ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ/ವಿಜಯನಗರ |
ನೂತನವಾಗಿ ವಿಜಯನಗರ ಜಿಲ್ಲೆ ರಚನೆಯಾಗಿರುವುದರಿಂದ ನಗರದ ಮೂರು ದ್ವಿಪಥದ ರಸ್ತೆಗಳನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಡಿಎಂಎಫ್ ಯೋಜನೆ ಅಡಿ ಚತುಷ್ಪಥ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರಸ್ತೆಗಳ ಅಗಲೀಕರಣ ಸಂದರ್ಭದಲ್ಲಿ 875 ಮರಗಳನ್ನು ಕಟಾವು ಮಾಡಲಾಗುತ್ತಿದ್ದು, ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಮತ್ತು ಮರಗಳ ವಿವರ:
ಹೊಸಪೇಟೆ ತಾಲೂಕ ಸಂಡೂರ-ಸಿರುಗುಪ್ಪ ರಾಜ್ಯ ಹೆದ್ದಾರಿ 149 ಅನಂತಶಯನ ಗುಡಿಯಿಂದ ಕಮಲಾಪುರದವರೆಗೆ ಬಲಭಾಗ 237, ಎಡಭಾಗ 120 ಮರಗಳು, ಹೊಸಪೇಟೆ ನಗರದ ಹೆಚ್ ಎಲ್ ಸಿ ಕಾಲುವೆಯಿಂದ ಇಂಗಳಿಗಿ ಕ್ರಾಸ್‍ವರೆಗೆ ಚತುಷ್ಪತ ರಸ್ತೆಯ ಬಲಭಾಗ 137, ಎಡಭಾಗ 120 ಮರಗಳು, ಸಾಯಿಬಾಬಾ ಸರ್ಕಲ್‍ನಿಂದ ಟಿ.ಬಿ ಡ್ಯಾಂ ವರೆಗೆ ಬಲಭಾಗ 95, ಎಡಭಾಗ 166 ಮರಗಳು ಕಟಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕಾಮಗಾರಿಗಳ ಬಲಭಾಗ ಮತ್ತು ಎಡಭಾಗದಲ್ಲಿ ರಸ್ತೆ ಬದಿ ಮರಗಳು ಅಗಲೀಕರಣಕ್ಕೆ ಅಡ್ಡಿಬರುವುದರಿಂದ ಮರಗಳ ಕಟಾವಣೆಗೆ ಹೊಸಪೇಟೆ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಅವರು ಕೋರಿದ್ದಾರೆ.
ಅರಣ್ಯ ಇಲಾಖಾ ವತಿಯಿಂದ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ರಸ್ತೆಬದಿ ಮರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ರಸ್ತೆ ಅಗಲೀಕರಣದಿಂದ ಕಟಾವಣೆಯಿಂದ ಉಳಿಸಬಹುದಾದ ಮರಗಳನ್ನು ಹೊರತುಪಡಿಸಿ ಸಂಖ್ಯೆ ನಮೂದಿಸಿ ಮರ ಕಟಾವಣೆ ಪ್ರಕ್ರಿಯೆಯನ್ನು ಜರುಗಿಸಲಾಗುತ್ತಿರುತ್ತದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆದ್ದರಿಂದ ಈ ಮರ ಕಟಾವಣೆ ಪ್ರಕ್ರಿಯೆಯಲ್ಲಿ ಯಾರಿಗಾದರೂ ಮತ್ತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಮೇ 21ರೊಳಗಾಗಿ ಲಿಖಿತ ಪತ್ರ, ಇ-ಮೇಲ್ (dcfbellaryt@gmail.com) ಮುಖಾಂತರ ನಗರದ ರೇಡಿಯೋ ಪಾರ್ಕ್ ಹತ್ತಿರದ ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ: 08392-240797 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post