ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಹೋಬಳಿ ಕೋಡಿ ಹೊಸೂರು ಗ್ರಾಮದ ದ್ಯಾಮಣ್ಣ ಕೆರೆಗೆ ಹೊಂದಿಕೊಂಡಂತೆ ಸುಮಾರು 4-5 ಎಕರೆ ಕೆರೆ ಒತ್ತುವರಿ ಜಾಗದಲ್ಲಿ ಅಕ್ರಮವಾಗಿ ಬೆಳೆಸಿದ್ದ ಅಡಿಕೆ ಮರಗಳನ್ನು ತಹಸೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಸರ್ವೆ ನಂ. 1 ರ ಕೆರೆ ಒತ್ತುವರಿ ಜಾಗದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಎಸಿಎಫ್ ಅಧಿಕಾರಿ ಓರ್ವರು ಸುಮಾರು 3 ಎಕರೆಗೂ ಅಧಿಕ ಜಾಗದಲ್ಲಿ ಅಕ್ರಮವಾಗಿ ಸುಮಾರು 30 ವರ್ಷಗಳಿಂದ ಅಡಿಕೆ ಮರಗಳನ್ನು ಬೆಳಸಿಕೊಂಡಿದ್ದರು. ವಿಷಯ ತಿಳಿದ ತಹಸೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗು ಸರ್ವೆ ಇಲಾಖಾಧಿಕಾರಿಗಳ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post