ಕಲ್ಪ ಮೀಡಿಯಾ ಹೌಸ್
ದಕ್ಷಿಣ ಆಫ್ರಿಕಾ: ಇಲ್ಲಿನ ಮಹಿಳೆಯೊಬ್ಬರು ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಗೋಸಿಯಾಮ್ ತಾಮರಾ ಸಿತೋಲ್ (37) ದಕ್ಷಿಣ ಆಫ್ರಿಕಾದ ಗೌಟೆಂಗ್ ನಿವಾಸಿಯಾಗಿದ್ದು, ಏಳು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಆಪರೇಷನ್ ಮೂಲಕ ಡೆಲಿವರಿ ಮಾಡಲಾಗಿದ್ದು, ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಗೋಸಿಯಾಮ್ ಪತಿ ಟೆಬೊಹೊ ತಿಳಿಸಿದ್ದಾರೆ.
ಈ ಕುರಿತು ಟೆಬೊಹೊ ಟ್ವೀಟ್ ಮಾಡಿದ್ದು, ನಮಗೆ ಮೂವರು ಮಕ್ಕಳು ಹುಟ್ಟಬಹುದು ಎಂದುಕೊಂಡಿದ್ದೆವು. ಆದರೆ 10 ಮಕ್ಕಳು ಹುಟ್ಟಿರುವುದು ಸಂತಸ ತಂದಿದೆ. ಗೋಸಿಯಾಮ್‌ಗೆ ಏಳು ತಿಂಗಳು ತುಂಬಿ ಏಳು ದಿನಗಳಾಗಿತ್ತು. ಯಾವುದೇ ತೊಂದರೆಯಿಲ್ಲದೇ ಮಕ್ಕಳು ಜನಿಸಿರುವುದಾಗಿ ಹೇಳಿದ್ದಾರೆ.
ಮೊರೊಕ್ಕಾದ ಮಲಿಯಾನ್ ಹಲೀಮಾ ಸಿಸ್ಸೆ ಎಂಬ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 10 ಮಕ್ಕಳಿಗೆ ಜನ್ಮ ನೀಡಿ ಆ ದಾಖಲೆಯನ್ನು ಗೋಸಿಯಾಮ್ ಮುರಿದಿದ್ದಾರೆ. ಮೊದಲೇ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆ ಇದೀಗ 12 ಮಕ್ಕಳ ತಾಯಿಯಾಗಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post