ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ/ಮೈಸೂರು |
ಭಾರತೀಯ ರೈಲ್ವೆ #IndianRailway ತನ್ನ 101 ಉದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ನೀಡಲು ನಿರ್ಧರಿಸಿದ್ದು, ಇದರಲ್ಲಿ ನೈಋತ್ಯ ರೈಲ್ವೆಯ #SWR ನಾಲ್ವರಿಗೆ ಈ ಗರಿ ಮೂಡಿದೆ.
ನೈಋತ್ಯ ರೈಲ್ವೆಯಿಂದ ಅವರ ಅತ್ಯುತ್ತಮ ಪ್ರಯತ್ನಗಳಿಗಾಗಿ ನಾಲ್ವರು ರೈಲ್ವೆ ಸಿಬ್ಬಂದಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನಾವಿನ್ಯತೆ, ರೈಲ್ವೆ ಆದಾಯವನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಸುಧಾರಿಸುವುದು, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸ್ಥಳೀಯ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವುದು ಮತ್ತು ರೈಲ್ವೆಯ ಜೀವ ಮತ್ತು ಆಸ್ತಿಯ ರಕ್ಷಣೆಯಲ್ಲಿ ಈ ಉದ್ಯೋಗಿಗಳ ಶ್ರಮಕ್ಕೆ ಪ್ರತಿಫಲಿಸಿದೆ ಎಂದು ನೈಋತ್ಯ ರೈಲ್ವೆ ಸಂತಸ ವ್ಯಕ್ತಪಡಿಸಿದೆ.
ಆಯ್ಕೆಯಾದ ನೌಕರರು ಮತ್ತು ಅಧಿಕಾರಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಡಿ.21ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಗೌರವಿಸಲಿದ್ದಾರೆ.
ಶಿವಾನಂದ ಟಿ (ಹೆಡ್ ಕಾನ್ಸ್ಟೇಬಲ್, ದಾವಣಗೆರೆ, ಮೈಸೂರು ವಿಭಾಗ):
07.07.2023 ರಂದು ದಾವಣಗೆರೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಕರ್ತವ್ಯದಲ್ಲಿದ್ದಾಗ, ರೈಲು ಸಂಖ್ಯೆ 12778 ಸಮೀಪಿಸುತ್ತಿದ್ದಂತೆ ವೃದ್ಧರೊಬ್ಬರು ಹಳಿಯ ಮೇಲೆ ಸಿಲುಕಿಕೊಂಡಿರುವುದನ್ನು ಗಮನಿಸಿದರು. ತ್ವರಿತವಾಗಿ ಕಾರ್ಯಪ್ರವೃತ್ತರಾಗಿ, ಟ್ರ್ಯಾಕ್’ಗೆ ಹಾರಿ ಅವರನ್ನು ರಕ್ಷಿಸಿ, ಸಂಭವನೀಯ ದುರಂತವನ್ನು ತಪ್ಪಿಸಿದರು. ಈ ಸಮಯೋಚಿತ ಕ್ರಮವು ವ್ಯಕ್ತಿಯ ಜೀವವನ್ನು ಉಳಿಸಿತು.
Also read: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ
ದಿನೇಶ್ ಎನ್ ಗೋಲೆರ್ನರ್ (ಟೆಕ್ನಿಷಿಯನ್, ಗ್ರೇಡ್ 1, ಡೀಸೆಲ್ ಲೋಕೋ ಶೆಡ್, ಹುಬ್ಬಳ್ಳಿ):
ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್’ನಲ್ಲಿ ಎಚ್’ಎಚ್’ಪಿ ಡೀಸೆಲ್ ಎಲೆಕ್ಟ್ರಿಕ್ ಲೋಕೋಮೋಟಿವ್ ಮಾಡ್ಯೂಲ್’ಗಳ ನಿರ್ಣಾಯಕ ಮಾರ್ಪಾಡುಗಳು ಮತ್ತು ದುರಸ್ತಿಯ ಮೂಲಕ, 5.94 ಕೋಟಿ ರೂ.ಗಳ ಗಮನಾರ್ಹ ಉಳಿತಾಯವನ್ನು ಸಾಧಿಸಲಾಗಿದೆ. ಇದು ಎಲೆಕ್ಟ್ರೋ-ಮೋಟಿವ್ ಡೀಸೆಲ್ ಇಂದ ಆಮದನ್ನು ತಪ್ಪಿಸುವ ಮೂಲಕ ವಿದೇಶಿ ವಿನಿಮಯ ವೆಚ್ಚವನ್ನು ಕಡಿಮೆ ಮಾಡಿದೆ.ರಾಜಾ(ಟೆಕ್ನಿಷಿಯನ್, ಗ್ರೇಡ್ 3, ಬೆಂಗಳೂರು ವಿಭಾಗ):
ಟ್ರಾನ್ಸ್’ಫಾರ್ಮರ್ ಫಿಲ್ಟರ್’ಗಳನ್ನು ಭದ್ರಪಡಿಸುವುದು, ಟ್ರ್ಯಾನ್ ಮೋಟಾರ್ ಫಿಲ್ಟರ್ ಕ್ಲೀನಿಂಗ್ ಅನ್ನು ಸುವ್ಯವಸ್ಥಿತಗೊಳಿಸುವುದು. ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಗ್ರಿಲ್ ಗಳನ್ನು ತಯಾರಿಸುವುದು ಸೇರಿದಂತೆ ವಂದೇ ಭಾರತ್ ಮತ್ತು ಮೆಮು ರೇಕ್’ಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸಲು ನವೀನ ಮಾರ್ಪಾಡುಗಳನ್ನು ಮಾಡಲಾಗಿದೆ. ಮೆಮು ರೇಕ್’ಗಳಲ್ಲಿನ ಲೋಕೋ ಪೈಲಟ್ ಸೀಟುಗಳನ್ನು ವರ್ಧಿತ ಆರಾಮ ಮತ್ತು ಕಡಿಮೆ ಆಯಾಸಕ್ಕಾಗಿ ಮರುವಿನ್ಯಾಸಗೊಳಿಸಲಾಯಿತು.
ಶ್ರೀಜಿತ್ ಜೆ.ಬಿ. (ಟ್ರ್ಯಾಕ್ ನಿರ್ವಹಣೆ-4, ಹುಬ್ಬಳ್ಳಿ ವಿಭಾಗ):
ಪಶ್ಚಿಮ ಘಟ್ಟದ ಕ್ಯಾಸಲ್ ರಾಕ್ ವಿಭಾಗದಲ್ಲಿ ಭೂಕುಸಿತ ಮತ್ತು ಅಹಿತಕರ ಘಟನೆಗಳ ಸಮಯದಲ್ಲಿ ಅನುಕರಣೀಯ ಕಠಿಣ ಪರಿಶ್ರಮ ಮತ್ತು ನಿರಂತರ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post