ಕಲ್ಪ ಮೀಡಿಯಾ ಹೌಸ್ | ಹಾವೇರಿ/ಬಳ್ಳಾರಿ |
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಉಪಚುನಾವಣೆಯಲ್ಲಿ #By Election ಗೆಲುವು ಸಾಧಿಸಲು ಹಣದ ಹೊಳೆಯನ್ನೇ ಹರಿಸಿದೆ ಎಂದು ಶಿಗ್ಗಾಂವಿ ಪರಾಜಿತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ #Bharath Bommai ಅವರು ಆರೋಪಿಸಿದ್ದಾರೆ.
ಇಡೀ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ. ಹಾಗಾಗಿ ಕಾಂಗ್ರೆಸ್ ಗೆದ್ದಿದೆ. ನಾನು ಯಾವತ್ತಿದ್ದರೂ ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರಿಗೆ ಒಳಿತು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕ್ಷೇತ್ರದ ಜನರ ಜೊತೆಗೆ ಎಂದೆಂದಿಗೂ ಇರುತ್ತೇನೆ. ನಮ್ಮ ಸೋಲಿಗೆ ಕಾರಣ ಏನೆಂಬುವುದನ್ನು ಪಕ್ಷದ ಹಿರಿಯರು ಹಾಗೂ ಯುವಕರೆಲ್ಲ ಸೇರಿ ಅವಲೋಕನ ಮಾಡುತ್ತೇವೆ. ಈ ಬಗ್ಗೆ ಎಲ್ಲರೂ ಒಟ್ಟು ಸೇರಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

Also read: ಜಾರ್ಖಂಡ್ ಚುನಾವಣೆ | ಜೆಎಂಎಂ ಮೈತ್ರಿಕೂಟಕ್ಕೆ ಮುನ್ನಡೆ
ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾಸೀರ್ ಪಠಾಣ್‌ಗೆ 13,448 ಮತಗಳ ಅಂತರದಲ್ಲಿ ಗೆಲುವು ದೊರೆತಿದೆ. ಅವರಿಗೆ 1,00,587 ಮತಗಳು ದೊರೆತಿದ್ದರೆ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ 86,960 ಮತಗಳು ದೊರೆತಿವೆ.

ಸೋಲಿನ ಹೊಣೆ ನಾನೇ ಹೊರುವೆ. ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಸೋಲಾಗಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಮ ಅವರು ವಿಜಯಶಾಲಿಯಾಗಿದ್ದಾರೆ. ಅನ್ನಪೂರ್ಣ ಅವರು 9,105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post