ಕಲ್ಪ ಮೀಡಿಯಾ ಹೌಸ್
ಹೊಳೆಹೊನ್ನೂರು: ಶ್ರೀ ಸತ್ಯಧರ್ಮ ತೀರ್ಥರ 190ನೆಯ ಆರಾಧನೆಯ ಕೂಡಲಿ ಶ್ರೀ ರಘುವಿಜಯ ತೀರ್ಥರ ಅಧ್ಯಕ್ಷತೆಯಲ್ಲಿ ಸರಳವಾಗಿ ಸಂಪನ್ನಗೊಂಡಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಆರಾಧನೆಯು ಸೆ.4ರಿಂದ 6ನೆಯ ತಾರೀಕಿನವರೆಗೂ ಹೊಳೆಹೊನ್ನೂರಿನಲ್ಲಿರುವ ಶ್ರೀಸತ್ಯಧರ್ಮತೀರ್ಥರ ಮೂಲ ಬೃಂದಾವನ ಸನ್ನಿಧಿಯಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ -19 ಕಾರಣ ಮಧ್ಯಾರಾಧನೆ ಮಾತ್ರ ಆಚರಿಸಿ ಗುರುಗಳ ಆರಾಧನೆಯನ್ನು ಸಂಪನ್ನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀ ರಘುವಿಜಯ ತೀರ್ಥರು, ರುದ್ರಾಂಶ ಸಂಭೂತರಾದ ಶ್ರೀಶ್ರೀಸತ್ಯಧರ್ಮತೀರ್ಥರು ಲೌಕಿಕ ವೈದಿಕ ಉಭಯ ವಿದ್ಯೆಗಳಲ್ಲೂ ಪರಿಣತರಾಗಿ ಆಚಾರ್ಯರ ಸಿದ್ದಾಂತಕ್ಕೂ, ಪರಂಪರೆಗೂ ಬಹಳ ವಿಶಿಷ್ಟವಾದ ಸೇವೆಯನ್ನು ಮಾಡಿದ್ದಾರೆ. ಇಂತಹ ಮಹಾನುಭಾವರ ಆರಾಧನೆಯ ಪರ್ವದಿನದಂದು, ಭಕ್ತಿಯ ನಮನಗಳನ್ನು ಸಮರ್ಪಿಸಿ ಅವರ ಅನುಗ್ರಹ ಪಡೆಯೋಣ ಎಂದಿದ್ದಾರೆ.
ಸರ್ಕಾರದ ಆದೇಶದಂತೆ ಕೋವಿಡ್ -19 ನಿಯಾಮಾನುಸಾರ ಆರಾಧನೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಭಕ್ತರಿಗೆ ಮಾತ್ರ ಆರಾಧನೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post