ಕೆಪಿಎಸ್‌ಸಿಯಲ್ಲಿ KPSC ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ ಸಿಬಿಐ CBI ತನಿಖೆಗೆ ಕೊಡಬೇಕೆಂದು ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ನಡೆಸಲು ಅನುಮತಿ ನೀಡುವಂತೆ ರಾಜ್ಯ ವಿದ್ಯಾರ್ಥಿ ಸಂಘದ ವತಿಯಿಂದ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಏ.10ರಂದು 300 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ಶಿವಮೊಗ್ಗ ಸೆಂಟ್ರಲ್ ಲೈಬ್ರರಿ ಇಂದ ಡಿಸಿ ಆಫೀಸರ್ವರೆಗೂ ಶಾಂತಿಯುತ ಪಾದಯಾತ್ರೆಗೆ ಅನುಮತಿ ಕೋರಲಾಗಿದೆ.
ಕೆಪಿಎಸ್‌ಸಿಯಲ್ಲಿ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದನ್ನು ಕೂಡಲೇ ಸಿಬಿಐ ತನಿಖೆಗೆ ಕೊಡಬೇಕೆಂದು ಲಕ್ಷಾಂತರ ಯುವಕರ ಪರವಾಗಿ ಕೇಳಿಕೊಳ್ಳುತ್ತೇವೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಕಳೆದ 5-6 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಿಯಾದ ನೇಮಕಾತಿ ನಡೆಯುತ್ತಿಲ್ಲದರ ಪರಿಣಾಮ ರಾಜ್ಯದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಹಾಗೆ ಅಕ್ಸಾ ಸಂಘಟನೆಯ ಕಾಂತ ಕುಮಾರ್ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಕೂಡ ಕೈಗೊಂಡಿರುತ್ತೇವೆ. ಇದರ ಪರಿಣಾಮವಾಗಿ ಸರ್ಕಾರ ಮೂವತ್ತು (30) ದಿನದೊಳಗೆ ನೇಮಕಾತಿಯನ್ನು ಪ್ರಾರಂಭ ಮಾಡುವದಾಗಿ ಭರವಸೆ ನೀಡಿ ಇವಾಗ ಮತ್ತೆ ವಿಳಂಬ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಹಾಗೇ ಆಗುತ್ತದೆ. ಈ ಕೂಡಲೇ ಸರ್ಕಾರ ನೀಡಿರುವ ಭರವಸೆಯಂತೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪರವಾಗಿ 300 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳು ಶಿವಮೊಗ್ಗ ಸೆಂಟ್ರಲ್ ಲೈಬ್ರರಿ ಇಂದ ಡಿಸಿ ಆಫೀಸ್‌ವರೆಗೂ ಶಾಂತಿಯುತ ಪಾದಯಾತ್ರೆಗೆ ಅನುಮತಿ ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ.