ಕಲ್ಪ ಮೀಡಿಯಾ ಹೌಸ್ | ಹೊಸನಗರ |
ದೇಶದ ಹಲವು ಕಡೆಗಳಲ್ಲಿ ವೈದ್ಯೆಯರ ಮೇಲೆ ಲೈಂಗಿಕ ಕಿರುಕುಳ #SexualHarassment ಪ್ರಕರಣ ವರದಿಯಾಗುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲೂ ಸಹ ಇಂತಹುದ್ದೇ ಪ್ರಕರಣ ವರದಿಯಾಗಿದೆ.
ಪತ್ನಿಯ ರಕ್ತ ಪರೀಕ್ಷೆ #BloodTest ವರದಿಯನ್ನು ವೈದ್ಯೆ ಓರ್ವರಿಗೆ ತೋರುಸಲು ಹೋದ ಸಂದರ್ಭದಲ್ಲಿ ವೈದ್ಯೆ ಏಕಾಂಗಿಯಾಗಿ ಇರುವುದನ್ನು ಗಮನಿಸಿದ ವ್ಯಕ್ತಿಯೋರ್ವ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read>> ಸಿನಿಮಾದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆಕ್ಟೀವ್ | ಟೆರರ್ ಚಿತ್ರಕ್ಕೆ ಡಬ್ಬಿಂಗ್
ದೋದೋರು (ಕಾನ್ ಬೈಲ್) ರವಿಗೌಡ ಎಂಬಾತ ತನ್ನ ಪತ್ನಿಯ ರಕ್ತ ಪರೀಕ್ಷೆ ವರದಿಯನ್ನು ವೈದ್ಯೆಗೆ ತೋರಿಸಲು ಡಿ.29ರಂದು ಹೋದಾಗ ವೈದ್ಯೆ ಏಕಾಂಗಿ ಇರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ವೈದ್ಯೆಯು ಆತನಿಗೆ ಬೈದು ಮನೆಯಿಂದ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಮಾನಸಿಕ ಒತ್ತಡದಿಂದ ಹೊರ ಬಂದು ಡಿ.31ರಂದು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















