ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆ ಸುರಿದಿದ್ದು, ಇದರಿಂದ ನಾಗರಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.
ಉದ್ಯಾನ ನಗರಿಯಾದ್ಯಂತ ಸುಮಾರು ಒಂದು ಗಂಟೆಗಳ ಕಾಲ ಆಲಿಕಲ್ಲು ಮಳೆ ಸುರಿದಿದ್ದು, ಪರಿಣಾಮವಾಗಿ ಎಲ್ಲಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಟೌನ್ ಹಾಲ್, ಮೈಸೂರು ರಸ್ತೆ, ವಿಜಯನಗರ, ನಾಯಂಡಳ್ಳಿ, ಬಸವನಗುಡಿ ಸೇರಿದಂತೆ ಅನೇಕ ಕಡೆ ಮಳೆಯಾಗುತ್ತಿದ್ದು, ಬನ್ನೇರುಘಟ್ಟ, ಕೋರಮಂಗಲ, ಮಡಿವಾಳ, ರೇಸ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
Discussion about this post