ಹೊಸಪೇಟೆ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ತಮ್ಮ ಉತ್ಪಾದನೆ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಳಕಳಿ ಯನ್ನು ಹೊಂದಿರುವ ಸಂಸ್ಥೆ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪನೆ ಮಾಡಿದೆ.
ಈ ಸಂಸ್ಥೆಯ ಅಡಿಯಲ್ಲಿ ಅನೇಕ ಸಾಮಾಜಿಕ ಅಭಿವೃದ್ಧಿ ಕೆಲಸ ಕಾರ್ಯವನ್ನು ಕಳೆದ ೨೫ ವರ್ಷಗಳಿಂದ ನೆರವೇರಿಸುವುದರ ಮೂಲಕ ಕೊಪ್ಪಳ ಮತ್ತು ಹೊಸಪೇಟೆ ಭಾಗದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ.
ಶಾಲೆಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವ ಉದ್ಯೋಗ ಗಳಿಸಲು ತರಬೇತಿ ಕಾರ್ಯಕ್ರಮಗಳು ಮತ್ತು ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಪರಿಸರ ಪ್ರೇಮ ಹೆಚ್ಚಿಸಿ ಸ್ವಚ್ಚತಾ ಕಾರ್ಯವನ್ನು ಆಯೋಜಿಸಿ ಪ್ರತಿವರ್ಷ ಈ ಭಾಗದಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿ ಸಮಾಜಿಕ ಕಳಕಳಿ ಮೂಡಿಸುತ್ತಿದೆ. ಕಿರ್ಲೋಸ್ಕರ್ ಫೌಂಡೇಷನ್ ವತಿಯಿಂದ ಕೊಪ್ಪಳ ಮತ್ತು ಹೊಸಪೇಟೆ ಭಾಗದ 50 ಶಾಲೆಗಳಲ್ಲಿ ವಾಷ್ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ವೈಯಕ್ತಿಕ ಸುಚಿತ್ವ ಶುದ್ಧ ಕುಡಿಯುವ ನೀರಿನ ಬಗ್ಗೆ ಮತ್ತು ಪರಿಸರ ಶುಚಿತ್ವದ ಬಗ್ಗೆ ಅರಿವನ್ನು ಸಹ ಮೂಡಿಸುತ್ತಿದೆ. ಹತ್ತು ಹಲವು ಕಾರ್ಯಕ್ರಮಗಳನ್ನು ನೆರವೇರಿಸುತ್ತಿದೆ.
ಇದೇ ನಿಟ್ಟಿನಲ್ಲಿ ಹೊಸಪೇಟೆ ಪತಂಜಲಿ ಯೋಗ ಸಮಿತಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಧನಸಹಾಯ ಮಾಡಿ ಶುಭಾಶಯಗಳನ್ನು ತಿಳಿಸಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
(ವರದಿ: ಮುರಳಿಧರ ನಾಡಿಗೇರ್, ಹೊಸಪೇಟೆ)
Discussion about this post