ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಯಾರಿವರು ಅನಂತ್?
ಮೆಕ್ನಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಅನಂತ್ ಅವರು, ಭಾರತೀಯ ರೈಲ್ವೆ #Indian Railway ಮೆಕ್ಯಾನಿಕಲ್ ಎಂಜಿನಿಯರ್’ಗಳ ಸೇವೆಯ 1989ರ ಬ್ಯಾಚ್ ಅಧಿಕಾರಿಯಾಗಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ವಿವಿಧ ಹುದ್ದೆಗಳಲ್ಲಿ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ.
ಆಗ್ನೇಯ ರೈಲ್ವೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅವರು, 2002 ರಿಂದ 2008 ರವರೆಗೆ ರೈಲ್ವೆ ಮಂಡಳಿಯಲ್ಲಿ ನಿರ್ದೇಶಕ (ಮಾನವಶಕ್ತಿ ಯೋಜನೆ) ಹುದ್ದೆಯನ್ನು ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
2012 ರಿಂದ 2017 ರವರೆಗೆ ಬನಾರಸ್ ಲೋಕೋಮೋಟಿವ್ ವರ್ಕ್ಸ್’ನಲ್ಲಿ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ, ಉತ್ಪಾದನೆ ಮತ್ತು ಆಧುನೀಕರಣ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
2017 ರಿಂದ ನವದೆಹಲಿಯ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರದಲ್ಲಿ ಕೋಚ್ ನಿರ್ವಹಣಾ ವ್ಯವಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಅವರು, ಭಾರತೀಯ ರೈಲ್ವೆಯ ವಿವಿಧ ಕಾರ್ಯಾಚರಣೆಗಳಿಗೆ ಅಗತ್ಯವಾದ ಮಿಷನ್-ಕ್ರಿಟಿಕಲ್ ಅಪ್ಲಿಕೇಶನ್ ಸಾಫ್ಟ್’ವೇರ್ ಅಭಿವೃದ್ಧಿ ಮತ್ತು ಅನುಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನಂತರ, ಆಗಸ್ಟ್ 2021ರಿಂದ ಅಕ್ಟೋಬರ್ 2023ರವರೆಗೆ ದಕ್ಷಿಣ ರೈಲ್ವೆಯ ಮಧುರೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಅವರು, ಕಾರ್ಯಾಚರಣಾ ದಕ್ಷತೆ ಮತ್ತು ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಅನೇಕ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದರು.
ಅವರು ನವದೆಹಲಿಯ ರೈಲ್ವೆ ಮಂಡಳಿಗೆ ಹೆಚ್ಚುವರಿ ಸದಸ್ಯ (ಇ ಎಚ್’ಎಂ) ಆಗಿ ವರ್ಗಾವಣೆಗೊಂಡಿರುವ ಎ.ಕೆ. ಜೈನ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post