ನವದೆಹಲಿ: ಪಾಕಿಸ್ಥಾನ ವಿಮಾನಗಳು ಭಾರತದ ಗಡಿಯೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೇ, ವಿಂಗ್ ಕಮಾಂಡರ ಅಭಿನಂದನ್ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಪಾಕ್ ಹೈ ಕಮಿಷನರ್’ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಪಾಕಿಸ್ತಾನ ವಾಯುಪಡೆ ಭಾರತದ ಉಲ್ಲಂಘನೆ ಮತ್ತು ಭಾರತೀಯ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡಿರುವುದನ್ನು ತರಾಟೆಗೆ ತೆಗೆದುಕೊಂಡಿದೆ.
ಇದಕ್ಕೂ ಮುನ್ನ ಪಾಕಿಸ್ಥಾನದ ಡ್ಯೆಪುಟಿ ಹೈಕಮಿಷನರ್ಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿ, ಕರೆಸಿಕೊಂಡಿತ್ತು. ದೆಹಲಿಯ ಸೌತ್ ಬ್ಲಾಕ್ನಲ್ಲಿರುವ ಪಾಕಿಸ್ಥಾನದ ಡ್ಯೆಪುಟಿ ಹೈ ಕಮಿಷನರ್ ಸೈಯ್ಯದ್ ಹೈದರ್ ಶಾ ಅವರಿಗೆ ಸಮನ್ಸ್ ನೀಡಲಾಗಿತ್ತು.
Discussion about this post