ಬಹಳ ಆಸೆಯಲ್ಲಿದ್ದ ಇಮ್ರಾನ್, ನಾನೊಮ್ಮೆ ಪಾಕಿನ ಪ್ರಧಾನಿ ಆಗಲೇಬೇಕು ಎಂದು. ಅಂತೂ ಯಾರ ಕೈಗಾದರೂ ತನ್ನ ಜುಟ್ಟನ್ನು ಕೊಟ್ಟಾದರೂ ಪ್ರಧಾನಿ ಆಗಬೇಕೆನ್ನುವ ಆಸೆ ಈಡೇರಿತು. ಅಲ್ಪ ಮತದಲ್ಲಿ, ಎರವಲು ಪಡೆದು ಪ್ರಧಾನಿಯೂ ಆಗಿಬಿಟ್ಟ. ಈಗ? ಅವನಿಗೆ ಅಲ್ಲಿನ ಎಡವಟ್ಟು ಅರ್ಥವಾಗಿದೆ.
ನನಗೆ ಲಭಿಸಿದ ಜಾತಕ ಪ್ರಕಾರ, ಈತ ಒಬ್ಬ ಬಹಳ ಬುದ್ಧಿವಂತ ಮನುಷ್ಯ. ಎಲ್ಲಿಯವರೆಗೆ ಬುದ್ಧಿವಂತ ಎಂದರೆ ಮೋದಿಯವರಿಗೆ ಸರಿಸಮಾನ ಎನ್ನಬಹುದು. ಅದು ಹೇಗೆಂದರೆ ಇವನ ಜಾತಕದಲ್ಲಿ ಕನ್ಯಾರಾಶಿಯಲ್ಲಿ 29. 5° ಶನಿ ಇರುವುದು.
ಒಂದು ಗಾದೆ ಮಾತು ಹೇಳುತ್ತಾರಲ್ವೇ? ಚಾಪೆಯ ಅಡಿಯಲ್ಲಿ ನುಗ್ಗಿದರೆ ರಂಗೋಲಿಯಡಿಯಲ್ಲಿ ನುಸುಳುವವನು ಎಂದು. ಆದರೆ ಈತನ ಬುದ್ಧಿವಂತಿಕೆಗೆ ಸರಿಯಾದ ವೇದಿಕೆ ಪಾಕಿಸ್ಥಾನ ಅಲ್ಲವಾಗಿದೆ. ಒಂದು ವೇಳೆ ಆರ್ಥಿಕ ಬಲಿಷ್ಠತೆ ಇರುತ್ತಿದ್ದರೆ ಇವನನ್ನು ಮಣಿಸಲು ಕಷ್ಟ ಇತ್ತು. ಒಬ್ಬ ಬಲಾಡ್ಯನೇ ಆಗಿದ್ದರೂ ನಾಲ್ಕು ದಿನ ಊಟ ಇಲ್ಲದಿದ್ದರೆ ಹೇಗೆ ಹೋರಾಡಿಯಾನು?
ಕುಂಭ ರಾಶಿ, ವೃಶ್ಚಿಕ ಲಗ್ನ ಇವನದ್ದು. ಲಗ್ನದಲ್ಲೇ ನಿಪುಣ ಯೋಗ. ಮೇಷದಲ್ಲಿ ಗುರು. ಭಕ್ತಿ, ಜ್ಞಾನ ಶೂನ್ಯನು. ವಿಪರೀತ ಆತಂಕದ ಸ್ವಭಾವ Exciting Nature. ಅಂದರೆ ತಕ್ಷಣ BP ಏರುವಂತಹ ಸ್ವಭಾವ. ತನ್ನ ಸೊತ್ತನ್ನು ಒಂದಿಂಚೂ ಕಳೆದುಕೊಳ್ಳಲು ಇಷ್ಟವಿಲ್ಲದ ಮನಸ್ಸಿನವನು. ಈಗ ಅವನಿಗೆ ಶುಕ್ರದಶೆಯೂ, ಗೋಚರದಲ್ಲಿ ಶನಿಯು ಲಾಭ ಗತನೂ, ಗುರು ಈಗ ಕರ್ಮ ಸ್ಥಾನ, ಮುಂದಿನ ತಿಂಗಳ ನಂತರ ಲಾಭ ಸ್ಥಾನದಲ್ಲಿ ಸಂಚರಿಸುವವನು. ಇದೆಲ್ಲಾ ಉತ್ತಮ ಫಲಗಳೇ ಆಗಿವೆ. ಆದರೆ ಕನ್ಯಾ ರಾಶಿಯ ಶನಿಗೆ, ಈಗ ಧನುರಾಶಿಯ ಶನಿಸಂಚಾರವು ದೊಡ್ಡ ಬಿಕ್ಕಟ್ಟನ್ನು ತರುವಂತಹ ಗೋಚರ ಸ್ಥಿತಿ.
ರಾವಣನಂತೆಯೇ ಇಮ್ರಾನನ ಕತೆಯೂ!
ಡಬ್ಬ ಬಡಿದೇ ಶತ್ರುಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಂತನಾದರೂ ಈಗ ಡಬ್ಬ ಬಡಿದು ದೇಶ ಸುತ್ತುವ ಹಾಗಾಗಿದೆ. ಯಾವಾಗಲೂ ಎಷ್ಟೇ ಉತ್ತಮ ಜಾತಕವಿರಲಿ, ಅವರಿಗೆ ದೇಶ- ಕಾಲ- ಪಾತ್ರ ಎಂಬ ನಿಯಮವೂ ಇದೆ. ಒಬ್ಬ ಪೋಲಿ ಬ್ರಾಹ್ಮಣ ಚತುರ್ವೇದ ಪಂಡಿತನಾದರೇನು ಫಲವೋ ಹಾಗೆಯೇ ಇವನು. ರಾವಣನಿಗೆ ಏಕಾದಶದಲ್ಲಿ ಬಲಿಷ್ಟ ಶನಿ. ಆದರೆ ಶನಿಯ ಮೂರನೆಯ ಕೆಟ್ಟ ಪೂರ್ಣ ದೃಷ್ಟಿಯು ಲಗ್ನಕ್ಕಿದೆ. ಇದು ದುರ್ಬುದ್ಧಿಯನ್ನು ಪ್ರೇರೇಪಿಸಿ ಜೀವ ಕಳೆದುಕೊಳ್ಳುವಂತೆ ಮಾಡಿ ಬಿಟ್ಟಿತು. ಅದೇ ರೀತಿ ಇಮ್ರಾನನ ಕಥೆಯೂ ಆಗಿದೆ.
ಈಗ ನಡೆಯುವ ಶುಕ್ರದಶೆಯು ಖರದ್ರೇಕ್ಕಾಣಾಧಿಪತ್ಯ (ಮರಣ, ನಾಶ)ದ ದಶೆ. ವ್ಯಯಾಧಿಪತ್ಯವೂ ಇರುವುದರಿಂದ ಇವನಿಂದ ಎಲ್ಲವೂ ಕೃಷ್ಣಾರ್ಪಣವಾಗಿ ಬಿಡುವುದು ಖಚಿತ. ಇವನ ಜಾತಕದ ಪ್ರಕಾರ ಇವನಿಗೆ ಅವಸರ ಜಾಸ್ತಿ. ಈ ಅವಸರದ ನಿರ್ಧಾರ ಅವಸಾನಕ್ಕೆ ಕಾರಣವಾಗುತ್ತದೆ. ತನ್ನ ಶಿಸ್ತನ್ನು ಅವಸರದಲ್ಲಿ ಪ್ರಕಟಿಸಲು ಹೊರಟಾಗಲೇ ಅಪಾಯ ಆಗುತ್ತದೆ. ಇದು ಸಾಲದ್ದೆಂಬುದಕ್ಕೆ ಈ ಸಲದ ಅತಿಚಾರ ಗುರು, ಮಾರ್ಚ್ ನಂತರ ಧನುರಾಶಿಯಲ್ಲಿ ಶನಿಯೊಡನೆ ಕೇತು ಯುತಿಯೂ ವಾತಾವರಣದ ಅನಾಹುತ ಸೂಚಕರಾಗುತ್ತಾರೆ.
ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾಗುತ್ತದೆ
ಮೊದಲೇ ನಿಯಂತ್ರಣವಿಲ್ಲದ ಸರಕಾರದ ಅಧಿಪತ್ಯ, ಮತಾಂಧರ ಕೈಯೊಳಗಿರುವ ಸರಕಾರ. ಹೀಗೆಲ್ಲ ಇದ್ದಾಗ ಇದರ ದೊಡ್ಡ ದುರಂತಕ್ಕೆ ಇಮ್ರಾನ್ ಖಾನ್ ನಾಯಕತ್ವ ವಹಿಸಿಕೊಳ್ಳಲು ಬಂದದ್ದಾಗಿದೆ. ಪ್ರಪಂಚವನ್ನು ಹತ್ತಿರ ಇಟ್ಟುಕೊಳ್ಳಬೇಕಾದರೆ ಮತಾಂಧ ಭಯೋತ್ಪಾದಕರನ್ನು ನಾಶ ಮಾಡುವ ಸಂಕಲ್ಪಕ್ಕೆ ಜಾಗತಿಕವಾಗಿ ಕೈ ಜೋಡಿಸಬೇಕು. ಆಗ ಮತಾಂಧರ ಆಕ್ರೋಶಕ್ಕೆ ಇಮ್ರಾನನು ಬಲಿಯಾಗಬೇಕಾದೀತು. ಬುದ್ಧಿವಂತ ಇಮ್ರಾನನು ಇದರಿಂದ ತಪ್ಪಿಸಿಕೊಳ್ಳಲು ಮೇಲ್ನೊಟಕ್ಕೆ ಶಾಂತಿ ಮಂತ್ರ ಜಪಿಸಿ ಒಮ್ಮೆ ಸಮರದ ವಾತಾವರಣ ತಿಳಿ ಮಾಡಬಹುದು. ಆದರೆ ಮತ್ತೆ ಭಯೋತ್ಪಾದಕರ ನೆರಳಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡಲೇಬೇಕಾದೀತು. ಇದಕ್ಕೆ ಇಡೀ ಪಾಕಿಸ್ಥಾನವನ್ನೇ ಪಣ ಇಡಬೇಕಾದೀತು. ಇದು ಪಟಾಕಿ ಅಂಗಡಿಯಲ್ಲಿ ಗಲಾಟೆ ಮಾಡಿದಂತಾದೀತು. ಅಂತೂ ಪಾಕಿಸ್ಥಾನದಲ್ಲಿ ಬಹುದೊಡ್ಡ ದುರಂತವಾಗುವುದು ಖಚಿತ. ಹಿರೋಶಿಮಾ ನಾಗಸಾಕಿ ದುರಂತದ ಇನ್ನೊಂದು ಮುಖ ಪಾಕಿಸ್ಥಾನವಾಗಲಿದೆ ಎಂದರೂ ತಪ್ಪಾಗದು.
ಮರುಕಳಿಸಲಿದೆ ಚರಿತ್ರೆ
ಎಪ್ರಿಲ್ ಮೊದಲ ವಾರದಲ್ಲಿ ಕುಜ ವೃಷಭ ರಾಶಿಯಲ್ಲಿ ರೋಹಿಣಿ ನಕ್ಷತ್ರದಲ್ಲಿದ್ದು, ತನ್ನ ಅಷ್ಟಮ ಪೂರ್ಣ ದೃಷ್ಟಿಯನ್ನು ಶನಿ ಕೇತುಗಳ ಮೇಲೆ ಬೀರಿದಾಗ ಈ ದುರಂತ ನಡೆಯುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಇದಕ್ಕೆ ನಾಶ ಒಂದೇ ಪರಿಹಾರವಲ್ಲದೆ, ಬೇರೆ ಪರಿಹಾರವಿಲ್ಲ. ಧನುರಾಶಿಯಲ್ಲಿ ಶನಿ ಕೇತು ಯುತಿ 1871 ರಲ್ಲಿ ಬಂದಿದ್ದಾಗ ಜಗತ್ತಿನಲ್ಲಿ ಆಘಾತಕಾರಿ(Traumatic in term of psychologically painful) ವಾಯಾವರಣ ಬಂದಿತ್ತೆಂದು ಕೆಲ ಚರಿತ್ರೆಗಳು ಹೇಳುತ್ತದೆ. ಅಂದರೆ ಯಾವುದೋ ಒಂದು ವಾತಾವರಣದ ವೈಪರೀತ್ಯದಿಂದ Body Disable ಕಾಯಿಲೆ ಬಂದಿತ್ತೆಂದು ಹೇಳಿದೆ. ಈ ಅಣು ಸ್ಫೋಟದಿಂದಲೂ ಹೀಗಾಗಬಹುದು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post