ಕಲ್ಪ ಮೀಡಿಯಾ ಹೌಸ್
ಹಾವೇರಿ: ಕೊರೋನಾ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕು ಬಂದಿದೆ ಎಂದು ಹೇಳಲು ಯಾರೂ ಮುಜುಗರ ಪಡುವುದಾಗಲೀ ನಾಚಿಕೆ ಪಡುವುದಾಗಲೀ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಹಿರೇಕೆರೂರು ಮತಕ್ಷೇತ್ರದ ವರಹ ಗ್ರಾಮದಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ , ಮೋಹನ್ ಮರಿಗೌಡರ್ (ವಕಿಲರು), ದಾನಪ್ಪ ಹುಲ್ಲಣ್ಣನವರ ಹಾಗೂ ಬಸಪ್ಪ ಹನುಮಂತಪ್ಪ ನಂದಿಹಳ್ಳಿ ಇವರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿಗಳ ಸಹಾಯಧನ ನೀಡಿದರು. ಹಾಗೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಸೋಂಕಿಗೆ ನಾಚಿಕೆಯಾಗಲೀ, ಅಂಜಿಕೆಯಾಗಲೀ ಇರುವುದಿಲ್ಲ. ಜಾಗೃತಿ, ಕಾಳಜಿ, ಸ್ವಚ್ಛತೆಯ ಜೊತೆಗೆ ಸಾಮಾಜಿಕ ಅಂತರ ಮುಖ್ಯ. ಸೋಂಕನ್ನು ತಡೆಯಲು ಇನ್ನೊಬ್ಬರಿಗೆ ಪಸರಿಸದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸ್ವಯಂ ಜಾಗೃತಿ ಜೊತೆಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕೇ ವಿನಹ: ಸೋಂಕಿನ ಲಕ್ಷಣಗಳು ಕಂಡುಬಂದರೆ ಹೆದರಿಯೋ, ಭಯಬಿದ್ದೋ ಅಥವಾ ಇನ್ಯಾವುದೋ ಮೌಢ್ಯವನ್ನು ನಂಬಿ ಸುಮ್ಮನೆ ಇರುವುದಿಲ್ಲ ಎಂದರು.
ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸೋಂಕು ಬಂದಿದೆಯೆಂದು ಹೇಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು. ನನ್ನ ಕ್ಷೇತ್ರದ ಜನತೆಯ ಜೊತೆಗೆ ನಾನು ಸದಾ ಇದ್ದೇ ಇರುತ್ತೇನೆ ಎಂದು ಬಿ.ಸಿ.ಪಾಟೀಲ್ ಸ್ಫೂರ್ತಿಯ ಮಾತುಗಳನ್ನಾಡಿದರು.
ಪರಿಹಾರ ಚೆಕ್ ವಿತರಣೆ:
ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಹಸೀನಾ ಬಾನು ದೊಡ್ಮನಿ ಇವರ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿಗಳ ಸಹಾಯಧನ ನೀಡಿದರು. ಹಾಗೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತನ್ನ ಕ್ಷೇತ್ರದ ಜನರ ಜೊತೆ ತಾನು ಎಂದಿಗೂ ಇರುತ್ತೇನೆ ಎಂದು ಹೇಳಿ ಧೈರ್ಯ ತುಂಬಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post