ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಎಲ್ಲ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಈಗನಿಂದಲೇ ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕವಾಗಿ ಸೋತು ಸುಣ್ಣವಾದ ಐತಿಹಾಸಿಕ ಪಕ್ಷ ಕಾಂಗ್ರೆಸ್, ಆನಂತರ ನಡೆದ ಬಹುತೇಕ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿಗೆ ಬಂದು ನಿಂತಿದೆ. ಎಷ್ಟರ ಮಟ್ಟಿಗೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಿದೆ ಎಂದರೆ ಯಾವುದೇ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಕನಿಷ್ಠ ನಂಬಿಕೆಯೂ ಸಹ ಸ್ವತಃ ಪಕ್ಷದ ವರಿಷ್ಠರಿಗೇ ಇಲ್ಲ..
ಹೇಳಿಕೊಳ್ಳುವುದಕ್ಕೆ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಐತಿಹಾಸಿಕ ಪಕ್ಷ. ಆದರೆ,ಈಗ 2019ರ ಲೋಕಸಭಾ ಚುನಾವಣೆಯಲ್ಲೂ ಸಹ ಅಷ್ಟೇ. ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುತ್ತೇವೆ ಎಂಬ ಭರವಸೆ ಇರಲಿ, ಇವರಲ್ಲಿ ಚಿಂತನೆಯೂ ಸಹ ಇದ್ದಂತಿಲ್ಲ. ಹೀಗಾಗಿಯೇ, ಹೋದೆಡೆಯೆಲ್ಲಾ ಬಿಜೆಪಿ ವಿರೋಧಿಗಳು ಯಾರಿದ್ದಾರೆ ಎಂದು ಹುಡುಕಿ, ಹುಡುಕಿ ಅವರನ್ನು ಬೆಂಬಲಿಸಿ, ಬೆಂಬಲಿಸಿ ಎಂದು ಅಂಗಲಾಚುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ.
ಈಗ, ಉತ್ತರ ಪ್ರದೇಶದ ವಿಚಾರದಲ್ಲಿ ನೋಡುವುದಾದರೆ, ಅಲ್ಲಿ ಕಾಂಗ್ರೆಸ್, ಸಮಾಜವಾದಿ ಹಾಗೂ ಬಿಎಸ್‌ಪಿ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುತ್ತವಂತೆ. ಬಿಎಸ್‌ಪಿ ಹಾಗೂ ಎಸ್‌ಪಿ 30-30 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಐತಿಹಾಸಿಕ ಪಕ್ಷ ಮಾತ್ರ ಕೇವಲ ಕೇವಲ 10 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತದೆಯಂತೆ. ಇನ್ನುಳಿದ 10 ಸ್ಥಾನಗಳನ್ನು ಆರ್‌ಎಸ್‌ಡಿಯಂತೆ ಪುಡಿ ಪಕ್ಷಗಳಿಗೆ ನೀಡುತ್ತವಂತೆ…
ಇನ್ನೊಂದು ವಿಚಾರ ಏನಪ್ಪಾ ಅಂದರೆ, 2019ರಲ್ಲಿ ಬಿಜೆಪಿಯನ್ನು ಸೋಲಿಸುವುದೇ ಇವರ ಗುರಿಯಂತೆ, ಅದಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗುತ್ತಾರಂತೆ… ಇರಲಿ… ಯಾರಿಗೆ ಗೊತ್ತು. ರಾಜಕೀಯ ಪಗಡೆ ಆಟ.. ಸೋಲಿಸಿದರೂ ಸೋಲಿಸಬಹುದು.
ಇನ್ನು, ಕಾಂಗ್ರೆಸ್ ಕರ್ನಾಟಕದಲ್ಲೂ ಸಹ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವುದು, ಇಲ್ಲೂ ಸಹ ಲೋಕಸಭಾ ಚುನಾವಣೆಯಲ್ಲಿ ಒಪ್ಪಂದ ಏರ್ಪಡುತ್ತದೆ ಎನ್ನುವುದನ್ನು ಸೂಚಿಸಿದೆ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರದ ದಿನ ಎಡ ಹಾಗೂ ಪ್ರತಿಪಕ್ಷಗಳ ಮುಖಂಡರನ್ನು ಸೇರಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆಯಾಗ, ಕಾಂಗ್ರೆಸ್ ಮಾತ್ರ ತನಗೆ ಸ್ವಂತ ಬಲವಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಇನ್ನೇನಿದ್ದರೂ ಇನ್ನೊಬ್ಬರ ಬಲದಿಂದ ಕೈ ನಡೆಯಬೇಕಿದೆ. ಅದು ಎಷ್ಟು ಕಾಲ…!!!???
ಇನ್ನು, ಇಂದು ಮುಂಜಾನೆ ಮಾತನಾಡಿದ್ದ ರಾಹುಲ್, ಇಡಿಯ ದೇಶ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ವಿರೋಧಿಸುತ್ತಿದೆ. ಮಹಾಘಟಬಂಧನ ಕೇವಲ ರಾಜಕೀಯ ಕಾರಣಕ್ಕಾಗಿ ಏರ್ಪಟ್ಟಿರುವುದಲ್ಲ. ಬದಲಾಗಿ, ಇದೊಂದು ಜನರ ಸೆಂಟಿಮೆಂಟ್ ಎಂದು ವ್ಯಾಖ್ಯಾನಿಸಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿರುವುದು ದೇಶದಲ್ಲಿ ಬಿಜೆಪಿ ಹೊರತಾಗಿನ ಮೈತ್ರಿಗೆ ಬಲ ಬಂದಿದೆ. ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಬಿಜೆಪಿ ಹೊರತಾಗಿನ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರುಗಳು ಆಗಮಿಸಿದ್ದು, ನಮ್ಮಲ್ಲಿನ ಒಗ್ಗಟ್ಟನ್ನು ತೋರಿಸಿದೆ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post