ಕಲ್ಪ ಮೀಡಿಯಾ ಹೌಸ್ | ತಮಿಳುನಾಡು |
ಕಾಂಗ್ರೆಸ್, ಡಿಎಂಕೆ ಹಾಗೂ ಇಂಡಿ ಒಕ್ಕೂಟದ ಸದಸ್ಯರು ಹಿಂದೂ ಧರ್ಮ #Hindu ಹಾಗೂ ದೇವರನ್ನು ಅವಮಾನಿಸುವುದನ್ನು ಪ್ರೀತಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ #NarendraModi ವಾಗ್ದಾಳಿ ನಡೆಸಿದರು.
ಕೊಯಮತ್ತೂರಿನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, #RahulGandhi ಕಾಂಗ್ರೆಸ್ ಪಕ್ಷ, ಡಿಎಂಕೆ ಹಾಗೂ ಇಂಡಿ ಒಕ್ಕೂಟದ ಸದಸ್ಯರು ಬೇರೆ ಯಾವುದೇ ಧರ್ಮದ ವಿಚಾರದಲ್ಲಿ ವಿರೋಧವಾಗಿ ಮಾತನಾಡುವುದಿಲ್ಲ. ಆದರೆ, ಹಿಂದೂ ಧರ್ಮದ ವಿಚಾರದಲ್ಲಿ ಮಾತ್ರ ಅತ್ಯಂತ ಪ್ರೀತಿಯಿಂದ ಟೀಕಿಸುತ್ತಾರೆ ಎಂದು ಕಿಡಿ ಕಾರಿದರು.

ಇಂಡಿ ಒಕ್ಕೂಟವು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತದೆ. ಹಿಂದೂ ಧರ್ಮದ ವಿರುದ್ಧ ಪ್ರತಿ ಹೇಳಿಕೆಯನ್ನು ಚೆನ್ನಾಗಿ ಯೋಚಿಸಲಾಗಿದೆ. ಅವರು ಶಕ್ತಿಯನ್ನು ನಾಶಪಡಿಸುವುದಾಗಿ ಘೋಷಿಸುವ ಮೂಲಕ ತಮ್ಮ ದುರುದ್ದೇಶವನ್ನು ಪ್ರದರ್ಶಿಸಿದ್ದಾರೆ ಎಂದರು.
ನೂತನ ಸಂಸತ್ ಭವನ ಉದ್ಘಾಟನೆಗೆ ಈ ದೇಶದ ಸಾಧು ಸಂತರನ್ನು ಆಹ್ವಾನಿಸಿದರೆ, ನಮ್ಮ ನೆಲದ ಪವಿತ್ರ ಸೆಂಗೋಲ್ ಸ್ಥಾಪನೆ ಮಾಡುವುದನ್ನು ಅವರುಗಳು ವಿರೋಧಿಸಿದ್ದಾರೆ. ಇದರಲ್ಲೇ ಅವರ ನೀತಿಗಳು ತಿಳಿಯುತ್ತವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post