದೆ.

‘ಹಳ್ಳಿ ಪವರ್’ ಶೋ ಶುರು ಆಗಿ ಈಗಾಗಲೇ ತಿಂಗಳುಗಳಾಗಿದ್ದು, ಟಾಸ್ಕ್ಸ’ಗಳು ಇಂಟೆರೆಸ್ಟಿಂಗ್ ಆಗಿ ಮೂಡಿಬರುತ್ತಿರುವುದರಿಂದ ಇನ್ನು ಮುಂದೆ ಇನ್ನಷ್ಟು ಇಂಟರೆಸ್ಟ್ ಮೂಡಿಸಲು ಎಕ್ಸ್ಟ್ರಾ ಪವರ್’ನೊಂದಿಗೆ ಎಕ್ಸ್ಟ್ರಾ ಮನರಂಜನೆ ವೀಕ್ಷಕರಿಗೆ ನೀಡಲು ಅರ್ಧ ಗಂಟೆ ಮುಂಚಿತವಾಗಿ ಬರುತ್ತಿದೆ. ಹಾಗೆಯೇ 12 ಸ್ಪರ್ಧಿಗಳು ಇದ್ದು ಇಲ್ಲಿ ಯಾರಿಗೆ ಹಳ್ಳಿ ಪವರ್ ಸಿಗುತ್ತದೆ ಎಂದು ಕಾದು ನೋಡಬೇಕಿದೆ!
ಟಾಸ್ಕ್ಸ್’ಗಳಲ್ಲಿ ಸ್ಪರ್ಧಿಗಳು ಹೇಗೆ ಪರ್ಫಾರ್ಮ್ ಮಾಡ್ತಾರೆ? ಯಾರು ವಿನ್ನರ್ ಆಗ್ತಾರೆ ಅಂತ ತಿಳ್ಕೊಳೋಕೆ ಮಿಸ್ ಮಾಡದೆ ನೋಡಿ ‘ಹಳ್ಳಿ ಪವರ್’ ಪ್ರತಿದಿನ ರಾತ್ರಿ 8:30 ಕ್ಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post