ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಭಾರತ ದೇಶದ ಐತಿಹಾಸಿಕ ಕ್ಷಣವಾಗುವ ಜ.22ರ ನಾಳೆ ಅಯೋಧ್ಯೆಯಲ್ಲಿ #Ayodhya ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, 500 ವರ್ಷಗಳ ಕನಸು ನಾಳೆ ಸಾಕಾರವಾಗಲಿದೆ.
ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ದೇಶ, ವಿದೇಶಗಳ ಆಯ್ದ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ದೇಶ-ವಿದೇಶಗಳ 11 ಸಾವಿರ ವಿವಿಐಪಿಗಳು #VVIP ಅಯೋಧ್ಯೆಗೆ ಆಗಮಿಸುವ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಭೂಮಿ, ನೀರು, ವಾಯುಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದ್ದು, ಗರಿಷ್ಠ ಮಟ್ಟದ ಭದ್ರತೆ ಒದಗಿಸಲಾಗಿದೆ.
ಅಯೋಧ್ಯೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ಯಾಟ್ರೋಲಿಂಗ್ #Patrolling ಹೆಚ್ಚಿಸಲಾಗಿದ್ದು, ಡ್ರೋಣ್ ಮೂಲಕ ವೈಮಾನಿಕ ನಿಗಾ ವಹಿಸಲಾಗಿದೆ.
ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಭಯೋತ್ಪಾದನಾ ನಿಗ್ರಹದಳದ ಕಮಾಂಡೋಗಳು ನಿಗಾವಹಿಸಿದ್ದು, ಯಾವುದೇ ರೀತಿಯ ಅನಾಹುತ ನಡೆಯದಂತೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಹೀಗಿದೆ ಭದ್ರತೆ:
- ಪ್ರಧಾನಿಯವರ ಭದ್ರತಾ ಪಡೆಯ ಎಸ್’ಪಿಜಿ ಕಮಾಂಡೋಗಳು
- 100 ಮಂದಿಯ ಎಸ್’ಎಸ್’ಎಫ್ ಕಮಾಂಡೋ ಪಡೆ
- ಮಂದಿರ ಸುತ್ತಲೂ ಒಟ್ಟು 1,400 ಎಸ್’ಎಸ್’ಎಫ್ ಗಸ್ತು
- ಮಂದಿರ ಹೊರಗೆ ಸಿಆರ್’ಪಿಎಫ್ ಯೋಧರ ಭದ್ರತೆ
- ಮಂದಿರ ಹೊರಗಿನ ರೆಡ್ ಝೋನ್’ನಲ್ಲಿ ಪಿಎಸಿ, ಸಿವಿಲ್ ಪೊಲೀಸ್
- ಅಯೋಧ್ಯೆಯಲ್ಲಿ ಒಟ್ಟು 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ
- ಡ್ರೋನ್, ಸಿಸಿಟಿವಿ, ಎಐ ತಂತ್ರಜ್ಞಾನದ ಮೂಲಕ ನಿಗಾ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post