ಧರ್ಮಶಾಲಾ: ದೇಶವನ್ನು ಕಾಯುವ ಪುಣ್ಯ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವೀರರ ಪುಣ್ಯ ಭೂಮಿ ಹಿಮಾಚಲ ಪ್ರದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
देवभूमि हिमाचल के धर्मशाला में जनसभा को संबोधित कर रहा हूं। लाइव देखें… https://t.co/WcQ4NVZ0m9
— Narendra Modi (@narendramodi) December 27, 2018
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನಾನು ಧರ್ಮಶಾಲಾದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಕೆಲಸ ಮಾಡಿಕೊಂಡಿದ್ದೆ. ಹೀಗಾಗಿ, ಇಲ್ಲಿನ ಸ್ಥಳಗಳೊಂದಿಗೆ ನನಗೆ ಅನೇಕ ಅನುಭವಗಳಾಗಿದ್ದು, ಇದು ನನಗೆ ನನ್ನ ಮನೆಯ ಹಾಗೆ ಎಂದು ತಮ್ಮ ನೆನಪಿನ ಹಾದಿಯನ್ನು ಬಿಚ್ಚಿಟ್ಟರು.
ಇನ್ನು, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿನಂಧಿಸಿದ ಅವರು, ಹಿಮಾಚಲ ಪ್ರದೇಶ ಸರ್ಕಾರ ದೇಶಕ್ಕೆÃ ಮಾದರಿಯಾಗಬೇಕು. ಆ ರೀತಿ ಕೆಲಸ ಮಾಡಿ ಎಂದು ಕರೆ ನೀಡಿದರು.
Discussion about this post