ಬಿಜಾಪುರ: ಇಡಿಯ ದೇಶವೇ ಎದೆ ಉಬ್ಬಿಸಿ ಹೆಮ್ಮೆಪಡುವಂತಹ ಕ್ಷಣಕ್ಕೆ ನಿನ್ನೆ ಭಾರತೀಯರು ಸಾಕ್ಷಿಯಾಗಿದ್ದು, ಫ್ರಾನ್ಸ್’ನಿಂದ ರಫೇಲ್ ಯುದ್ಧ ವಿಮಾನಗಳು ನಮ್ಮ ನೆಲಕ್ಕೆ ಬಂದಿಳಿದಿವೆ.
ನಿನ್ನೆ ಬಂದಿಳಿದ 5 ರಫೇಲ್ ಯುದ್ಧ ವಿಮಾನಗಳನ್ನು ಹಾರಿಸಿಕೊಂಡ ಬಂದವರಲ್ಲಿ ನಮ್ಮ ಬಿಜಾಪುರದ ವಿಂಗ್ ಕಮಾಂಡರ್ ಅರುಣ್ ಕುಮಾರ್ ಸಹ ಒಬ್ಬರು ಎಂಬುದು ಇಡಿಯ ರಾಜ್ಯವೇ ಹೆಮ್ಮೆ ಪಡುವಂತಹ ವಿಚಾರ.
ವಿಜಯಪುರ ಮೂಲಕ 35 ವರ್ಷದ ಅರುಣ್ ಕುಮಾರ್ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದು, 1995ರಿಂದ 2001ರ ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸೈನಿಕ ಶಾಲೆಯಲ್ಲಿನ ಇವರ ನೋಂದಣಿ ಸಂಖ್ಯೆ 2877 ಆಗಿತ್ತು ಎನ್ನಲಾಗಿದ್ದು, ಬಳಿಕ 2002ರಲ್ಲಿ ನ್ಯಾಷನಲ್ ಡಿಫೆನ್ಸ್ ಆರ್ಮಿಗೆ ಸೇರ್ಪಡೆಯಾಗಿ ಈಗ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ಅರುಣ್ ಕುಮಾರ್ ಅವರ ತಂದೆಯವರೂ ಸಹ ಭಾರತೀಯ ವಾಯುಸೇನೆಯಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದವರು.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಕ್ಕೆ ಮಾತನಾಡಿರುವ ಬಿಜಾಪುರ ಸೈನಿಕ ಶಾಲೆಯಲ್ಲಿಯೇ ಕಲಿತ ಕಲಬುರ್ಗಿಯ ಡಿಸಿಪಿ ಅವರು, ನಾವೆಲ್ಲರೂ ಅರುಣ್ ಕುಮಾರ್ ಬಗ್ಗೆ ಅತೀವ ಹೆಮ್ಮೆ ಪಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Discussion about this post