ಕಲ್ಪ ಮೀಡಿಯಾ ಹೌಸ್
ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಮಳೆಯ ಪ್ರಮಾಣ ತೀವ್ರಗೊಂಡ ಹಿನ್ನೆಲೆಯಲ್ಲಿ ದಿಢೀರನೇ ಕಾಣಿಸಿಕೊಂಡ ಪ್ರವಾಹಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Heavy rain #Dharamsala #bhagsunag
ಹಿಮಾಚಲ ಪ್ರದೇಶದ ಧರ್ಮಾಶಾಲದಲ್ಲಿ ಭಾರೀ ಮಳೆ ಕೊಚ್ಚಿ ಹೋದ ಕಾರುಗಳು pic.twitter.com/Sc0Q2yk6NX
— News Next (@newsnext_live) July 12, 2021

ಉತ್ತರ ಭಾರತದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಮ್ಮು -ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶದ ಧರ್ಮಶಾಲಾದ ಮೆಕ್ಲೋಡೆಗಂಜ್ ಬಳಿಯಿರುವ ಭಗ್ಸು ನಾಗ್‌ನಲ್ಲಿ ದಿಢೀರನೇ ಪ್ರವಾಹ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪ್ರವಾಹದ ತೀವ್ರತೆಗೆ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಭಯವನ್ನು ಹುಟ್ಟಿಸುತ್ತಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















