ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಸಂಜೆ ಮನೆಗೆ ನುಗ್ಗಿ ಪುಟ್ಟ ಮಕ್ಕಳಿಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಜಾವೇದ್ ಎಂಬಾತನನ್ನು ಸಿಎಂ ಯೋಗಿ ಆದಿತ್ಯನಾಥ್ #Yogiadityanath ಸರ್ಕಾರ ಕೆಲವೇ ಗಂಟೆಗಳಲ್ಲಿ ಎನ್ ಕೌಂಟರ್ ಮಾಡಿದೆ.
ಉತ್ತರ ಪ್ರದೇಶದ #Uttarapradesh ಬದೌನ್ ಬಾಬಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಎನ್ ಕೌಂಟರ್ ಆದ ಆರೋಪಿಯನ್ನು ಜಾವೇದ್(22) ಎಂದು ಗುರುತಿಸಲಾಗಿದೆ.
ದಾಳಿ ನಡೆದಾಗ ಸಂತ್ರಸ್ತರಾದ ಆಯುಷ್ (12), ಅಹಾನ್ ಅಲಿಯಾಸ್ ಹನಿ (8), ಮತ್ತು ಯುವರಾಜ್ (10) ತಮ್ಮ ಮನೆಯಲ್ಲಿದ್ದರು. ಆಯುಷ್ ಮತ್ತು ಅಹಾನ್ ದುರಂತವಾಗಿ ಪ್ರಾಣ ಕಳೆದುಕೊಂಡರೆ, ಯುವರಾಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಬಾ ಕಾಲೋನಿಯಲ್ಲಿರುವ ಸಂತ್ರಸ್ತರ ನಿವಾಸದ ಸಮೀಪದಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿದ್ದ ಜಾವೇದ್ ಅವರ ತಂದೆ ವಿನೋದ್’ಗೆ ಪರಿಚಯವಿತ್ತು. ಮಂಗಳವಾರ ಸಂಜೆ, ಮನೆಯೊಳಗೆ ಬಂದ ಸಾಜೀದ್ ಚಹಾ ನೀಡುವಂತೆ ಮನವಿ ಮಾಡಿದ್ದಾನೆ. ಮನೆಯೊಡತಿ ಚಹಾ ಮಾಡಲು ತೆರಳುತ್ತಿದ್ದಂತೆಯೇ, ಟೆರೇಸ್’ಗೆ ಹೋದ ಸಾಜೀದ್, ಅಲ್ಲಿ ಆಟವಾಡುತ್ತಿದ್ದ ಆಯುಷ್(13), ಅಹಾನ್(7), ಮತ್ತು ಪಿಯೂಷ್(6) ಆಟವಾಡುತ್ತಿದ್ದರು.
ಇದ್ದಕ್ಕಿದ್ದಂತೆ ಆರೋಪಿಯು ಇಬ್ಬರು ಹಿರಿಯ ಸಹೋದರರ ಕತ್ತು ಸೀಳಲು ಮುಂದಾಗಿದ್ದಾನೆ. ಅತ್ತ ಇದನ್ನು ನೋಡಿ ಸ್ಥಳದಿಂದ ಓಡುವ ಮೊದಲು ಆರು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
11 ಮತ್ತು 6 ವರ್ಷದ ಇಬ್ಬರು ಸಹೋದರರ ಕತ್ತು ಸೀಳಿ ಕೊಲೆ ಮಾಡಿದರೆ ಇನ್ನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಮಕ್ಕಳ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ತಾಯಿ ಜೋರಾಗಿ ಕಿರುಚಾಡಿದಾಗ ಮನೆಯ ಬಳಿ ಹತ್ತಿರದ ನಿವಾಸಿಗಳು ಆಗಮಿಸಿದ್ದಾರೆ. ನಿವಾಸಿಗಳು ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಹತ್ಯೆ ಮಾಡಿದ ವಿಚಾರ ತಿಳಿದ ಸ್ಥಳೀಯರು ಸಾಜೀದ್ ಅಂಗಡಿಗೆ ಬೆಂಕಿ ಹಚ್ಚಿ ಆಕ್ರೋಶ ಪ್ರದರ್ಶಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಶಾಂತಿ ಕಾಪಾಡುವಂತೆ ಸ್ಥಳೀಯರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಕೆಲವೇ ಗಂಟೆಗಳಲ್ಲಿ ಎನ್’ಕೌಂಟರ್
ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಶೇಕಪುರ ಅರಣ್ಯ ಪ್ರದೇಶದಲ್ಲಿ ಆತನನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಜಾವೇದ್ ಪೊಲೀಸರ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಅನಿವಾರ್ಯವಾಗಿ ಎನ್’ಕೌಂಟರ್ #Encounter ಮಾಡಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post