ಕಲ್ಪ ಮೀಡಿಯಾ ಹೌಸ್
ಹೊನ್ನಾಳಿ: ತಾಲೂಕಿನ ಪೋಲಿಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗರ್ಭಿಣಿ ಪೊಲೀಸ್ ಪೇದೆ ಚಂದ್ರಕಲಾ (36) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಚಂದ್ರಕಲಾ ಅವರಿಗೆ ಕಳೆದ ಸುಮಾರು 15 ದಿನಗಳ ಹಿಂದೆ ಕೋವಿಡ್ ದೃಢವಾಗಿತ್ತು. ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
2008ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಚಂದ್ರಕಲಾ ಅವರು ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಅವರ ಪತಿ ಭೋಜರಾಜ್ ಸಹ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಂಪತಿಗಳಿಬ್ಬರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಡಿಸೆಂಬರ್ 2020ರಲ್ಲಿ ಭೋಜರಾಜ್ ಇವರನ್ನು ಹೊನ್ನಾಳಿ ಪೊಲೀಸ್ ಠಾಣೆಯಿಂದ ಚನ್ನಗಿರಿ ತಾಲೂಕು ಬಸವಪಟ್ಟಣ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಮೃತರು ಆರು ತಿಂಗಳು ಗರ್ಭಿಣಿಯಾಗಿದ್ದು, ಒಂದುವರೆ ವರ್ಷದ ಮಗು ಸಹ ಇರುವುದಾಗಿ ತಿಳಿದು ಬಂದಿದೆ. ಮೃತರ ಅಂತ್ಯಸಂಸ್ಕಾರ ಮಂಗಳವಾರ ಮಧ್ಯಾಹ್ನ ತಾಲೂಕಿನ ಹೆಚ್ ಕಡದಕಟ್ಟೆ ಗ್ರಾಮದಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post