ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು (2020 ಹಾಗೂ 2021 ನೇ ಸಾಲು) ಏ.4 ರಂದು ನಡೆಯುವ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಾಳೆ ಸಂಜೆ 04 ಗಂಟೆಗೆ ಸಂಸ್ಥಾಪನೋತ್ಸವ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಪ್ರಶಸ್ತಿ ಪ್ರಧಾನ, ಪಲ್ಲವ ಪ್ರಶಸ್ತಿ ಪ್ರಧಾನ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೋವಿಡ್ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ಅಖಿಲ ಹವ್ಯಕ ಮಹಾಸಭಾ ಕೊಡಮಾಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿ ಗೆ, 2020 ಮತ್ತು 2021 ನೆಯ ಸಾಲಿಗೆ ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಮಹಾಸಭೆ ಹರ್ಷಿಸುತ್ತಿದೆ.
ವರ್ಷ: 2020
ಹವ್ಯಕ ವಿಭೂಷಣ
ಡಾ| ವಿದ್ವಾನ್ ಬಂದಗದ್ದೆ ನಾಗರಾಜ – ಸಾಹಿತ್ಯ – ಶಿವಮೊಗ್ಗ
ಹವ್ಯಕ ಭೂಷಣ
ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ- ಯಕ್ಷಗಾನ – ಉ. ಕ.
ಡಾ| ಶ್ಯಾಮ್. ಸಿ . ಭಟ್ – ಸಂಶೋಧನೆ – ದ.ಕ.
ಹವ್ಯಕ ಶ್ರೀ
ವೇ| ಮೂ|| ಗಜಾನನ ಘನಪಾಠಿಗಳು – ವೇದ – ಶಿವಮೊಗ್ಗ
ಶ್ರೀ ತೇಜಸ್ವಿ ಶಂಕರ್ – ಮನೋರಂಜನೆ – ದ.ಕ.
ಶ್ರೀ ಗುರುಮೂರ್ತಿ ವೈದ್ಯ – ಸಂಗೀತ – ಉ. ಕ.
ವರ್ಷ: 2021
ಹವ್ಯಕ ವಿಭೂಷಣ
ಡಾ. ನಾ. ಮೊಗಸಾಲೆ – ಸಾಹಿತ್ಯ – ದ.ಕ./ ಕಾಸರಗೋಡು
ಹವ್ಯಕ ಭೂಷಣ
ಡಾ. ಎಚ್. ಎಲ್. ಸುಬ್ಬರಾವ್ – ವೈದ್ಯಕೀಯ – ಶಿವಮೊಗ್ಗ
ಡಾ| ನಾಗರಾಜ ಹೆಗಡೆ ಗೊರನಮನೆ – ಕೃಷಿ ಉಪಕರಣ / ಔಷಧಿ – ಉ. ಕ
ಹವ್ಯಕ ಶ್ರೀ
ಶ್ರೀಮತಿ ಚಂದ್ರಕಲಾ ವಿ ಭಟ್ – ಸಮಾಜಸೇವೆ / ತಾಳಮದ್ದಳೆ – ಉ. ಕ.
ಶ್ರೀ ಲಕ್ಷ್ಮೀನಾರಾಯಣ ಹೆಗಡೆ – ಕಲ್ಲಬ್ಬೆ – ಪರಿಸರ – ಉ.ಕ.
ಕುಮಾರಿ ಈಶಾ ಶರ್ಮ ಕಾಂತಜೆ – ಕ್ರೀಡೆ (ಚೆಸ್) – ದ.ಕ.
ಪ್ರಶಸ್ತಿ ಆಯ್ಕೆ ಹೇಗೆ?
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post