ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬರೀ ಅನಾಗರೀಕ ಪ್ರಜೆಗಳಾದರೆ ದೇಶಕ್ಕೇನೂ ಪ್ರಯೋಜನವಿಲ್ಲ. ದೇಶಕ್ಕೇ ಏನಾದರೂ ಕೊಡುಗೆ ನೀಡುವಂತವರಾಗಬೇಕು. ಹಾಗಾಗಬೇಕಿದ್ದರೆ ನಮ್ಮ ಇಂದಿನ ಜೀವನಶೈಲಿಯಲ್ಲಿ ಬದಲಾವಣೆಗಳಾಗಬೇಕು. ಜೀವನಶೈಲಿ ಬದಲಾಗಬೇಕಿದ್ದರೆ ಪಠ್ಯಕ್ರಮಗಳು ಬದಲಾಗಬೇಕು. ಹಾಗಾದರೆ ಇಂದಿನ ಪಠ್ಯಕ್ರಮಗಳು ಉತ್ತಮವಾಗಿಲ್ಲವೇ…? ನೋಡೋಣ ಬನ್ನಿ.
ನಮ್ಮ ಇತಿಹಾಸ ಅದಾವ ತಪ್ಪು ಮಾಡಿದೆಯೆಂದು ಪದೇ ಪದೇ ತಿರುಚಲ್ಪಡುತ್ತಿರುವುದು..?
ಅದಾವ ವಿಕೃತ ಆನಂದಕ್ಕಾಗಿ ನಮ್ಮ ಪರಂಪರೆ ಸಂಸ್ಕೃತಿಯ ನೈಜ ಬೇರುಗಳನ್ನು ಅಳಿಸಿ ತಮ್ಮ ಮೂಗಿನ ನೇರಕ್ಕೆ ತಿರುಚಿ ಉಲ್ಲೇಖಿಸುವುದು?
ಅದೇಕೆ ಯಾರೋ ಮಾಡಿದ ತಪ್ಪುಗಳಿಗೆ ಯುವಜನತೆ ಬಲಿಯಾಗುವುದು..?
ಏನೂ ಅರಿಯದ ಮುಗ್ದ ಮಕ್ಕಳ ಮನದೊಳಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸಿ ದಾರಿತಪ್ಪಿಸುವುದು?
ಹಾಗಾದರೆ ಹಣ ಅಧಿಕಾರ ಎರಡಿದ್ದರೆ ಎಂತಹ ಹೀನ ಕಾರ್ಯವಾದರೂ ಮಾಡಬಹುದೇ..? ಇವನ್ನೆಲ್ಲ ಅರಿತು ಯುವಜನತೆ ಪ್ರಶ್ನಿಸುವುದು ಯಾವಾಗ…?
ಭಾರತ ಸರ್ವವಿಧದಲ್ಲಿಯೂ ಸಮೃದ್ದ ದೇಶವಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆ ಮಾತುಗಳೆಲ್ಲಾ ಹುಸಿಯಾಗಿತ್ತೇ ಅನುವ ಭಾವನೆಗಳು ಮೂಡತೊಡಗಿದೆ.
ಭಾರತದ ಮೇಲೆ ಪರಕೀಯರ ಆಕ್ರಮಣ ಪ್ರಾರಂಭವಾಗಿ ಸುಮಾರು ಒಂದುವರೆ ಸಹಸ್ರಮಾನಗಳ ಬಳಿಕ ಆಕ್ರಮಣಕಾರಿಗಳಾಗಿಯೇ ಬಂದ ಬ್ರಿಟೀಷರು ಇಲ್ಲಿಯ ಭೌತಿಕ ಸಮೃದ್ದಿಯನ್ನೂ ಸಾಂಸ್ಕೃತಿಕ ಪರಂಪರೆಯನ್ನೂ ನೋಡಿ ಬೆರಗಾದರು. ಆಕ್ರಮಣಕಾರಿಗಳು ನಿರಂತರ ಲೂಟಿಗೈದ ಮೇಲೆಯೂ ಇಲ್ಲಿ ಇಷ್ಟೊಂದು ಸಂಪತ್ಸಮೃದ್ಧಿ ಉಳಿದದ್ದಾದರೂ ಹೇಗೆ?
ಐದುನೂರು ವರ್ಷಗಳ ಕಾಲ ಮುಸಲ್ಮಾನರು ದೌರ್ಜನ್ಯಗಳನ್ನೆಸಗಿದರೂ, ಬಲವಂತದ ಮತಾಂತರಗಳನ್ನು ಮಾಡಿಯೂ ಈ ದೇಶದ ಸಾಂಸ್ಕೃತಿಕ ಪರಂಪರೆ ಉಳಿದದ್ದು ಹೇಗೆ.? ಎಂಬುದರ ಶೋಧನೆಯಲ್ಲಿ ತೊಡಗಿದ ಬ್ರಿಟೀಷರಿಗೆ ಅವರ Religion ಮತ್ತು ಸಾಮಾಜಿಕ ವ್ಯವಸ್ಥೆಯ ಮೂಲಕಲ್ಪನೆಗಳ ಪೋರೆಯಿರುವ ಕಣ್ಣುಗಳಿಂದ ನೋಡಿದರೂ ಅವರಿಗೆ ಇಲ್ಲಿಯ ಸಮಾಜವ್ಯವಸ್ಥೆಯಾಗಲಿ, ಧರ್ಮವಾಗಲಿ ತಾವಂದುಕೊಂಡಂತೆ ಕೀಳಾದುದಲ್ಲ. ಮತ್ತು ಅವುಗಳನ್ನು ಕೀಳುಗಳೆಯದೇ ತಾವು ಸಾವ್ರಾಜ್ಯ ಸ್ಥಾಪಿಸಲೂ ಸಾಧ್ಯವಿಲ್ಲ ಅನ್ನುವ ವಾಸ್ತವತೆಯ ಅರಿವಾಯಿತು. ಅದರ ಫಲಿತಾಂಶವಾಗಿಯೇ ನಿರಂತರ ಅಪಪ್ರಚಾರ ಮತ್ತು ಭಾರತೀಯರ ನಡುವೆಯೇ ಸರಣಿ ಅಪನಂಬಿಕೆಗಳನ್ನು ಬಿತ್ತುವ ಪ್ರಕ್ರಿಯೆ ಆರಂಭವಾಯಿತು.
ದೇಶವನ್ನು ಹಾವಾಡಿಗರ ದೇಶ ಎನ್ನುವಲ್ಲಿಂದ ತೊಡಗಿ, ವೇದ-ವೇದಾಂತಗಳನ್ನೂ ತಪ್ಪಾಗಿ ಅರ್ಥೈಸುವ ಕಾರ್ಯ ನಡೆಯಿತು. ದುರ್ದೈವದ ಸಂಗತಿಯೆಂದರೆ ಆಧುನಿಕ ಶಿಕ್ಷಣ ಪಡೆದ ಭಾರತೀಯರನೇಕರೂ ಬ್ರಿಟೀಷರ ತಂತ್ರವನ್ನರಿಯದೇ ಹೋದರು. ಅವರೂ ಹೇಳಿದ್ದನ್ನೇ ನಂಬಿದರು, ಅವರಿಗಿಂತ ಗಟ್ಟಿಧ್ವನಿಯಲ್ಲಿ ಅವರಂತೆಯೇ ಮಾತನಾಡತೊಡಗಿದರು. ದಿನಕಳೆದಂತೆ ಈ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅವರೆಲ್ಲರೂ ಸಮಾಜ ಜೀವನದ ವಿವಿಧ ರಂಗಗಳಲ್ಲಿ ಪ್ರತಿಷ್ಠಿತರೆನಿಸಿದರು. ಕೆಲವರು ಇತಿಹಾಸಕಾರರೂ ಆದರು. ಸ್ವಾತಂತ್ರೋತ್ತರದ ಭಾರತದ ಸರಕಾರಗಳು ರಾಜಕೀಯ ಲೆಕ್ಕಾಚಾರಕ್ಕಿಳಿದು ದೇಶವನ್ನು ಲೂಟಿ ಮಾಡುವುದರೊಂದಿಗೆ ಈ ಹುಚ್ಚು ಇತಿಹಾಸಕಾರರನ್ನೂ ಪೋಷಿಸಿದವು. ಫಲಿತಾಂಶವೇ ನಾವಿಂದು ಅನುಭವಿಸುವ ವಿಧಿಲಿಖಿತವಾಯಿತು.
ದುಷ್ಟರು ಹೀರೋಗಳಾದರು
ಪಠ್ಯ ಪುಸ್ತಕಗಳಲ್ಲಿ ಆಕ್ರಮಣಕಾರರು ಹೀರೋಗಳೆನಿಸಿದರು. ಹೊರದೇಶಗಳಿಂದ ಬಂದ ಬುರ್ಖಾ ಸಂತತಿಗಳಂತೆಯೇ ಭಾರತೀಯರ ಶೌರ್ಯ-ಪರಾಕ್ರಮಗಳ ಚರಿತ್ರೆಗೆ ಬುರ್ಖಾ ತೊಡಿಸಲಾಯಿತು. ಭಾರತೀಯರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಜಾತಿ ಮತಗಳ ವಿಷಬೀಜವ ಬಿತ್ತಿ, ನಮ್ಮೊಳಗೆ ಒಡಕು, ಭಿನ್ನಾಭಿಪ್ರಾಯಗಳ ಮೂಡಿಸಿ ಉತ್ತೇಜನ ನೀಡುವಂತೆ ಭಾರತದ ಸಾಮಾಜಿಕ ಚರಿತ್ರೆಯನ್ನು ಚಿತ್ರಿಸಲಾಯಿತು.
ಬ್ರಿಟೀಷರು ರಚಿಸಿದ ಇತಿಹಾಸ ಮತ್ತು ಕಮ್ಮ್ಯೂನಿಸಂ ಈ ಎರಡರಿಂದಲೂ ಪ್ರಭಾವಿತರಾಗಿ ಇತಿಹಾಸ ತಿರುಚಲು ಯತ್ನಿಸಿದವರ ನಡುವೆಯೂ ನಮ್ಮ ನೈಜ ಇತಿಹಾಸವನ್ನು ಉಳಿಸಿ ಬೆಳೆಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅವರೆಲ್ಲರ ಸಂಶೋಧನೆಗಳು, ಬರಹಗಳು, ಪ್ರಯತ್ನಗಳು ನಮ್ಮ ಶೈಕ್ಷಣಿಕ ವಲಯದಲ್ಲಿ ದುರ್ಲಕ್ಷಯಕ್ಕೀಡಾಗಿದ್ದು ನಮ್ಮ ದುರ್ವಿಧಿ.
ತಿರುಚಲ್ಪಟ್ಟ ಇತಿಹಾಸವನ್ನೇ ಶಾಲಾ ಕಾಲೇಜುಗಳಲ್ಲಿ ಭೋದಿಸಲಾಯಿತು. ಇಂದಿಗೂ ಅದೇ ಸರಾಗವಾಗಿ ಮಿತಿಯಿಲ್ಲದೇ ಬೆಳೆಯುತ್ತಿದೆ. ವಾಸ್ತವವಾಗಿ ಹೇಳುವುದಾದರೆ ಅಂತರಂಗದೆದುರಿಗೆ ಶ್ರೇಷ್ಠತೆ ಇಲ್ಲದೇ ಹೋದರೆ ಯಾವ ವ್ಯಕ್ತಿ ತಾನೇ ಉನ್ನತನಾಗಬಹುದು?
ದುರದೃಷ್ಠವೆಂದರೆ ಈಗ ಪ್ರಕಟಗೊಳ್ಳುವ ಮಕ್ಕಳ ಪಠ್ಯ ಪುಸ್ತಕದಲ್ಲಿ ಅನುಪಯುಕ್ತ ಸರಕುಗಳೇ ತುಂಬಿದೆ.
ಉದಾ: ರಾಜಾ ರಾಮ್ ಮೋಹನ್ ರಾಯ್ ಸತೀ ಪದ್ದತಿಯ ನಿರ್ಮೂಲನಕ್ಕಾಗಿ ವಹಿಸಿದ ಪಾತ್ರದ ಬಗೆಗೆ ಓದುತ್ತೇವೆಯೇ ಹೊರತು ಕ್ರೈಸ್ತ ಮಿಷನರಿಗಳ ವಿರುದ್ಧ ನಡೆಸಿದ ಸಂಘರ್ಷಗಳ ಬಗ್ಗೆ ವಿವರಣೆಯಿರುವುದಿಲ್ಲ.
ನಾಚಿಕೆಯಿಂದಲೇ ಹೇಳಬೇಕಿದೆ
ಪಠ್ಯಪುಸ್ತಕದಲ್ಲಿ ಯಾವ ಅಸಮಾನ್ಯ ವೀರರ ಹೆಸರುಗಳನ್ನು ನೋಡುತ್ತೇವೆಯೋ ಎಂದು ಕೇಳಿದರೆ ತಲೆತಗ್ಗಿಸಿ ಯಾರದ್ದೂ ಇಲ್ಲ ಅಂತ ಹೇಳಬೇಕಾಗಿದೆ. ಅಥಾವ ಬಾಬರ್, ಹುಮಾಯೂನ್, ಹೈದರ್, ಟಿಪ್ಪು, ನಾದಿರ್ ಶಾ, ಘಜ್ನಿ, ಘೋರಿ, ಖಿಲ್ಜಿ ಅಂತ ನಾಚಿಕೆಯಿಂದ ಹೇಳಬೇಕಾಗಿದೆ.
ಇರಲಿ ಯಾರೇ ಇರಲಿ ಅವರ ಪರಾಕ್ರಮ, ಕೊಡುಗೆಗಳೊಂದಿಗೆ ಸಮಾಜಕ್ಕೆ ಅವರು ಮಾಡಿದ ಹಾನಿ, ದರೋಡೆ, ಕೊಲೆ, ಮತಾಂತರ, ಮೋಸ, ಅತ್ಯಾಚಾರಗಳ ಉಲ್ಲೇಖ ನೀಡಿದರೆ ಯಾವ ಸಮಾಜಕ್ಕಾಗಲಿ, ಸರಕ್ಕಾಗಲಿ ನಷ್ಟವಿದೆಯೇ…??
ನಮ್ಮ ಮಕ್ಕಳ ಪಠ್ಯ ಪುಸ್ತಕಗಳ ರಚನೆ ಹೆಚ್ಚು ಅರ್ಥಪೂರ್ಣವಾಗಿ ರಚಿಸುವುದು ತುರ್ತು ಅವಶ್ಯಕವಾಗಿದೆ. ಶಿವಾಜಿ, ರಾಣಾ ಪ್ರತಾಪ ಸಿಂಹ, ಮಹಾರಾಣಾ ಕುಂಭ, ಔರಂಗಜೇಬನನ್ನೇ ಅಲ್ಲಾಡಿಸಿದ ಬುಂದೇಲದ ಛತ್ರಸಾಲ ಮಹಾರಾಜ, ಪಾಣಿಪತ್ ಕದನದ ಹೇಮು(ಹೇಮಚಂದ್ರ), ಸಿಖ್ಖರ ಸಿಂಹ ಪಡೆಯ ತೇಗ್ ಬಹದ್ದೂರ್, ಗೋವಿಂದ ಸಿಂಹ, ರಣಜಿತ್ ಸಿಂಹ, ಅಲ್ಲದೇ ಮೇವಾಡದ ರಾಣಿಯರು ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸಿದ ರಾಜಮನೆತನಗಳೊಂದಿಗೆ ಧರ್ಮದ ಸಾರಗಳನ್ನು ಅಳವಡಿಸಿ ಯುವಜನತೆಯಲ್ಲಿ ಧರ್ಮಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಈಚಿನ ಭಾರತ-ಚೀನಾ ಯುದ್ದದಲ್ಲಿ ಸೆಣಸಿದ ಮೇಜರ್ ಧನಸಿಂಗ್ ಥಾಪಾ, ಸುಬೇದಾರ್ ಜೋಗೀಂದರ್ ಸಿಂಗ್, ಪಾಪಿ ಪಾಕಿಸ್ಥಾನಕ್ಕೆ ಬಲಿಯಾದ ಸೌರಭ್ ಗಾಲಿಯಾ, ಅಮನ್ ಕಾಲಿಯಾ ಮುಂತಾದ ಸೇನಾನಿಗಳೊಂದಿಗೆ ಭಾರತೀಯ ಸೇನೆಗೆ ಕೊಡವರ ಕೊಡುಗೆಗಳು, ಇನ್ನಿತರ ಉನ್ನತ ಮಾಹಿತಿಗಳನ್ನು ಸೇರಿಸಿ ಯುವಜನತೆಯಲ್ಲಿ ರಾಷ್ಟ್ರಾಭಿಮಾನದ ಜಾಗೃತಿಯನ್ನು ಮೂಡಿಸುವುದು ತುರ್ತು ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸವನ್ನು ತಿರುಚಿ ವಿಕೃತ ದೃಷ್ಠಿಕೋನದಿಂದ ಅರ್ಥೈಸಿ ವಿಶ್ಲೇಸಿಸುವ ಜಿಹಾದಿ ಮನಃಸ್ಥಿತಿಯ ಬಗ್ಗೆ ಯುವಜನತೆಗೆ ಅರಿವು ಮೂಡಿಸುವಲ್ಲಿ ಶಿಕ್ಷಣ ಇಲಾಖೆ ಎಚ್ಚೆತ್ತು ತುರ್ತು ಕಾರ್ಯ ನಿರ್ವಹಿಸಬೇಕಾಗಿದೆ.
ಲೇಖನ: ಯೋಗಿ ಸುಳ್ಯ
Discussion about this post