ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಶೃಂಗೇರಿ ಶಾರದಾ ಪೀಠದ ನರಸಿಂಹ ವನ ಎಂದೆ ಹೆಸರಾದ ಹೊಸಪೇಟೆ ಐಎಸ್’ಆರ್ ಕಾರ್ಖಾನೆಯ ಹಿಂಭಾಗದಲ್ಲಿ ಇರುವ ಮುದ್ಲಾಪುರ ಶ್ರೀಹನುಮಂತ ದೇವಸ್ಥಾನದಲ್ಲಿ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್’ನ 20ನೇಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಪ್ರತಿ ವರ್ಷ ಸಾಮಾನ್ಯ ಸಭೆಯನ್ನು ಆಯೂಜಿಸಿ ಹಣಕಾಸಿನ ವ್ಯವಸ್ಥೆ ಮತ್ತು ಮುಂದಿನ ಬೆಳವಣಿಗೆಯ ಬಗ್ಗೆ ಸವಿಸ್ತಾರವಾಗಿ ಅಧ್ಯಕ್ಷ ಹನುಮಂತರಾವ್ ಇವರು ಸದಸ್ಯರ ನಡುವೆ ಮಂಡಿಸಿದರು.
ಬ್ಯಾಂಕ್ ಸರ್ವ ಸದಸ್ಯರು ಮತ್ತು ನಿರ್ದೇಶಕರುಗಳ ಸಮಾಗಮ ದಲ್ಲಿ ಉದ್ಯಾಗ ಪೆಟ್ರೋಲ್ ಬಂಕ್ ಮಾಲೀಕ ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ಮುಂದುವರೆಯಿತು.
ಈ ಸಂದರ್ಭದಲ್ಲಿ ಹೆಸರಾಂತ ಬ್ರಾಹ್ಮಣ ಸಮಾಜದ ಸದಸ್ಯರು, ವಕೀಲರು, ನಿರೂಪಕರು ಮತ್ತು ಸಂಗೀತ ಭಾರತಿ ಸಂಸ್ಥೆಯ ಸ್ಥಾಪಕರು ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡಿದ ಸಾಧನೆಗಾಗಿ ಬ್ರಾಹ್ಮಣ ಸಮಾಜ ಮತ್ತು ಸೌಹಾರ್ದ ಬ್ಯಾಂಕ್ ವತಿಯಿಂದ ಶ್ರೀ ಕಲ್ಲಂಭಟ್ ಇವರಿಗೆ ಸಭೆಯ ಮಧ್ಯೆ ಸನ್ಮಾನಿಸಲಾಯಿತು.
ಬ್ಯಾಂಕ್ ನ ಸಿಇಓ ಗೋಪಾಲಕೃಷ್ಣ ಜೋಶಿಯವರು ಬ್ಯಾಂಕ್ ಪ್ರಾರಂಭದಿಂದ ಇಲ್ಲಿಯವರೆಗೆ ಬ್ಯಾಂಕ್ ಯಶಸ್ವಿಗೆ ಸಹಾಯ, ಸಹಾಯಕ ಮತ್ತು ಠೇವಣಿ ಸಂಗ್ರಹ, ಸಾಲ ಮರುಪಾವತಿ ಮತ್ತು ಬ್ರಾಹ್ಮಣ ಸಮಾಜದ ಯಶಸ್ವಿಯಾಗಿ ದುಡಿಯುತ್ತಿದ್ದಾರೆ. ಅವರ ಅಮೂಲ್ಯ ಸೇವೆಯನ್ನು ಗುರುತಿಸಿ ಹೊಸಪೇಟೆಯ ಹೆಸರಾಂತ ಧಾರ್ಮಿಕ ಸಂಸ್ಥೆ ಶ್ರೀಶಂಕರ ಭಾರತಿ ಸಂಸ್ಥೆ ವತಿಯಿಂದ ಬ್ಯಾಂಕಿನ ಸಿಇಓ ಗೋಪಾಲಕೃಷ್ಣ ಜೋಶಿ ಇವರನ್ನು ಸನ್ಮಾನಿಸಲಾಯಿತು.
ಸಭೆಯ ನಡುವೆ ವಿದ್ವಾಂಸರು, ನಿವೃತ್ತ ಪತ್ರಕರ್ತರು ಬ್ರಾಹ್ಮಣ ಸಮಾಜದ ಮುಖಂಡರು, ಚಿಂತಕರಾದ ಶ್ರೀಬನ್ನಂಜೆ ಡಾ. ಗೋವಿಂದಾಚಾರ್ಯರು ಬೆಳಿಗ್ಗೆ ಅಂಬಲಪಾಡಿಯ ತಮ್ಮ ನಿವಾಸದಲ್ಲಿ ನಿಧನರಾದ ವಿಚಾರ ತಿಳಿಯಿತು ತಕ್ಷಣವೇ ಅಧ್ಯಕ್ಷ ಹನುಮಂತರಾವ್ ಇವರು ಸಭೆಯನ್ನು ಮುಂದುವರೆಸದೆ. ಬನ್ನಂಜೆ ಗೋವಿಂದಾಚಾರ್ಯರು ಸಮಾಜ ಸೇವೆಯನ್ನು ಸ್ಮರಿಸಿದರು. ಶ್ರೀಯುತರು ಕನ್ನಡ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿರುವ ಇವರು, ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ. ಜಿ.ವಿ. ಅಯ್ಯರ್ ಅವರಸಂಸ್ಕೃತ ಚಲನಚಿತ್ರ ’ಶಂಕರಾಚಾರ್ಯ’, ’ಮಧ್ವಾಚಾರ್ಯ’, ’ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ. ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಆಧ್ಯಾತ್ಮಿಕ ಗುರುವಾಗಿದ್ದರು. ಇವರ ಅಮೂಲ್ಯ ಸೇವೆಯನ್ನು ಈ ಸಮಯದಲ್ಲಿ ಸ್ಮರಿಸಿ ಆತ್ಮಕ್ಕೆ ಶಾಂತಿ ಸಿಗಲೆಂದು ಸಭೆಯಲ್ಲಿ ಒಂದು ನಿಮಿಷದ ಮೌನಾಚರಣೆ ಮಾಡಿ ಅವರಿಗೆ ಗೌರವ ಸಲ್ಲಿಸಲಾಯಿತು.
ಕೊರೋನಾ ಹಿನ್ನೆಲೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಲ್ಲಾ ಭಾಗವಹಿಸಿದ ಸದಸ್ಯರು ಮತ್ತು ಕುಟುಂಬದ ಸದಸ್ಯರಿಗೆ ಬಿಸಿಪಾನಿಯ ಮತ್ತು ಹಣ್ಣು ನೀಡಿದರು. ಸಂಘದ ನಿರ್ದೇಶಕ ಮಂಡಳಿಯ ಪ್ರತಿಹಂತದಲ್ಲಿ ಸಭೆಯ ಸದಸ್ಯರ ಅನುಮೋದನೆ ಮಂಡಿಸಿ ಒಪ್ಪಿಗೆಯನ್ನು ಪಡೆದರು. ಕಾರ್ಯಕ್ರಮ ದ ಕೊನೆಯಲ್ಲಿ ಶ್ರೀಹನುಮಂತ ದೇವರಿಗೆ ಅಭಿಷೇಕ ಮತ್ತು ಮಂಗಳಾರತಿ ನಂತರ ಬ್ರಾಹ್ಮಣ ಸಮಾಜ ಮತ್ತು ಬ್ಯಾಂಕ್ ಅಭಿವೃದ್ಧಿ ಗೆ ಶ್ರಮಿಸಿದ ಸದಸ್ಯರುಗಳಿಗೆ ಹೊಸಪೇಟೆ ತಾಲೂಕಿನ ಬ್ರಾಹ್ಮಣ ಸಮಾಜದ ಅಧ್ಯಕ್ಷ ದಿವಾಕರ್ ಇವರ ಸಮ್ಮುಖದಲ್ಲಿ ಮತ್ತು ಬ್ಯಾಂಕ್ ಅದ್ಯಕ್ಷರು ಮತ್ತು ನಿರ್ದೇಶಕರುಗಳಿಂದ ಸನ್ಮಾನಿಸಲಾಯಿತು.
ಕೊನೆಯಲ್ಲಿ ಅಧ್ಯಕ್ಷ ಶ್ರೀನಿವಾಸರಾವ್ ರವರು ಅದ್ಯಕ್ಷ ಭಾಷಣ ಮಾಡಿದರು ಶ್ರೀಹನುಂತ ದೇವರ ಪ್ರಸಾದ ವಿತರಣೆ ಮಾಡಿ ಸಭೆಯನ್ನು ಧನ್ಯವಾದ ಗಳಿಂದ ಮುಕ್ತಾಯ ಮಾಡಿದರು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post