ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಮಮಂದಿರದಲ್ಲಿ #Ramamandir ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ಅಯೋಧ್ಯೆಯ #Ayodhya ಸ್ಯಾಟಲೈಟ್ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ #ISRO ಹೈದರಾಬಾದ್ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಈ ಚಿತ್ರವನ್ನು ಹಂಚಿಕೊಂಡಿದೆ.
ಡಿ. 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ #Satellite ಚಿತ್ರವನ್ನು ತೆಗೆಯಲಾಗಿತ್ತು ಎನ್ನಲಾಗಿದೆ.
2.7 ಎಕರೆ ವಿಸ್ತೀರ್ಣದ ರಾಮಮಂದಿರದ ಸ್ಥಳ ಚಿತ್ರಗಳಲ್ಲಿ ಗೋಚರವಾಗಿದ್ದು, ಭಾರತೀಯ ರಿಮೋಟ್ ಸೆನ್ಸಿಂಗ್ ಸರಣಿಯ ಉಪಗ್ರಹಗಳನ್ನು ಬಳಸಿಕೊಂಡು ಅದರ ವಿಸ್ತೃತ ನೋಟವನ್ನು ಸಹ ಒದಗಿಸಲಾಗಿದೆ.
ಉಪಗ್ರಹ ಚಿತ್ರಗಳಲ್ಲಿ, ದಶರಥ್ ಮಹಲ್ ಮತ್ತು ಸರಯೂ ನದಿಯು ಸ್ಪಷ್ಟವಾಗಿ ಕಂಡುಬರುತ್ತದೆ. ಹೊಸದಾಗಿ ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣವೂ ಗೋಚರಿಸುತ್ತದೆ.
ಭಾರತವು ಪ್ರಸ್ತುತ 50 ಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಹೊಂದಿದೆ ಮತ್ತು ಅವುಗಳಲ್ಲಿ ಕೆಲವು ಒಂದು ಮೀಟರ್’ಗಿಂತ ಕಡಿಮೆ ರೆಸಲ್ಯೂಶನ್ ಹೊಂದಿವೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಭಾಗವಾದ ಹೈದರಾಬಾದ್’ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಈ ಚಿತ್ರವನ್ನು ಸಂಸ್ಕರಿಸಿದೆ.
ಜನವರಿ 22ರ ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post