No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Thursday, April 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅನೇಕ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರು ಕುಡಿದ ಚೀನಾದ ಆಟ ಎಷ್ಟು ವರ್ಷ?

ಕಾರಣ ನಂ 2 - ಆಂತರಿಕ ಯುದ್ಧ ಮತ್ತು ಬಂಡಾಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 20, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚೀನಾ ಅಸಲಿಗೆ ಇಂದು ನಾವು ನೀವು ಭೂಪಟದಲ್ಲಿ ನೋಡುತ್ತಿರುವಂಥಾ ಬೃಹತ್ ರಾಷ್ಟ್ರವಲ್ಲ. ವಾಸ್ತವವಾಗಿ ಅನೇಕ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರು ಕುಡಿದು ಹೆಬ್ಬಾವಿನ ಹಾಗೆ ಕಾಣುತ್ತಿದೆ ಚೀನಾ. ತನ್ನ ಸೈನಿಕ ಬಲದಿಂದ ಅಕ್ಕ ಪಕ್ಕದ ರಾಷ್ಟ್ರಗಳನ್ನು ವಶಪಡಿಸಿಕೊಂಡಿರುವ ಚೀನಾ ಅದೇ ಸೈನಿಕರ ಬಂದೂಕಿನ ಬಲದಿಂದ ತನ್ನದಲ್ಲದ ಭೂಭಾಗವನ್ನು ಆಳುತ್ತಿದೆ. ಆದರೆ ಗಡಿಗಳನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕೇವಲ ಬಂದೂಕಿನ ಬಲದಿಂದ ಮಾತ್ರ ಸಾಧ್ಯವಿಲ್ಲವಲ್ಲ. ಭೌಗೋಳಿಕ ಗಡಿಗಳ ಅಸ್ತಿತ್ವ ಇರಬೇಕು. ಆದರೆ ಇಂದಿನ ಚೈನಾ ಗಡಿಗಳಲ್ಲಿ‌ ಈ ವ್ಯವಸ್ಥೆ ಇಲ್ಲ. ಚೈನಾದ ಭೌಗೋಳಿಕ ಗಡಿ ಕೇವಲ ಚೀನಾದ ದಕ್ಷಿಣ  ಆಗ್ನೇಯ ಭಾಗವಷ್ಟೇ ಆಗಿದ್ದು ಉಳಿದವು ಬಲವಂತವಾಗಿ ಚೀನಾದೊಂದಿಗೆ ಉಳಿದುಕೊಂಡಿವೆ. ಚೈನಾದ 150 ಕೋಟಿ ಜನರಲ್ಲಿ 90% ಗೂ ಅಧಿಕ ಜನ ಚೀನಾದ ಅರ್ಧಕ್ಕಿಂತಲೂ ಕಡಿಮೆಯಾಗಿರುವ ದಕ್ಷಿಣ ಆಗ್ನೇಯ ಭೂಪ್ರದೇಶದಲ್ಲಿದೆ ಎಂದರೆ ಅಸಲಿ ಚೈನಾ ಎಷ್ಟಿದೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. (ಚಿತ್ರ ನೋಡಿ) ಹಾಗಿದ್ದರೆ ಚೀನಾದೊಳಗಿರುವ ಆದರೆ ಚೀನಾದ್ದಲ್ಲದ ಇನ್ನುಳಿದ ರಾಷ್ಟ್ರಗಳು ಯಾವುವು?

  1. ಟಿಬೆಟ್ – ಗೂಗಲ್ ಅರ್ಥ್ ನಲ್ಲಿ ನೋಡಿದರೆ ಹಿಮಾಲಯದ ಮೇಲ್ಭಾಗದಲ್ಲಿ ಇಡೀ ಜಗತ್ತಿನ ಅತಿ ಎತ್ತರದ ಒಂದು ಪ್ರಸ್ಥಭೂಮಿ ಕಾಣುತ್ತದೆ. ಮುಗಿಲು ಮುಟ್ಟುವ, ಸದಾಕಾಲ ಮಂಜಿನಿಂದಾವೃತವಾಗಿರುವ ಅನೇಕ ಪರ್ವತಗಳಿಗೂ ಅದರಲ್ಲಿ ಹುಟ್ಟುವ ಅನೇಕ ನದಿಗಳಿಗೂ ಆವಾಸಸ್ಥಾನವಾಗಿರುವ ಈ ಭೂಮಿಯೇ ಟಿಬೆಟ್. ಬೌಧ್ದ ಧರ್ಮಕ್ಕೆ ಸೇರಿದ ಇಲ್ಲಿನ ಜನ ಅಂತರ್ಮುಖಿಗಳು, ಆಧ್ಯಾತ್ಮಿಕ ಸಾಧಕರು, ಶಾಂತಿಪ್ರಿಯರು. ಟಿಬೆಟಿಯನ್ನರ ಈ ಶಾಂತ ಗುಣವನ್ನೇ ಬಂಡವಾಳ ಮಾಡಿಕೊಂಡ ಚೀನಾ 1962 ರಲ್ಲಿ ತನ್ನ ಸೈನ್ಯವನ್ನು ನುಗ್ಗಿಸಿ ಈ ಬೃಹತ್ ಭೂಭಾಗವನ್ನು ವಶಪಡಿಸಿಕೊಂಡಿತು. ಅಡ್ಡಬಂದವರ ಹತ್ಯಾಕಾಂಡ ನಡೆಸಿತು. ಇದರಿಂದ ಬೆದರಿದ ಟಿಬೆಟಿಯನ್ ರ ಪರಮೋಚ್ಛ ಧರ್ಮಗುರು ದಲೈಲಾಮಾ ಮತ್ತವರ ಶಿಷ್ಯರೂ ಸೇರಿದಂತೆ ಸಾವಿರಾರು ಜನ ಭಾರತಕ್ಕೆ ವಲಸೆ ಬಂದು ಆಶ್ರಯ ಪಡೆದರು. ದೇಶಭ್ರಷ್ಟವಾದ ಟಿಬೆಟಿಯನ್ ಸರ್ಕಾರ ಭಾರತದಲ್ಲಿ ಆಶ್ರಯ ಪಡೆಯಿತು. ಅಂದಿನಿಂದ ಇಂದಿನವರೆಗೂ ಟಿಬೆಟಿಯನ್ ಭೂಮಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ಅವರ ಹೋರಾಟವನ್ನು ಉಗ್ರವಾಗಿ ಹತ್ತಿಕ್ಕುವ ಕಾರ್ಯವನ್ನು ಚೈನಾ ಮಾಡುತ್ತಿದೆ. ಟಿಬೆಟಿಯನ್ ಸ್ವಾತಂತ್ರ್ಯ ಹೋರಾಟಗಾರರ ಕಗ್ಗೊಲೆ ನಡೆಯುತ್ತಿದೆ.ಭಾರತಕ್ಕೆ ವಲಸೆ ಬಂದಿರುವ ಟಿಬೆಟಿಯನ್ ರ ಮೇಲೂ ಆಗಾಗ ಚೀನಾ ಕೆಂಗಣ್ಣು ಬೀರುತ್ತದೆ. ಟಿಬೆಟ್ ಗೆ ವಿಶ್ವಸಂಸ್ಥೆ ಸೇರಿದಂತೆ ಯಾವುದೇ ರಾಷ್ಟ್ರವೂ ಸಹಾನುಭೂತಿ ತೋರದಂತೆ ನೋಡಿಕೊಳ್ಳುತ್ತಿದೆ. ಹೊರ ಜಗತ್ತಿಗೆ ಗೊತ್ತಾಗದಂತೆ ಬಹುಸಂಖ್ಯೆಯ ಚೈನೀಯರನ್ನು ಟಿಬೆಟ್ ಗೆ ಹೋಗಿ ನೆಲೆಸುವಂತೆ ಮಾಡಲಾಗುತ್ತದೆ. ನೂರಕ್ಕೆ ತೊಂಬತ್ತರಷ್ಟು ಬೌದ್ಧ ವಿಹಾರಗಳನ್ನು, ಗುರುಕುಲಗಳನ್ನು ನೆಲಸಮ ಮಾಡಲಾಗಿದೆ. ಬೌದ್ಧ ಸನ್ಯಾಸಿ ಸನ್ಯಾಸಿನಿಯರನ್ನು ಕೊಲ್ಲಲಾಗಿದೆ. ನಿರಂತರ ಮಾನವ ಹಕ್ಕುಗಳ ದಮನ ಕಾರ್ಯ ನಡೆಸುತ್ತಿದೆ. ಆದರೆ ಕರೋನಾನಂತರದ ನಾಟಕೀಯ ಬೆಳವಣಿಗೆಗಳಲ್ಲಿ ಟಿಬೆಟ್ ನ ಸ್ವಾತಂತ್ರ್ಯದ ಆಸೆ ಗರಿಗೆದರುತ್ತಿದೆ. ವಿದೇಶಗಳಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ ರ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಲಾರಂಭಿಸಿದೆ. ಅಮೆರಿಕಾದ ಸಂಸತ್ತು ಟಿಬೆಟ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಒಪ್ಪಿಕೊಳ್ಳುವ ಮಸೂದೆಯನ್ನು ಪಾಸು ಮಾಡಲು ಕೆಲವೇ ಹಂತಗಳು ಬಾಕಿ ಇವೆ. ಹೀಗಾಗಿ ಒಂದು ವೇಳೆ ಚೈನಾ ಪತನವಾದರೆ ಟಿಬೆಟ್ ಎಂಬ ರಾಷ್ಟ್ರ ಪ್ರಪಂಚದ ಭೂಪಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿದೆ. ಹಾಗೆ ನೋಡಿದರೆ ಭಾರತಕ್ಕೆ ಇದರಿಂದ ಅತ್ಯಂತ ಹೆಚ್ಚು ಲಾಭ. ಭೂತಾನ್ ನಂತೆ ಒಂದು ಸಾಂಸ್ಕೃತಿಕ ಗೆಳೆಯನಂಥಾ ಅಥವಾ ಸಹೋದರನಂಥಾ ಒಂದು ರಾಷ್ಟ್ರ ನೆರೆಹೊರೆಯಾದರೆ, ಚೈನಾ ಎಂಬ ದುಷ್ಟ ರಾಷ್ಟ್ರದೊಂದಿಗೆ ನಮ್ಮ ದೇಶ ಗಡಿಯನ್ನೇ ಹಂಚಿಕೊಂಡಿರುವುದಿಲ್ಲ.
  2. ತೈವಾನ್ – ಅಧಿಕೃತವಾಗಿ ಚೈನಾದ ಅಂಕೆಯಲ್ಲಿ ಇಲ್ಲದಿದ್ದರೂ ವಿಶ್ವಸಂಸ್ಥೆ ಮತ್ತು ವಿಶ್ವದ ಇತರ ರಾಷ್ಟ್ರಗಳಿಂದ ಗುರುತಿಸಲ್ಪಡದ ಕಾರಣ ಅತಂತ್ರವಾಗಿ ಉಳಿದಿರುವ ಒಂದು ಬಲಾಢ್ಯ ರಾಷ್ಟ್ರ. ಸ್ವಂತ ಸೈನ್ಯ ಬಲ, ಆಡಳಿತ ವ್ಯವಸ್ಥೆ, ಶ್ರೇಷ್ಠ ಅರ್ಥ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸರ್ಕಾರ ಹೊಂದಿರುವ ಈ ರಾಷ್ಟ್ರ ಚೈನಾಕ್ಕೆ ಇಂದು ಮಗ್ಗುಲ ಮುಳ್ಳಾಗಿದೆ. ಈ ರಾಷ್ಟ್ರವನ್ನು ದಮನಿಸಲು ಚೈನಾ ನೂರೆಂಟು ತಂತ್ರವನ್ನು ಮಾಡಿದರೂ ಇದುವರೆಗೂ ಜಯಸಾಧಿಸಲಾಗಿಲ್ಲ. ತೈವಾನ್ ತನ್ನ ಅಸ್ತಿತ್ವವನ್ನು ಬಲವಾಗಿಯೇ ಉಳಿಸಿಕೊಂಡಿದೆ. 1949 ರಲ್ಲಿ ನಡೆದ ಸಿವಿಲ್ ವಾರ್ ನಲ್ಲಿ ಮಾವೋ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕುಮಿಟಾಂಗ್ ಪಕ್ಷದ ಸದಸ್ಯರು ಚೀನಾದಿಂದ ತೈವಾನ್ ದ್ವೀಪಕ್ಕೆ ಹೋಗಿ ನೆಲೆಸಿದರು. ಅಲ್ಲೇ ಸರ್ಕಾರ ರಚಿಸಿ ತಮ್ಮದೇ ಅಧಿಕೃತ ಚೈನಾ ಎಂದರು. ಮೊದಮೊದಲು ವಿಶ್ವ ಸಮುದಾಯ ಈ ಸರ್ಕಾರಕ್ಕೆ ಮಾನ್ಯತೆ ನೀಡಿ ಗುರುತಿಸಿದರೂ ನಂತರದ ದಿನಗಳಲ್ಲಿ ಚೈನಾದ ಪ್ರಭಾವದಿಂದಾಗಿ ತೈವಾನ್ ಅನ್ನು ಕಡೆಗಣಿಸಿತು. 1971 ರಲ್ಲಿ ತೈವಾನ್ ಗೆ ಬದಲು ಇಂದಿನ ಚೀನಾವನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತವಾಗಿ ಗುರುತಿಸಲಾಯಿತು. ಆದರೆ ಏನೇ ಆದರೂ ಅಂದಿನಿಂದ ಇಂದಿನವರೆಗೂ ತೈವಾನ್ ತನ್ನ ಪ್ರತ್ಯೇಕತೆಯ ಹೋರಾಟವನ್ನು ಬಿಟ್ಟಿಲ್ಲ. ಚೀನಾದ ಮಗ್ಗುಲಲ್ಲೇ ಪುಟ್ಟ ದ್ವೀಪವಾಗಿದ್ದರೂ ಆರ್ಥಿಕ ಅಭಿವೃದ್ಧಿಯಲ್ಲಿ ಜಗತ್ತಿನ ಅಗ್ರಪಂಕ್ತಿಯಲ್ಲಿದ್ದು ಏಷ್ಯನ್ ಟೈಗರ್ ಎನಿಸಿಕೊಂಡು ಸ್ವಾವಲಂಬಿಯಾಗಿದೆ. ಇಷ್ಟಾದರೂ ಜಗತ್ತು ಚೈನಾಕ್ಕೆ ಹೆದರಿಕೊಂಡು ಈ ರಾಷ್ಟ್ರದ ಸಾರ್ವಭೌಮತ್ವವನ್ನು ಗುರುತಿಸುತ್ತಿಲ್ಲ. ಆದರೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆರಿಸಿ ಬಂದ ತೈವಾನ್ ನ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಅಧ್ಯಕ್ಷೆ ಸೈ ಇಂಗ್ ವೆನ್ ತನ್ನ ಜನರಲ್ಲಿ ಸ್ವತಂತ್ರ ಸಾರ್ವಭೌಮ ತೈವಾನ್ ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಒಂದು ವೇಳೆ ತೈವಾನ್ ಅಧಿಕೃತವಾಗಿ ಸ್ವತಂತ್ರಗೊಂಡರೆ ಚೈನಾಕ್ಕೊಂದು ಬಿಗಿಯಾದ ಲಗಾಮು ಬೀಳುತ್ತದೆ.
  3. ಉಯ್ಘರ್ ಮುಸ್ಲಿಮರ ಗ್ಸಿನ್ಸಿಯಾಂಗ್ ಅಥವಾ ಪೂರ್ವ ತುರ್ಕಿಸ್ತಾನ – ಚೀನಾದ ಉತ್ತರ ದಿಕ್ಕಿಗಿರುವ ಈ ಭಾಗ ವಿಸ್ತಾರದಲ್ಲಿ ಜರ್ಮನಿಗಿಂತಲೂ ನಾಲ್ಕುಪಟ್ಟು ದೊಡ್ಡದಾಗಿದ್ದು, ಟರ್ಕಿಕ್ ಭಾಷೆ ಮಾತನಾಡುವ ಉಯ್ಘರ್ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದಾರೆ. ಹಿಂದೆ ಇದೊಂದು ಚೀನಾದಿಂದ ಪ್ರತ್ಯೇಕವಾದ ರಾಜ್ಯವಾಗಿತ್ತು. 1949ರಲ್ಲಿ ಚೈನಾದ ಕಮ್ಯುನಿಸ್ಟ್ ಪಾರ್ಟಿ ಇದನ್ನು ಪೂರ್ಣವಾಗಿ ವಶಪಡಿಸಿಕೊಂಡಿತು. ಅಂದಿನಿಂದಲೂ ಉಯ್ಘರ್ ಗಳ ಪ್ರತ್ಯೇಕ ಅಸ್ತಿತ್ವವನ್ನು ನಾಶಮಾಡಲು ಬಯಸಿದ್ದ ಚೈನಾ 9/11 ರಲ್ಲಿ ಅಮೆರಿಕಾದ ಮೇಲೆ ಅಲ್ ಖೈದಾ ನಡೆಸಿದ ವೈಮಾನಿಕ ದಾಳಿಯ ನೆಪವನ್ನು ಇಟ್ಟುಕೊಂಡು ತನ್ನ ದಮನ ಕಾರ್ಯವನ್ನು ತೀವ್ರಗೊಳಿಸಿತು. ಗ್ಸಿ ಜಿನ್ಪಿಂಗ್ ಅಧಿಕಾರಕ್ಕೆ ಬಂದಮೇಲಂತು ಇಲ್ಲಿ ಚೈನಾದ ಹಿಡಿತ ಇನ್ನಷ್ಟು ಬಿಗಿಯಾಯಿತು. ಗ್ಸಿ ತನ್ನ ಅತ್ಯಂತ ನಂಬುಗೆಯ ಬಂಟ ಚೆನ್ ಫ್ರಾಂಕೋನನ್ನು ಈ ಭಾಗದ ಮೇಲ್ವಿಚಾರಣೆಗೆಂದೇ ನೇಮಿಸಿದನು. ಈ ಹಿಂದೆ ಟಿಬೆಟ್ ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಚೆನ್ ಅಲ್ಲಿ ನಡೆಸಿದ ಕ್ರೌರ್ಯವನ್ನೇ ಇಲ್ಲೂ ನಡೆಸಲು ಮುಂದಾಗಿ ಅದರಲ್ಲಿ ಯಶಸ್ವಿಯೂ ಆದ. ಇಂದು ಗ್ಸಿನ್ಜಿಯಾಂಗ್ ಎಂದು ಕರೆಯಲ್ಪಡುವ ಈ ಸ್ವಾಯತ್ತ ಭಾಗದಲ್ಲಿ ಉಯ್ಘರ್ ಮುಸ್ಲಿಮರ ಪ್ರತ್ಯೇಕವಾದಿ ಚಳುವಳಿ ತಾರಕಕ್ಕೇರಿದೆ. ಚೀನಾದ ದಬ್ಬಾಳಿಕೆಯ ಆಡಳಿತವನ್ನು ವಿರೋಧಿಸಿ ಇಲ್ಲಿನ ಮುಸ್ಲಿಮರು ಭಯೋತ್ಪಾದಕ ಕೃತ್ಯಗಳನ್ನು ನಡೆಸುವಲ್ಲಿಗೆ ಇದು ಬಂದು ನಿಂತಿದೆ.ಚೀನಾ ಇಲ್ಲಿನ ಜನರಿಗೆ ನೀಡುತ್ತಿರುವ ಕಿರುಕುಳಗಳು ಒಂದೆರಡಲ್ಲ. ಉಯ್ಘರ್ ಮುಸ್ಲಿಮರ ನೂರಾರು ವರ್ಷ ಹಳೆಯದಾದ ಮಸೀದಿಗಳನ್ನು ಬುಲ್ಡೋಜರ್ ನ ಸಹಾಯದಿಂದ ನೆಲಸಮಗೊಳಿಸಲಾಗುತ್ತಿದೆ. ಅಂದಾಜು ಒಂದು ಮಿಲಿಯನ್ ಗೂ ಹೆಚ್ಚು ಉಯ್ಘರ್ ಯುವಕರನ್ನು ಬ್ರೇನ್ ವಾಶ್ ಕ್ಯಾಂಪಿನಲ್ಲಿ‌ ಬಂಧಿಸಿಡಲಾಗಿದೆ. ಅನುಮಾನ ಬಂದವರನ್ನು ಬಲವಂತವಾಗಿ ಬಂಧಿಸಿ ರಹಸ್ಯವಾಗಿ ಹತ್ಯೆ ಮಾಡಲಾಗುತ್ತಿದೆ. ಮುಖಗಳನ್ನು ಗುರುತಿಸುವ ಸಿಸಿ ಕ್ಯಾಮರಾಗಳನ್ನು ರಸ್ತೆ ರಸ್ತೆಗೂ ಅಳವಡಿಸಿರುವ ಚೈನಾ ಪ್ರತಿಯೊಬ್ಬರ ಬಯೋಮೆಟ್ರಿಕ್ ಡಾಟಾಗಳನ್ನು ಸಂಗ್ರಹಿಸಿದೆ. ಪ್ರತ್ಯೇಕತೆಯ ಹೋರಾಟ ತೀವ್ರವಾಗುವ ಭಯದಿಂದ ಜಗತ್ತಿನಲ್ಲೇ ಅತ್ಯಂತ ಆಧುನಿಕವಾದ ರಕ್ಷಣಾ ತಾಂತ್ರಿಕತೆಗಳನ್ನು ಇಲ್ಲಿ ಅಳವಡಿಸಿದೆ. 11 ಮಿಲಿಯನ್ ಉಯ್ಘರ್ ಮುಸ್ಲಿಮರಿದ್ದ ಈ ಜಾಗದಲ್ಲಿ ಇಂದು ಚೈನೀಯರ ಬಲವಂತದ ವಲಸೆಯಿಂದ ಅರ್ಧದಷ್ಟು ಹಾನ್ ಚೈನೀಯರೇ ತುಂಬಿಕೊಂಡಿದ್ದಾರೆ. ಮಸೀದಿಗಳಲ್ಲಿ ಅಧ್ಯಕ್ಷನ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸುವ ಆದೇಶ ಜಾರಿಯಲ್ಲಿದೆ. ಗಡ್ಡಬಿಡುವುದು ಮತ್ತು ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಕುರಾನ್ ಮೇಲೆ ನಿರ್ಬಂಧ ಜಾರಿಯಲ್ಲಿದೆ. ಉಯ್ಘರ್ ಭಾಷೆಯನ್ನು ಶಾಲೆಗಳಲ್ಲಿ ಕಲಿಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಇಲ್ಲಿನ ಜನರು ಚೀನಾದ ಕಪಿಮುಷ್ಠಿಯಿಂದ ಹೊರಬರುವ ದಾರಿ ಕಾಯುತ್ತಿದ್ದಾರೆ. ಒಂದು ವೇಳೆ ಅಂತರಾಷ್ಟ್ರೀಯ ಸಮುದಾಯ ಇವರ ಕೂಗಿಗೆ ಸ್ಪಂದಿಸಿದರೆ, ಚೀನಾ ಒಡೆಯುವ ಲೆಕ್ಕಾಚಾರಗಳು ಪಕ್ಕಾ ಆದರೆ ಏಷ್ಯಾದ ಒಂದು ಸ್ವತಂತ್ರ ಮುಸ್ಲಿಮ್ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬರಲಿದೆ. ಒಂದು ವೇಳೆ ಇದು ಸಾಧ್ಯವಾದರೆ ಚೈನಾ ತನ್ನ ಸುತ್ತಲಿನ ಆರೇಳು ರಾಷ್ಟ್ರಗಳೊಡನೆ ರಸ್ತೆ ಸಂಪರ್ಕ ಕಳೆದುಕೊಳ್ಳಲಿದೆ. ಚೀನಾದ ಮಹತ್ವಾಕಾಂಕ್ಷೆಯ ಬಹುದೊಡ್ಡ ಯೋಜನೆ ಸಿಲ್ಕ್ ರೋಡ್ ನ ಕನಸು ನುಚ್ಚುನೂರಾಗಲಿದೆ. ಈಗಾಗಲೇ ಈ ಗ್ರಾಂಡ್ ಯೋಜನೆಗಾಗಿ ಚೈನಾ ಖರ್ಚು ಮಾಡಿರುವ ಹಣ ವಾಪಾಸ್ ಬರದೇ ಅದಕ್ಕೆ ಅಗುವ ನಷ್ಟ ಖಂಡಿತವಾಗಿ ಭರಿಸಲಾಗದ್ದು. ಖಾಸ್ ಗರ್ ನಿಂದ ಕಾರಾಕೋರಂ ಶ್ರೇಣಿಗಳ ನಡುವೆ ಲಡಾಕ್ ಮತ್ತು ಪಿಒಕೆ ಮೂಲಕ ಪಾಕಿಸ್ತಾನದ ಗ್ವಾದಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ಸಿಪೆಕ್ ಯೋಜನೆ ಹಳ್ಳ ಹಿಡಿಯಲಿದೆ.
  4. ಹಾಂಕಾಂಗ್ ಮತ್ತು ಮಕಾವು – ಹಾಂಗ್ ಕಾಂಗ್ ಎಂಬ ನಗರವು ಅನೇಕ ವರ್ಷಗಳ ಕಾಲ ಬ್ರಿಟೀಷರ ವಸಾಹತಾಗಿದ್ದು 1997 ರಲ್ಲಿ ಬ್ರಿಟಿಷರಿಂದ ಚೀನಾಕ್ಕೆ ಮರಳಿಸಲ್ಪಟ್ಟಿತು. ಅದೇ ರೀತಿ ಪೋರ್ಚುಗಲ್ ನ ವಸಾಹತಾಗಿದ್ದ ಮಕಾವು ನಗರವೂ ಸಹಾ 1999 ರಲ್ಲಿ ಪೋರ್ಚುಗಲ್ ನಿಂದ ಚೀನಾಕ್ಕೆ ಮರಳಿಸಲ್ಪಟ್ಟಿತು. ಆದರೆ ಬ್ರಿಟನ್ ಮತ್ತು ಪೋರ್ಚುಗಲ್ ಗಳು “ಒಂದು ದೇಶ ಎರಡು ವ್ಯವಸ್ಥೆ” ಎಂಬ ತರಹದ ಕೆಲವು ಷರತ್ತುಗಳನ್ನು ಮುಂದಿಟ್ಟು ಚೈನಾದೊಂದಿಗೆ 50 ವರ್ಷಗಳ ಅವಧಿಯ ಒಪ್ಪಂದವೇರ್ಪಡಿಸಿದ ನಂತರವೇ ತಮ್ಮ ವಸಾಹತುಗಳನ್ನು ಚೈನಾದ ಸುಪರ್ದಿಗೆ ಒಪ್ಪಿಸಿದ್ದು.

ಈ ಒಪ್ಪಂದಗಳಿಗೆ ಕಾರಣಗಳೂ ಇವೆ. ಚೈನಾ ಒಂದು ಕಮ್ಯುನಿಸ್ಟ್ ರಾಷ್ಟ್ರ. ಅಧ್ಯಕ್ಷ ಮತ್ತು ಪಕ್ಷದ ಸರ್ವಾಧಿಕಾರದಡಿಯಲ್ಲಿ ದೇಶ ನಡೆಯಬೇಕು. ಪತ್ರಿಕಾ ಸ್ವಾತಂತ್ರ್ಯವಾಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಇಲ್ಲಿ ಲಭ್ಯವಿಲ್ಲ. ಸರ್ಕಾರದ ವಿರುದ್ಧ ಮಾತನಾಡುವುದಿರಲಿ, ವಿರುದ್ಧ ಭಾವನೆ ಇರುವ ಸಣ್ಣ ಅನುಮಾನ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನೂರಾರು ವರ್ಷಗಳ ಕಾಲ ಬ್ರಿಟಿಷ್ ಮತ್ತು ಪೋರ್ಚುಗಲ್ ನ ವಸಾಹತಾಗಿ ಬದುಕಿದ ಈ ಸೋದರಿ ನಗರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದು ಸ್ವಾತಂತ್ರ್ಯವೇ ಪ್ರಧಾನವಾದ ಯೂರೋಪಿಯನ್ ಸಂಸ್ಕ್ರತಿ ಬೆಳೆದುನಿಂತಿದೆ. ಸಾಲದ್ದಕ್ಕೆ ಈ ಎರಡೂ ಚಿಕ್ಕ ನಗರಗಳು ವಿಶ್ವದ ಅತ್ಯಂತ ಶ್ರೀಮಂತ ನಗರಗಳಾಗಿ ಬೆಳೆದು ನಿಂತಿವೆ. ಮಕಾವು ಜಗತ್ತಿನ ಜೂಜಿನ ರಾಜಧಾನಿ ಎಂದೇ ಪ್ರಸಿದ್ಧವಾಗಿ ಅದರ ಮೂಲಕ ಅಪಾರ ಧನವನ್ನು ಸಂಪಾದಿಸುತ್ತಿದ್ದರೆ, ಹಾಂಗ್ ಕಾಂಗ್ ಪ್ರಪಂಚದ ಮೂರು ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ಮೂಲಕ ಸಂಪದ್ಭರಿತವಾಗಿದೆ. ದಕ್ಷಿಣ ಚೀನಾ ಸಮುದ್ರ ತೀರದಲ್ಲಿ ಇರುವ ಈ ಎರಡೂ ನಗರಗಳು ಇಂದು ಚೀನಾದೊಳಗೆ ವೈಚಾರಿಕ ಕ್ರಾಂತಿಯನ್ನು ಬಿತ್ತುವ ಸಾಧ್ಯತೆಗಳಿವೆ.

ಚೈನಾ ಈ ಎರಡೂ ನಗರಗಳಿಗೂ ನೀಡಿದ್ದ ಸ್ವಾತಂತ್ರ್ಯವನ್ನು ಕಡಿತಗೊಳಿಸುವ ಪ್ರಯತ್ನವನ್ನು ತೀವ್ರಗೊಳಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಂತ ಹಂತವಾಗಿ ಕಮ್ಯುನಿಸ್ಟ್ ವ್ಯವಸ್ಥೆಗೆ ಪರಿವರ್ತಿಸುವ ಈ ಯತ್ನ ಈ ನಗರಗಳ ನಿವಾಸಿಗಳಿಗೆ ಆತಂಕವನ್ನು ಹುಟ್ಟಿಸುತ್ತಿದೆ. ಇಷ್ಟು ದಿನ ಇದ್ದ ಸ್ವಾತಂತ್ರ ಇದ್ದಕ್ಕಿದ್ದಂತೆ ಮರೆಯಾಗುವುದಾದರೆ ಯಾರಿಗೆ ತಾನೆ ಕಷ್ಟವಾಗುವುದಿಲ್ಲ ಹೇಳಿ. ಹೀಗಾಗಿ ಈ ಎರಡೂ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದಕ್ಕೆ ಉತ್ತರವಾಗಿ ಚೈನಾ ಈ ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮಸೂದೆಯೊಂದನ್ನು ಪಾಸು ಮಾಡಿದೆ. ಇದರಿಂದ ಅಮೆರಿಕಾ ಸೇರಿದಂತೆ ಅನೇಕ ಪ್ರಜಾಪ್ರಭುತ್ವ ಪರ ರಾಷ್ಟ್ರಗಳು ಕೆರಳಿವೆ. ಇದು ಹೀಗೆ ಮುಂದುವರೆದು ಚೈನಾ ದುರ್ಬಲವಾದರೆ ಚೈನಾದ ಜನರೂ ಸಹಾ ಹಾಂಗ್ ಕಾಂಗ್ ಮಾದರಿಯ ಪ್ರಜಾಪ್ರಭುತ್ವ ಸರ್ಕಾರವನ್ನು ಅಪೇಕ್ಷಿಸಿ ಪ್ರತಿಭಟನೆಗೆ ಇಳಿಯಬಹುದು ಎಂಬ ಭಯ ಚೈನಾಕ್ಕಿದೆ. ಒಂದು ವೇಳೆ ಹಾಗಾದರೆ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು ಪ್ರಜಾಪ್ರಭುತ್ವ ಬರಲು ಈ ನಗರಗಳು ಕಾರಣವಾಗಲಿವೆ ಮತ್ತು ಜಗತ್ತಿಗೆ ಮುಖ್ಯವಾಗಿ ಅಮೆರಿಕಾಗೆ ಈ ಬದಲಾವಣೆ ತುರ್ತಾಗಿ ಬೇಕಾಗಿದೆ.

  1. ಮಂಚೂರಿಯಾ, ಇನ್ನರ್ ಮಂಗೋಲಿಯಾ, ಯುನಾನ್ ಮತ್ತಿತರ ಪ್ರತ್ಯೇಕವಾದೀ ಚಳುವಳಿಗಳು.

ಟಿಬೆಟ್, ಪೂರ್ವ ತುರ್ಕಿಸ್ತಾನದಂತೆಯೇ ಮಂಚೂರಿಯಾ ಮತ್ತು ಯುನಾನ್ ಹಾಗೇ ಮಂಗೋಲಿಯಾದ ಕೆಳಭಾಗಗಳನ್ನೂ ಚೀನಾ ಒತ್ತುವರಿ ಮಾಡಿಕೊಂಡಿದೆ. ಹೀಗಾಗಿ ಅಲ್ಲೂ ಸಹಾ ಸಣ್ಣಪುಟ್ಟ ಪ್ರತ್ಯೇಕವಾದಿ ಚಿಂತನೆಗಳು ಅಸ್ತಿತ್ವದಲ್ಲಿದೆ. ಚೀನಾದ ಹತ್ತಿಕ್ಕುವ ಸಾಮರ್ಥ್ಯದ ಕಾರಣ

ಈ ಮೇಲ್ಕಂಡ ಪ್ರತ್ಯೇಕತಾವಾದಿ ಚಳುವಳಿಗಳು ಅಷ್ಟೇನೂ ದೊಡ್ಡ ಪ್ರಮಾಣದ ಪ್ರಭಾವವನ್ನು ಇಂದಿನ ದಿನಗಳಲ್ಲಿ ಬೀರಲಾಗದಿದ್ದರೂ ಒಂದು ವೇಳೆ ಚೈನಾ ಪತನಗೊಂಡರೆ ಈ ಭಾಗಗಳೂ ಸಹಾ ಸ್ವತಂತ್ರ ರಾಷ್ಟ್ರಗಳಾಗುವ ಅಥವಾ ಬೇರೆ ರಾಷ್ಟ್ರಗಳ ತೆಕ್ಕೆಗೆ ಸೇರುವ ಸಾಧ್ಯತೆಗಳು ಇಲ್ಲದಿಲ್ಲ.

ಹೀಗೆ ಅಮೆರಿಕಾದ ಸೇನಾ ಸಹಾಯದಿಂದ ತೈವಾನ್, ಸನ್ನಿವೇಶದ ಲಾಭ ಪಡೆದು ಟಿಬೆಟ್ ಮತ್ತು ಪೂರ್ವ ತುರ್ಕಿಸ್ತಾನದ ಉಯ್ಘರ್ ಗಳು  ಸ್ವತಂತ್ರಗೊಳ್ಳಲು ಸಿದ್ಧವಾದರೆ, ಹಾಂಗ್ ಕಾಂಗ್ ಮತ್ತು ಮಕಾವು ನಗರಗಳು ಚೈನಾದೊಳಗೆ ಪ್ರಜಾಪ್ರಭುತ್ವವಾದಿ ಅಲೆಯನ್ನು ಎಬ್ಬಿಸಲು ಶಕ್ತವಾಗಿವೆ. ಇದರ ಮಧ್ಯದಲ್ಲಿ ಚೈನಾದ ಉಳಿದ ಕೆಲವು ಪ್ರಾಂತಗಳೂ ಸ್ವಾತಂತ್ರ್ಯಗೊಂಡರೆ ಅಥವಾ ನೆರೆ ರಾಷ್ಟ್ರಗಳೊಡನೆ ವಿಲೀನಗೊಂಡರೆ ಉಳಿಯುವ ಚೈನಾ ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆ ಎರಡರಲ್ಲೂ ಭಾರತಕ್ಕಿಂತಲೂ ಚಿಕ್ಕದಾಗಿರುತ್ತದೆ ಮತ್ತು ಸೊನ್ನೆ ಆಕೃತಿಯಲ್ಲಿರುತ್ತದೆ.


Get In Touch With Us info@kalpa.news Whatsapp: 9481252093

Tags: ChinaIndiaKannada News WebsiteLatest News KannadaNithyananda VivekavamshiTibetಚೀನಾನಿತ್ಯಾನಂದ ವಿವೇಕವಂಶಿ
Share200Tweet123Send
Previous Post

ಸದ್ದಿಲ್ಲದೇ ಸೇವೆಯ ಸಾಧನೆ ಮಾಡುತ್ತಿದೆ ‘ಸಾಧನಾ ಮಂಗಳೂರು’

Next Post

ಆಶಾಢದಲ್ಲಿ ಶುಭ ಕಾರ್ಯವೇಕೆ ನಿಷಿದ್ಧ? ನವದಂಪತಿಗಳಿಗೇಕೆ ವಿರಸ? ಇಲ್ಲಿದೆ ವೈಜ್ಞಾನಿಕ ಕಾರಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಆಷಾಢಮಾಸವೆಂದರೆ ವಿರಹಿಗಳ ಮಾಸವಲ್ಲ, ಭಕ್ತಿಯ ಸದವಕಾಶ

ಆಶಾಢದಲ್ಲಿ ಶುಭ ಕಾರ್ಯವೇಕೆ ನಿಷಿದ್ಧ? ನವದಂಪತಿಗಳಿಗೇಕೆ ವಿರಸ? ಇಲ್ಲಿದೆ ವೈಜ್ಞಾನಿಕ ಕಾರಣ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL