No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Sunday, May 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ನಾನು ಎಂಬುದನ್ನು ಬಿಟ್ಟು ನಾವು ಎನ್ನೋಣ: ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಸಂದೇಶ

ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ವಿಶೇಷ ಉಪನ್ಯಾಸ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 17, 2023
in ಶಿವಮೊಗ್ಗ
0
ರಾಮಜನ್ಮಭೂಮಿಯಲ್ಲಿ ಶ್ರೀ 1008 ಸತ್ಯಾರ್ಥ ತೀರ್ಥರ 50ನೇ ವರ್ಧಂತಿ ಉತ್ಸವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಹೊಳೆಹೊನ್ನೂರು |

ನನ್ನದು, ನನಗೆ , ನನ್ನಿಂದ ಎಂಬ ಸ್ವಾರ್ಥದಿಂದ ಹೊರಬಂದು ನಮ್ಮವರು, ನನ್ನ ಪರಿವಾರ, ನಮ್ಮವರ ಕ್ಷೇಮ, ನಮ್ಮ ನಾಡು, ನಮ್ಮ ದೇಶ ಎಂಬುದನ್ನು ಅಭ್ಯಾಸ ಮಾಡಿಕೊಂಡರೆ ಜೀವನ ಸುಖಮಯವಾಗಿರುತ್ತದೆ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

ಚಾತುರ್ಮಾಸ್ಯ ಸಂದರ್ಭ ಇಲ್ಲಿನ ಶ್ರೀ ಸತ್ಯಧರ್ಮ ತೀರ್ಥರ ವೃಂದಾವನ ಸನ್ನಿಧಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿರುವ ಸ್ವಾರ್ಥಗಳ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡರೆ ವಿಶ್ವವೇ ನಮ್ಮದಾಗುತ್ತದೆ ಎಂದರು.
ಕೇವಲ ನನಗಲ್ಲದೆ ನನ್ನ ಪರಿವಾರಕ್ಕೆ, ನನ್ನ ಬಂಧು ಮಿತ್ರರಿಗೆ ಸಮಸ್ತ ವಿಶ್ವದ ಸಜ್ಜನರಿಗೆಲ್ಲ ದೇವರು ಮಾಡಿದ ಉಪಕಾರ ಎಷ್ಟೆಂದು ಸ್ಮರಿಸಬೇಕು. ಮಹಾಭಾರತದ ಪರೀಕ್ಷಿತನಿಗೆ ಗರ್ಭದಿಂದಲೇ ರಕ್ಷಣೆ ಮಾಡಿದಂತೆ ದೇವರು ನಮ್ಮನ್ನೂ ಸದಾಕಾಲ ಕಾಪಾಡಿದ್ದಾನೆ. ಕಾಪಾಡುತ್ತಲೇ ಇರುತ್ತಾನೆ. ಒಂದು ರೀತಿಯಲ್ಲಿ ನಾವೆಲ್ಲರೂ ಸಹ ವಿಷ್ಣುವಿನಿಂದ ರಕ್ಷಣೆಗೊಂಡ ಪರೀಕ್ಷಿತರೇ ಸರಿ ಎಂದರು.

ಮಹಾಭಾರತವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಕೆಲ ಪ್ರಸಂಗಗಳನ್ನು ಶ್ರೀಗಳು ಉಲ್ಲೇಖಿಸಿದರು.

ಮನುಷ್ಯನಿಗೆ ಸಂಕುಚಿತ ಬುದ್ಧಿ ಸರ್ವೇಸಾಮಾನ್ಯ. ತಾನು ಪರರಿಗೆ ಮಾಡಿದ ಸಣ್ಣಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಮಹಾ ಉಪಕಾರವನ್ನು ಎಂದಿಗೂ ಸ್ಮರಿಸುವುದಿಲ್ಲ. ಹಾಗೆಯೇ ತಾನು ಇನ್ನೊಬ್ಬರಿಗೆ ಎಷ್ಟೇ ಅಪಕಾರ ಮಾಡಿದರೂ ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಸಣ್ಣ ಅಪಕಾರವನ್ನು ಜೀವನವಿಡಿ ಮರೆಯುವುದಿಲ್ಲ. ಇದು ಮನುಷ್ಯನ ಸಹಜ ಸ್ವಭಾವ. ಇಂತಹ ಮನೋಧರ್ಮದಲ್ಲಿ ದೇವರನ್ನು ನೆನೆಯುವುದಾದರೂ ಹೇಗೆ..? ಅದಕ್ಕೆ ಪರೀಕ್ಷಿತ ನಂತೆ ಕೇವಲ ತನಗೆ ಮಾಡಿದ ಉಪಕಾರವನ್ನು ಸ್ಮರಿಸಿದೇ ತನ್ನ ಹಿರಿಯರಿಗೆ ಹಾಗೂ ತನ್ನ ಬಂಧು ಮಿತ್ರರಿಗೆ, ನಂತರ ಇಡೀ ವಿಶ್ವಕ್ಕೆ ದೇವರು ಮಾಡುವ ಉಪಕಾರವನ್ನೆಲ್ಲ ನಾವು ಸ್ಮರಿಸಬೇಕು. ಆಗ ಶ್ರದ್ಧೆ ಭಕ್ತಿ ಇಮ್ಮಡಿಯಾಗುವುದು. ವರ್ತಮಾನದ ಬದುಕು ಬಂಗಾರಮಯವಾಗುವುದು ಎಂದರು.
ಪರೀಕ್ಷಿತನಿಗೆ ದೇವರು ಮೂಲದಿಂದಲೇ ರಕ್ಷಣೆ ಒದಗಿಸಿದ. ಬ್ರಹ್ಮಾಸ್ತçವನ್ನೂ ಗೌರವಿಸಿ ಗರ್ಭವನ್ನೂ ಕಾಪಾಡಿದ. ಇದನ್ನು ಪರೀಕ್ಷಿತ ಮಹಾರಾಜ ಬದುಕಿನ ಉದ್ದಕ್ಕೂ ಸ್ಮರಿಸಿದ. ಮಾತ್ರವಲ್ಲ,

Also read: ಸಮಾಜಮುಖಿ ಸೇವೆಗಳಿಂದ ಜನಮಾನಸ ತಲುಪುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ

ಆ ಮಹಾ ವಿಷ್ಣುವಿನ ಆಜ್ಞೆಯಂತೆ ಬ್ರಹ್ಮ ಸೃಷ್ಟಿ ಮಾಡುವಾತ. ವಿಷ್ಣು ಸ್ವಯಂ ರಕ್ಷಣೆ ಮಾಡುವಾತ. ರುದ್ರದೇವರು ಅದರ ಸಂಹಾರ ಮಾಡುವವರು. ಅಶ್ವತ್ಥಾಮಾಚಾರ್ಯರು ಸ್ವಯಂ ರುದ್ರಾವತಾರಗಳು. ಹೀಗಿರುವಾಗ ಇಡೀ ಸೃಷ್ಟಿಯ ಸಂಹಾರವೇ ಅವರ ಕೈಯಿಂದ ಆಗುವಾಗ, ನಾನು ಗರ್ಭದಲ್ಲಿಯ ಶಿಶು.ಆದರೂ ತಾಯಿಯ ಕುಕ್ಷಿಯಲ್ಲಿ ಬ್ರಹ್ಮಾಸ್ತ್ರದಿಂದ ಆ ಕೃಷ್ಣ ಪರಮಾತ್ಮ ನನ್ನನ್ನು ರಕ್ಷಣೆ ಮಾಡಿದ. ಪುನಃ ಗರ್ಭದಿಂದ ಹೊರ ಬಂದಾಗ ಮತ್ತೆ ಮೃತನಾದೆ.ಆಗ ಮತ್ತೆ ನನ್ನನ್ನು ಬದುಕಿಸಿದ. ಅವನ ರಕ್ಷಣೆಯಿಂದಲೇ ಎಂತಹ ಬ್ರಹ್ಮಾಸ್ತ್ರದಿಂದಲೂ ಬದುಕಬಹುದು ಎಂದು ಪರೀಕ್ಷಿತ ಉಪಕಾರದ ಸ್ಮರಣೆ ಮಾಡಿದ. ಕೇವಲ ತನಗಷ್ಟೇ ಅಲ್ಲದೇ ತನ್ನ ಪೂರ್ವಜರಿಗೂ ಮಾಡಿದ ಉಪಕಾರವನ್ನು ಸ್ಮರಿಸಿದ. ನಮಗೆ ಇಂಥ ಸ್ಮರಣಾ ಮನೋಭಾವ ರೂಢಿಗತವಾಗಬೇಕು ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಕೇವಲ ನನ್ನ ಕಷ್ಟಗಳು ಅಂತ ನೋಡದೆ ನನ್ನೊಂದಿಗೆ ಎಲ್ಲ ವಿಶ್ವವೇ ನನ್ನ ಪರಿವಾರ ಎಲ್ಲ ಸಜ್ಜನರು ನನ್ನ ಬಾಂಧವರು ಎಂದು ತಿಳಿದು, ದೇವರು ಎಲ್ಲರ ಕಷ್ಟಗಳನ್ನು ಪರಿಹಾರ ಮಾಡಲಿ ಹಾಗೂ ಮಾಡುತ್ತಾನೆ ಎಂಬ ಚಿಂತನೆಯೇ ನಮ್ಮದಾಗಬೇಕು. ಕೇವಲ ಬಂದ ಕಷ್ಟಗಳನ್ನು, ಆದ ರೋಗಗಳನ್ನು ದೇವರ ಮುಂದೆ ತೋಡಿಕೊಂಡು ಸದಾ ರೋದಿಸುವುದಕ್ಕಿಂತ, ಬಾರದೇ ಇರುವ ಕಷ್ಟಗಳನ್ನು ಪಟ್ಟಿಮಾಡಿ. ಆಗದೇ ಇರುವ ಮಹಾ ಮಹಾ ರೋಗಗಳನ್ನು ಪಟ್ಟಿ ಮಾಡಿ. ನೆನೆದಾಗ ಅದನ್ನು ಸಂತೋಷದಿಂದ ದೇವರ ಮುಂದೆ ಹೇಳಿಕೊಂಡಾಗ ನಿಶ್ಚಿತವಾಗಿ ಮನಸ್ಸಿಗೆ ದುಃಖಕ್ಕಿಂತಲೂ ಸುಖ ಸಮಾಧಾನಗಳೇ ದೊರಕುವುದು ನಿಶ್ಚಿತ ಎಂದರು.

`ಜನ್ಮ ಮೃತ್ಯು ಜರಾವ್ಯಾಧಿ ದುಃಖ ದೋಷಾನುದರ್ಶನಂ’ – ಹೀಗೆ ಇನ್ನೊಬ್ಬರ ಕಷ್ಟಗಳಿಂದ ನಮಗೆ ವೈರಾಗ್ಯದ ಪಾಠ.. ಇನ್ನೊಂದು ಅವನ ಉಪಕಾರ ಸ್ಮರಣೆ ನಮ್ಮೆಲ್ಲರ ಕರ್ತವ್ಯವೆಂದು ತಿಳಿದು ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.

http://kalpa.news/wp-content/uploads/2023/05/VID-20230516-WA0005.mp4

ದೇವರಲ್ಲಿ ಪ್ರತಿಬಾರಿ ಕೇವಲ ನನಗಾಗಿ ಪ್ರಾರ್ಥಿಸದೇ, ನಮಗಾಗಿ ಎಂದು ಪ್ರಾರ್ಥಿಸುವ ಔದಾರ್ಯ ಬೆಳೆದರೆ ಅದು ಸಾರ್ಥಕ. ಅದು ನನ್ನ ವಂಶಕ್ಕೆ, ಸಂಸ್ಕೃತಿಗೆ, ಭವ್ಯ ಸನಾತನ ಪರಂಪರೆಗೆ, ನಾಡಿಗೆ ಮತ್ತು ದೇಶಕ್ಕೆ ನೀಡುವ ಗೌರವ. ಈ ನಿಟ್ಟಿನಲ್ಲಿ ದಿನವೂ ವಿಶಾಲರಾಗೋಣ ಎಂದು ಸ್ವಾಮೀಜಿ ತಿಳಿಸಿದರು.

ಮಠದ ದಿವಾನದರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಸುಬ್ಬಣ್ಣಾಚಾರ್ಯ, ಮಠದ ವ್ಯವಸ್ಥಾಪಕ ನವರತ್ನ ಶ್ರೀನಿವಾಸಾಚಾರ್ಯ ಇತರರು ಇದ್ದರು.
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: HolehonnuruKannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaShivamoggaNewsಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಹೊಳೆಹೊನ್ನೂರು
Share198Tweet123Send
Previous Post

ಸಮಾಜಮುಖಿ ಸೇವೆಗಳಿಂದ ಜನಮಾನಸ ತಲುಪುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ

Next Post

ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಅಪಹರಣ | ಪತಿಯಿಂದಲೇ ಕೃತ್ಯ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಅಪಹರಣ | ಪತಿಯಿಂದಲೇ ಕೃತ್ಯ?

ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಅಪಹರಣ | ಪತಿಯಿಂದಲೇ ಕೃತ್ಯ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಹಿರಿಯ ರಾಜಕಾರಣಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ವಿಧಿವಶ

ಹಿರಿಯ ರಾಜಕಾರಣಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ವಿಧಿವಶ

May 10, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

May 9, 2026
ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

May 9, 2026
ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

May 9, 2026
ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

May 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL