ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಉತ್ತರ ಕರ್ನಾಟಕ ಭಾಗದ ಹೆಸರಾಂತ ಕಾರ್ಖಾನೆಗಳಲ್ಲಿ ಒಂದಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ Kirloskar Ferrous Indrustries ಕಳೆದ 28 ವರ್ಷಗಳಿಂದ ಹೊಸಪೇಟೆ ಮತ್ತು ಕೊಪ್ಪಳ ಭಾಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವುದರ ಮೂಲಕ ಮತ್ತು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ಪ್ರೇಮಿಯಾಗಿ, ಕಲೆ, ಸಂಗೀತ, ಸಾಹಿತ್ಯ ಮತ್ತು ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಿ ತನ್ನದೇ ಆದಂತಹ ಹೆಸರು ಗಳಿಸಿದೆ.
ಬರುವ 75 ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಭಾನುವಾರದಂದು ಹೊಸಪೇಟೆಯ ರೋಟರಿ ಕ್ಲಬ್ ಆವರಣದಲ್ಲಿ ಕಾರ್ಖಾನೆಯ ಉದ್ಯೋಗಿಗಳ ಕುಟುಂಬದ ಸದಸ್ಯರಿಗೆ ರಂಗೋಲಿ ಸ್ಪರ್ಧೆ, ಭಾಷಣ, ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿದರು, ಕಳೆದ ವಾರವೂ ಸಹ ಈ ಸ್ಪರ್ಧೆಗಳನ್ನು ಕೊಪ್ಪಳದ ಭಾಗದ ಉದ್ಯೋಗಿಗಳಿಗೆ ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ನಡುವೆ ಕಾರ್ಖಾನೆಯ ಆವರಣದಲ್ಲಿ ಉದ್ಯೋಗಿಗಳಿಗೆ ರಸಪ್ರಶ್ನೆ,ದೇಶಭಕ್ತಿ ಗೀತೆಗಳು, ಭಾಷಣ ಸ್ಪರ್ಧೆಗಳು ಮತ್ತು ವಿವಿಧ ಆಟಗಳನ್ನು ಆಯೋಜಿಸಲಾಗಿದೆ. ಬಹುಮಾನಗಳನ್ನು 15 ನೇ ತಾರೀಖಿನಂದು ನೆಡೆಯುವ ಸಮಾರಂಭದಲ್ಲಿ ನೀಡಲಾಗುತ್ತದೆ.
ಉದ್ಯೋಗಿ ಕುಟುಂಬದ ಸದಸ್ಯರುಗಳಿಗೆ ರೋಟರಿ ಕ್ಲಬ್ ಆವರಣದಲ್ಲಿ ಇಂದು ಬೆಳಿಗ್ಗೆಯಿಂದ ವಿವಿಧ ಸ್ಪರ್ಧೆಗಳು ಪ್ರಾರಂಭವಾಗಿ ಮಹಿಳೆಯರಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು, ಉದ್ಯೋಗಿಗಳ ಮಕ್ಕಳಿಗೆ ವಿಶೇಷವಾಗಿ ಸ್ವಾತಂತ್ರ ಹೋರಾಟಗಾರರ ಚಿತ್ರಗಳನ್ನ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅತಿ ಉತ್ಸಾಹದಿಂದ ಈ ಕಾರ್ಯಕ್ರಮವನ್ನು ಉದ್ಯೋಗಿಗಳ ಕುಟುಂಬದವರು ನೆರವೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ಅಭ್ಯರ್ಥಿಗಳಿಗೆ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನೀಡಲಾಗುವುದು.
Also read: ನೇಣು ಬಿಗಿದ ಸ್ಥಿತಿಯಲ್ಲಿ ಕೊಡಗಿನ ವೈದ್ಯೆ ಹಾಗೂ ಮಗಳ ಶವ ಪತ್ತೆ: ಆತ್ಮಹತ್ಯೆ ಶಂಕೆ?
ಇಂದು ಸಾಯಂಕಾಲ ರೋಟರಿ ಕ್ಲಬ್ ಆವರಣದಲ್ಲಿ ಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೂನಾದಿಂದ ಬಂದ ಹೆಸರಾಂತ ಕಲಾವಿದರಾದ ರಾಜು ಸುತಾರ್ ಮತ್ತು ತಂಡದವರು ವಿಶೇಷವಾದಂತಹ ಚಿತ್ರಕಲೆಯನ್ನು ಬಿಡಿಸಿ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಕೊಪ್ಪಳದ ಹತ್ತಿರ ಇರುವ ಹೆಸರಾಂತ ಕಿನ್ನಾಳ ಗ್ರಾಮದಿಂದ ತರಲಾದ ಮರದಿಂದ ಮಾಡಿದ ಪ್ರಾಣಿಗಳನ್ನು ಪ್ರದರ್ಶನವನ್ನು ಮಾಡಲಾಯಿತು.
ಚಿತ್ರಕಲಾ ಪ್ರದರ್ಶನ- ಸಮಾರೋಪ ಸಮಾರಂಭ
ಚಿತ್ರಕಲಾ ಸಮಾರೋಪ ಸಮಾರಂಭ ಸಾಯಂಕಾಲ ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಹೊಸಪೇಟೆಯ ಅಧ್ಯಕ್ಷ ವಿ ತಿರುಪತಿ ನಾಯ್ಡು ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಫ್ಐಎಲ್ ಆಫೀಸರ್ಸ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆಯವರು ವಹಿಸಿದ್ದರು. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು, ಮತ್ತು ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣ್ ಮತ್ತು ಹೆಸರಾಂತ ಚಿತ್ರಕಲಾವಿದರಾದ ಪೂನಾದ ಶ್ರೀ ರಾಜು ಸುತಾರ್ ರವರು ಕಾರ್ಯಕ್ರಮದ ವೇದಿಕೆಯ ಮೇಲೆ ಆಸೀನರಾಗಿದ್ದರು.
ಈ ಚಿತ್ರಕಲಾ ಪ್ರದರ್ಶನವನ್ನು ಹೊಸಪೇಟೆ ನಗರದ ಹೆಸರಾಂತ ಪಶುವೈದ್ಯಾಧಿಕಾರಿಗಳು ಹಾಗೂ ಚಿತ್ರಕಲಾವಿದರಾದ ಡಾ. ಅಶ್ವತ್ ಕುಮಾರ್ ಅವರು ಉದ್ಘಾಟಿಸುವುದರ ಮೂಲಕ ವಿಶೇಷ ಮೆರಗು ತಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರು ಇನ್ನರ್ ವಿಲ್ ಕ್ಲಬ್ ಸದಸ್ಯರುಗಳು, ಹೊಸಪೇಟೆ ಆರ್ಟ್ಸ್ ಅಸೋಸಿಯೇಷನ್ ಸದಸ್ಯರುಗಳು, ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧಿಕಾರಿಗಳು ಮತ್ತು ಕುಟುಂಬ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಕಾರ್ಖಾನೆಯ ವತಿಯಿಂದ ವಿವಿಧ ಸ್ಥಳಗಳಲ್ಲಿ ಆಯೋಜಿಸುತ್ತಿದ್ದು, ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಅನಾನುಕೂಲ ಇತ್ತು. ಈ ವರ್ಷ ಈ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಲಾಯಿತು.
ಶಿಕ್ಷಣ, ಆರೋಗ್ಯದ ಜೊತೆಗೆ ಕಲೆ ,ಸಾಹಿತ್ಯ, ಸಂಗೀತ ಮತ್ತು ಪರಿಸರ ರಕ್ಷಣೆ ನಮ್ಮ ಉದ್ದೇಶವಾಗಿರುತ್ತದೆ ಎಂದು ಪಿ.ನಾರಾಯಣ ತಿಳಿಸಿದರು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post