ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಇಂದು ಸಂಜೆ ಭಾರೀ ಮಳೆ ಸುರಿದ್ದಿದ್ದು, ಬಹಳಷ್ಟು ಹಾನಿಯುಂಟು ಮಾಡಿದೆ.
ಶಿವಮೊಗ್ಗ ನಗರದಲ್ಲಿ ಸಂಜೆ ಧಾರಕಾರ ಮಳೆ ಸುರಿದಿದ್ದು, ಪರಿಣಾಮವಾಗಿ ಸಾಗರ ರಸ್ತೆಯಲ್ಲಿ ಒಟ್ಟು 9 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಭಾರ್ಗವಿ ಪೆಟ್ರೋಲ್ ಬಂಕ್ ಬಳಿ ನೀಲಗಿರಿ ಮರವೊಂದು ರಸ್ತೆಗೆ ಉರುಳಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಇನ್ನು, ಸಂಜೆ ಭದ್ರಾವತಿಯಲ್ಲೂ ಸಹ ಭಾರೀ ಕಾರ್ಮೋಡ ಕವಿದು, ಧಾರಾಕಾರ ಮಳೆ ಸುರಿದಿದೆ. ಆದರೆ, ಎಲ್ಲಿಯೂ ಯಾವುದೇ ರೀತಿಯ ಹಾನಿಯಾದ ಕುರಿತು ವರದಿಯಾಗಿಲ್ಲ.
ಅಲ್ಲದೇ, ತೀರ್ಥಹಳ್ಳಿ ತಾಲೂಕಿನಲ್ಲೂ ಸಹ ಸಂಜೆ ವರುಣ ಅಬ್ಬರಿಸಿದ್ದಾನೆ. ಮಾಳೂರು ಶೀಕೆಯಲ್ಲಿ ಇಬ್ಬರ ಮೇಲೆ ಮರ ಬಿದ್ದಿದ್ದು, ಅವರನ್ನು ಚಿಕತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Get in Touch With Us info@kalpa.news Whatsapp: 9481252093
















