ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪಂಢರಪುರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಗೆ #Ashada Ekadashi Fair in Pandrapur ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಎರಡು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಇದರನ್ವಯ, ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲಾಗಿದೆ. ಈ ರೈಲು ಜುಲೈ 4 ರಿಂದ ಜುಲೈ 9, 2025 ರವರೆಗೆ ಕ್ಯಾಸಲ್ ರಾಕ್ ಮತ್ತು ಪಂಢರಪುರ ನಡುವೆ ಸಂಚರಿಸಲಿದೆ. ಕ್ಯಾಸಲ್ ರಾಕ್ನಿಂದ ವಿಜಯನಗರದವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತೃತ ಮಾರ್ಗದಲ್ಲಿ, ರೈಲು ಮೀರಜ್ಗೆ ಮಧ್ಯರಾತ್ರಿ 00:20ಕ್ಕೆ ಆಗಮಿಸಿ, 00:50ಕ್ಕೆ ಹೊರಟು, ಬೆಳಗಿನ ಜಾವ 03:00 ಕ್ಕೆ ಪಂಢರಪುರ ತಲುಪಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post