ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನನ್ನ ಬಾಲ್ಯದ ದಿನಗಳನ್ನು ಮತ್ತೊಮ್ಮೆ ನೆನಪಿಸಿತು ಈ ಚಲನಚಿತ್ರದ ಹೆಸರು ಪೆನ್ಸಿಲ್ ಬಾಕ್ಸ್. ಬಂಧುಗಳೇ ನೆನಪಿದೆಯೇ!! ಆ ಪೆನ್ಸಿಲ್ ಬಾಕ್ಸ್ ನಮ್ಮ ಪುಟ್ಟ ದೇವಾಲಯವಾಗಿತ್ತು, ಅದಕ್ಕೆ ಅಂಟಿಸಿದ ದೇವರ ಚಿತ್ರಕ್ಕೆ ಕೈ ಮುಗಿದ ಆ ದಿನಗಳು. ನಮ್ಮ ಬಳಿ ಇದ್ದ ಆಟ ಆಡುವ ಅತ್ಯಂತ ದೊಡ್ಡ ವಾಹನವೂ ಅದು. ಅದರ ಒಂದು ವಸ್ತು ಕಳೆದು ಹೋದಾಗ ಆದ ಆ ಬೇಸರ. ಆ ಒಂದು ಬಾಕ್ಸ್’ಗಾಗಿ ಅಪ್ಪನ ಬಳಿ ಹಟ ಹಿಡಿದ ಆ ದಿನಗಳು. ಪ್ರಾಯಶಃ ಪ್ರತಿಯೊಂದು ಕ್ಷಣವೂ ನಮ್ಮ ಕಣ್ಣಂಚಿನಲ್ಲಿ ಹಾದು ಹೋಗುತ್ತದೆ.
ನೆನಪಿರಲಿ ಆ ಪುಟ್ಟ ಬಾಕ್ಸ್’ನಲ್ಲಿ ನಮ್ಮ ಅಪ್ಪ ಅಮ್ಮ ಕಷ್ಟಪಟ್ಟು ದುಡಿದು ತನ್ನ ಮಗುವಿನ ಬಗೆಗೆ ಇರಿಸಿದ ನಿರೀಕ್ಷೆ, ಪ್ರೀತಿ ಎಲ್ಲವೂ ಇತ್ತು. ಮನೆಯ ಹಿರಿಯರಿಂದ ಹಿಡಿದು ಸಣ್ಣ ಮಕ್ಕಳ ಮನಸ್ಸನ್ನೂ ಮುಟ್ಟಬಲ್ಲ ಅದ್ಭುತ ಪರಿಕಲ್ಪನ್ಯೆ ಜೊತೆಗೆ ತನ್ನ ಪುಟ್ಟ ಮಕ್ಕಳ ಬಗೆಗಿನ ದೊಡ್ಡ ಕನಸನ್ನು ಕಟ್ಟಿ ಕೊಂಡಿರುವ ಪ್ರತಿಯೊಬ್ಬ ತಂದೆ ತಾಯಿಯ ಪರಿಶ್ರಮವನ್ನು ನಮ್ಮ ಮುಂದೆ ತಂದಿರಿಸುವ ಈ ಚಲನಚಿತ್ರ ಇದುವೇ ಬರುವ ನವೆಂಬರ್ 29ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಈ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿರುವ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಮತ್ತು ಭರ್ಜರಿ ಕಾಮಿಡಿ ಖ್ಯಾತಿಯ ದೀಕ್ಷಾ ಡಿ ರೈ ಅವರ ಜೊತೆಗಿನ ಪುಟ್ಟ ಸಂದರ್ಶನ.
ಪ್ರಶ್ನೆ 1: ಸಣ್ಣ ವಯಸ್ಸಿನಲ್ಲಿ ಚಲನಚಿತ್ರದಲ್ಲಿ ನಟನೆ ಇದರ ಅನುಭವ ಹೇಗಿತ್ತು?
ದೀಕ್ಷಾ: ತುಂಬಾ ಖುಷಿಯಾಗಿದೆ, ಅದೂ ಕೂಡ ದಿಗ್ಗಜ ನಟರೊಂದಿಗೆ ಪಾತ್ರ ನಿರ್ವಹಿಸಿದ ಅನುಭವ. ಮೊದಲಿಗೆ ಸ್ವಲ್ಪ ಭಯ ಇತ್ತು ಆದರೆ ಶೂಟಿಂಗ್ ಸಂಧರ್ಭದಲ್ಲಿ ಎಲ್ಲರೂ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮತ್ತು ನನ್ನ ತಂದೆ ತಾಯಿ ಅಕ್ಕ ಗುರು ಹಿರಿಯರು ಮತ್ತು ಎಲ್ಲರ ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಸ್ಪೂರ್ತಿಯಾಗಿದೆ.
ಪ್ರಶ್ನೆ 2: ಇದು ನಿಮ್ಮ ಮೊದಲ ಚಲನಚಿತ್ರ ಇದರ ಬಗ್ಗೆ ನಿಮ್ಮ ಅನಿಸಿಕೆ?
ದೀಕ್ಷಾ: ಕಿರುತೆರೆಯಲ್ಲಿ ನಟಿಸುತ್ತಿದ್ದ ನನಗೆ ಇದು ಹೊಸ ಅನುಭವ ಅದೂ ಕೂಡ ದೊಡ್ಡ ಪರದೆಯಲ್ಲಿ ನಿಜಕ್ಕೂ ಇದೊಂದು ಅದ್ಭುತ ಅವಕಾಶ.
ಪ್ರಶ್ನೆ 3: ಶೂಟಿಂಗ್ ದಿನಗಳು ಹೇಗಿತ್ತು?
ದೀಕ್ಷಾ: ತುಂಬಾ ಸ್ನೇಹ ಪೂರ್ಣ ವಾತಾವರಣ. ತುಂಬಾ ಜನ ಹೊಸ ಗೆಳೆಯರು ಸಿಕ್ಕಿದ್ರು. ತಪ್ಪಿದಾಗ ಎಲ್ಲರೂ ಒಟ್ಟಾಗಿ ಸರಿಪಡಿಸಿಕೊಳ್ಳುತ್ತಾ ಇದ್ವಿ. ಆಟ ಆಡ್ತಾ ಇದ್ವಿ. ಇವು ಎಂದಿಗೂ ಮರೆಯಲಾಗದ ದಿನಗಳು.
ಪ್ರಶ್ನೆ 4: ಈ ಪೆನ್ಸಿಲ್ ಬಾಕ್ಸ್ ಚಲನಚಿತ್ರವನ್ನು ಯಾಕೆ ನೋಡಬೇಕು?
ದೀಕ್ಷಾ: ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಇದೆ ಮತ್ತು ಮನೆಯವರೆಲ್ಲ ಒಟ್ಟಾಗಿ ವೀಕ್ಷಿಸಲು ಯೋಗ್ಯವಾದ ಸಿನಿಮಾ. ಉತ್ತಮ ಹಾಡುಗಳ ಜೊತೆಗೆ ಹಲವಾರು ಹಾಸ್ಯ ಸನ್ನಿವೇಶಗಳಿವೆ.
ಪ್ರಶ್ನೆ 5: ಶೂಟಿಂಗ್ ದಿನಗಳಲ್ಲಿ ಅತ್ಯಂತ ಖುಷಿಯ ದಿನಗಳು ಯಾವುದು?
ದೀಕ್ಷಾ: ಉಡುಪಿಯ ಕಿಂಗ್ ಆಫ್ ಕಿಂಗ್ಸ್ ದ್ವೀಪದಲ್ಲಿ ಸ್ನೇಹಿತರು ಮತ್ತು ನಮ್ಮ ತಂಡದ ಎಲ್ಲಾ ಒಟ್ಟಾಗಿ ಕಳೆದ ದಿನ ತುಂಬ ಹೊತ್ತು ಆಟ ಆಡಿದ್ವಿ ಖುಷಿಯಾಗಿತ್ತು.
ಪ್ರಶ್ನೆ 6: ಕೊನೆಯ ಪ್ರಶ್ನೆ ಈ ಚಲನಚಿತ್ರ ನೋಡ ಬಯಸುವ ಎಲ್ಲರಿಗೂ ನಿನ್ನ ಮಾತು?
ದೀಕ್ಷಾ: ಧನ್ಯವಾದ ಹೇಳಲಿಕ್ಕೆ ಇಷ್ಟ ಪಡುತ್ತೇನೆ. ಇಷ್ಟು ದಿನ ನಾನು ತಪ್ಪಿದರೆ ತಿದ್ದಿದೀರಿ, ಗೆದ್ದಾಗ ಪ್ರೋತ್ಸಾಹ ಮಾಡಿದ್ದೀರಿ. ಅದೇ ರೀತಿ ನಮ್ಮ ಪೆನ್ಸಿಲ್ ಬಾಕ್ಸ್ ಚಲನಚಿತ್ರವನ್ನು ನೋಡುವ ಮೂಲಕ ಕೇವಲ ನನಗೆ ಮಾತ್ರವಲ್ಲ ನಮ್ಮ ಎಲ್ಲಾ ಚಿತ್ರ ತಂಡಕ್ಕೆ ನಿಮ್ಮ ಆಶೀರ್ವಾದದ ಜೊತೆಗೆ ನಿಮ್ಮ ಬೆಂಬಲವಿರಲಿ ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಈ ಚಲನಚಿತ್ರವನ್ನು ವೀಕ್ಷಿಸಿ.
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್’ಕುಮಾರ್’ರಂತಹ ದಿಗ್ಗಜ ನಟರೊಂದಿಗೆ ವೇದಿಕೆ ಹಂಚಿಕೊಂಡ ಈ ಪುಟ್ಟ ಪ್ರತಿಭೆಯ ಜೊತೆಗೆ ಸಂದರ್ಶನವೇ ಒಂದು ವಿಶೇಷ ಅನುಭವ. ಜೊತೆಗೆ ಮುಂದಿನ ಸಾಲುಗಳಲ್ಲಿ ಈ ಚಿತ್ರದ ಬಗೆಗಿನ ಒಂದಷ್ಟು ಮಾಹಿತಿ.
ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದೃಶ್ಯ ಮೂವೀಸ್ ಬ್ಯಾನರ್’ನಲ್ಲಿ, ದಯಾನಂದ ಎಸ್.ರೈ. ಬೆಟ್ಟಂಪಾಡಿ ನಿರ್ಮಾಣದ ರಝಾಕ್ ಪುತ್ತೂರು ನಿರ್ದೇಶನದ, ತುಳುನಾಡಿನ ಪ್ರಬುದ್ಧ ಕಲಾವಿದರಾದ ಅರವಿಂದ ಬೋಳಾರ್ ಮತ್ತು ಭೂಜರಾಜ್ ವಾಮಂಜೂರು ಹಾಗು ರಮೇಶ್ ರೈ ಕುಕ್ಕುವಳ್ಳಿ ಅಭಿನಯಿಸಿರುವ ಜೊತೆಗೆ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಖ್ಯಾತಿಯ ದೀಕ್ಷಾ ಡಿ ರೈ ಪ್ರಮುಖ ಪಾತ್ರ ನಿರ್ವಹಿಸಿರುವ, ನಮ್ಮ ಅದೆಷ್ಟೋ ಯುವ ಮತ್ತು ಬಾಲ ಪ್ರತಿಭೆಗಳಿಗೆ ವೇದಿಕೆ ನೀಡಿದ, ಸೆನ್ಸಾರ್ ಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಪರಿಗಣಿಸಲ್ಪಟ್ಟ ಚಲನಚಿತ್ರವಿದು.
ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗಲೇಬೇಕು. ಜೊತೆಗೆ ನಮ್ಮ ನೈಜ ಪ್ರತಿಭೆಗಳಿಗೆ ಪ್ರೋತ್ಸಾಹದ ಜೊತೆ ಜೊತೆಗೆ ಸೂಕ್ತ ವೇದಿಕೆಯೂ ದೊರೆಯಬೇಕು. ನಮ್ಮವರೇ ನಿರ್ಮಿಸಿರುವ ಈ ಕನ್ನಡ ಚಲನಚಿತ್ರಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ. ದಯವಿಟ್ಟು ಪ್ರತಿಯೊಬ್ಬರೂ ನವೆಂಬರ್ 29ರಂದು ಬಿಡುಗಡೆಯಾಗುತ್ತಿರುವ ಪೆನ್ಸಿಲ್ ಬಾಕ್ಸ್ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಜೊತೆಗೆ ನಿಮ್ಮವರನ್ನು ಕರೆತನ್ನಿ ಮತ್ತು ಎಲ್ಲರಿಗೂ ತಿಳಿಸುವ ಮೂಲಕ ಕನ್ನಡದ ಒಂದು ಅತ್ಯುತ್ತಮ ಚಲನಚಿತ್ರವನ್ನು ಪ್ರೋತ್ಸಾಹಿಸುವ. ಚಿತ್ರತಂಡದ ಸರ್ವ ಸದಸ್ಯರಿಗೂ ಶುಭ ಹಾರೈಕೆಯೊಂದಿಗೆ…
Get in Touch With Us info@kalpa.news Whatsapp: 9481252093
Discussion about this post