ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವ್ಯಾಪ್ತಿಯಲ್ಲಿ ಆಟೋ ಪ್ರಯಾಣ ದರವನ್ನು ಒಂದೂವರೆ ಕಿಮೀವರೆಗೂ 40 ರೂ. ನಿಗದಿ ಮಾಡಿ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪ್ರತಿ 1.5 ಕಿಲೋ ಮೀಟರ್’ವರೆಗೂ 40 ರೂ. ನಿಗದಿ ಮಾಡಲಾಗಿದೆ. 1.5 ಕಿಮೀ ನಂತರದ ಪ್ರತಿ ಕಿಮೀಗೆ 20 ರೂ.ನಂತೆ ದರ ವಿಧಿಸಬಹುದಾಗಿದೆ. ರಾತ್ರಿ 10 ಗಂಟೆಯಿಂದ ನಸುಕಿನ 5 ಗಂಟೆಯವರೆಗೂ ಒಂದೂವರೆ ಪಟ್ಟು(ಒನ್ ಅಂಡ್ ಹಾಫ್) ದರ ವಿಧಿಸಲು ಅವಕಾಶವಿದೆ.

ಇನ್ನು, ಆಟೋ ಚಾಲಕರು ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ದಂಡ ವಿಧಿಸಲಾಗುತ್ತದೆ. ರಜನಿ ಸ್ಟೈಲ್’ನಲ್ಲಿ ಸಮವಸ್ತ್ರ ಕೈಗೆ ಸಿಕ್ಕಿಸಿಕೊಂಡು ಆಟೋ ಚಲಾಯಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮೀಟರ್ ಅಳವಡಿಕೆಗೆ ಒಂದು ತಿಂಗಳು ಗಡುವು
ಆಟೋಗಳಿಗೆ ಮೀಟರ್ ಅಳವಡಿಕೆ ಹಾಗೂ ಪರಿಷ್ಕೃತ ದರ ಅಳವಡಿಸಿಕೊಳ್ಳಲು ಒಂದು ತಿಂಗಳು ಗಡುವ ನೀಡಲಾಗಿದ್ದು, ಅಷ್ಟರೊಳಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲದೇ, ಮೀಟರ್ ಹಾಕುವುದು ಕಡ್ಡಾಯವಾಗಿದ್ದು, ಇದಕ್ಕೆ ತಪ್ಪಿದಲ್ಲಿ ಪೊಲೀಸ್ ಇಲಾಖೆಯಿಂದ ಆಟೋ ಸೀಜ್ ಮಾಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post